ಆರೋಗ್ಯ

ಡ್ರ್ಯಾಗನ್‌ ಫ್ರೂಟ್ ಸಾವಿರ ಮಾತ್ರೆಗಳಿಗೆ ಸಮ ಯಾಕೆ ಗೋತ್ತೆ..?

Pinterest LinkedIn Tumblr

ಕಡು ಗುಲಾಬಿ ಬಣ್ಣದ ದಪ್ಪ ಸಿಪ್ಪೆಯಿರುವ ಡ್ರ್ಯಾಗನ್‌ ಹಣ್ಣಿನ ಸಿಪ್ಪೆ ತೆಗೆದು ಕತ್ತರಿಸಲು ಕೆಲವರಿಗೆ ತಿಳಿದೇ ಇಲ್ಲ. ಒಳಗಡೆ ಮೃದುವಾದ ತಿರುಳಿರುವ ಈ ಹಣ್ಣನ್ನು ಸುಲಭವಾಗಿ ಕತ್ತರಿಸಬಹುದು.

ಡ್ರ್ಯಾಗನ್‌ ಫ್ರೂಟ್‌ ಗಟ್ಟಿಯಾಗಿದ್ದರೆ ಅದು ಇನ್ನೂ ಹಣ್ಣಾಗಿಲ್ಲ ಎಂದು ಅರ್ಥ. ಸ್ವಲ್ಪ ಮೆತ್ತಗಿದ್ದರೆ ಹಣ್ಣಾಗಿದೆ ಎಂದು ಅರ್ಥ. ಈ ಹಣ್ಣು ತುಂಬಾ ಮೆತ್ತಗಾಗಿದ್ದರೆ ಅದರೊಳಗಿನ ತಿರುಳು ಅಷ್ಟೊಂದು ರುಚಿಕರವಾಗಿರುವುದಿಲ್ಲ.
ಕಪ್ಪು ಕಲೆಗಳಾಗಿರುವ, ಕಂದು ಚುಕ್ಕಿಗಳಿರುವ ಮತ್ತು ಒಣಗಿದ ಕೊಕ್ಕೆಗಳಿರುವ ಹಣ್ಣುಗಳನ್ನು ಖರೀದಿಸಬೇಡಿ.
ಹರಿತವಾದ ಚಾಕುವಿನಿಂದ ಈ ಹಣ್ಣನ್ನು ಉದ್ದಕ್ಕೆ ಕತ್ತರಿಸಿ ಎರಡು ಭಾಗ ಮಾಡಿ. ಬಳಿಕ ಅದರೊಳಗಿನ ಬಿಳಿ ತಿರುಳನ್ನು ಚಮಚದಿಂದ ತೆಗೆದು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ.
ಡ್ರ್ಯಾಗನ್‌ ಫ್ರೂಟ್‌ನ ಸಿಪ್ಪೆಯನ್ನು ಬಾಳೆಹಣ್ಣಿನ ಸಿಪ್ಪೆಯಂತೆ ಸುಲಿಯಲೂ ಸಾಧ್ಯವಿದೆ. ಆ ಹಣ್ಣನ್ನು ನೇರವಾಗಿ ಹಿಡಿದುಕೊಂಡು ಅದರ ಉದ್ದನೆಯ ಸಿಪ್ಪೆಯನ್ನು ಕೆಳಗೆ ಎಳೆಯಿರಿ.
ಇದೇ ರೀತಿ ಎಲ್ಲಾ ಸಿಪ್ಪೆಯನ್ನು ಸುಲಿದರೆ ಒಳಗಿರುವ ಬಿಳಿ ತಿರುಳು ಸಿಗುತ್ತದೆ. ಈ ತಿರುಳನ್ನು ನಿಮಗೆ ಬೇಕಾದಂತೆ ಕತ್ತರಿಸಿ ತಿನ್ನಿ.

ವಿಶೇಷತೆ ಏನು..?
ಕಡಿಮೆ ಕ್ಯಾಲೋರಿ ಹೊಂದಿರುವ ಈ ಹಣ್ಣು ಅನೇಕ ರೋಗಗಳಿಗೆ ರಾಮಬಾಣ. ಇದರಲ್ಲಿ ಹೆಚ್ಚಿನ ನಾರಿನಾಂಶ, ಪ್ರೋಟೀನ್ಸ್, ಲಿಯೋ ಕ್ಯಾಪಸ್, ವಿಟಮಿನ್-ಸಿ, ಕಾರ್ಟಿನ್ ಸೇರಿದಂತೆ, ಖನಿಜಾಂಶಗಳಾದ ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣಾಂಶ, ಪೋಟೋ ನ್ಯೂಟ್ರಿಯೆಂಟ್ಸ್, ಓಮೇಗಾ-3 ಮತ್ತು ಒಮೇಗಾ-6 ಫೇತ್ ಆಸಿಡ್ಸ್ ಅಂಶ ಇದೆ. ಹೀಗಾಗಿ ಇದರ ಒಂದು ಹಣ್ಣು ಸಾವಿರ ಮಾತ್ರೆಗಳಿಗೆ ಸಮ ಎಂದು ನಂಬಲಾಗಿದೆ.

ಡ್ರ್ಯಾಗನ್ ಫ್ರೂಟ್ ತಿನ್ನುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲ ಲಾಭವಿದೆ
ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.
ರಕ್ತ ಹೀನತೆ ದೂರ ಮಾಡುತ್ತದೆ.
ಜೀರ್ಣ ಶಕ್ತಿ ಹೆಚ್ಚಿಸುತ್ತದೆ.
ಕ್ಯಾನ್ಸರ್’ಗೆ ರಾಮಬಾಣ.
ಮಧುಮೇಹ ನಿಯಂತ್ರಣ, ಗರ್ಭಿಣಿಯರಿಗೆ ಹೆಚ್ಚಿನ ಪೌಷ್ಟಿಕಾಂಶ ಒದಗಿಸುತ್ತದೆ.
ವಿಟಮಿನ್ ಸಿ ಹಾಗೂ ಎ ಅಂಶಗಳು ಹೆಚ್ಚಿದ್ದು, ಮೆದುಳು ಚುರುಕುಗೊಳಿಸುತ್ತದೆ.
ಉಸಿರಾಟದ ತೊಂದರೆ ನಿವಾರಣೆ, ಮೂಳೆ, ಹಲ್ಲುಗಳನ್ನು ಬಲಿಷ್ಠಗೊಳಿಸುತ್ತದೆ.
ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ.
ಚರ್ಮದ ಕಾಂತಿಯನ್ನು ಹೆಚ್ಚಿಸುವುದಲ್ಲದೇ, ಬಿಳಿಯ ರಕ್ತಕಣಗಳನ್ನು ಹೆಚ್ಚಿಸುವ ಈ ಹಣ್ಣು, ಡೆಂಘೀ ಜ್ವರಕ್ಕೆ ಸಿದ್ಧ ಔಷಧ ಎಂದು ನಂಬಲಾಗಿದೆ.
ಡ್ರಾಗನ್ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ರ್ಟಾಲ್ ತೊಲಗುತ್ತದೆ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುತ್ತದೆ, ಅಧಿಕ ತೂಕ ಕಡಿಮೆ ಯಾಗುತ್ತದೆ.
ಮುಖ್ಯವಾಗಿ ಈ ಹಣ್ಣಿನಲ್ಲಿ ಒಮೇಗಾ 3, ಪ್ಯಾಟಿ ಆಸಿಡ್ ಗಳು ಹೃದಯದ ಆರೋಗ್ಯಕ್ಕೆ ಸಹಕರಿಸುತ್ತದೆ.
ಇನ್ನು ಡ್ರಾಗನ್ ಹಣ್ಣಿನಲ್ಲಿ ಫೈಬರ್ ಹೇರಳವಾಗಿರುತ್ತದೆ. ಇದು ಗ್ಯಾಸ್, ಅಸಿಡಿಟಿ, ಮಲಬದ್ದತೆಯನ್ನು ಕಡಿಮೆ ಮಾಡುತ್ತದೆ.
ರಕ್ತ ಸಂಚಲನ ಉತ್ತಮ ಗೊಳ್ಳುತ್ತದೆ, ರಕ್ತದೊತ್ತಡ ನಿಯಂತ್ರಣದಲ್ಲಿರಿತ್ತದೆ.
ಡ್ರಾಗನ್ ಹಣ್ಣಿನಲ್ಲಿ ವಿಟಮಿನ್-ಸಿ ಹೆಚ್ಚಾಗಿರುತ್ತದೆ.ಇದು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.
ಶ್ವಾಸಕೋಶ ಸಮಸ್ಯೆಗಳಿಂದ ಉಪಶಮನ ಕೂಡ ಪಡೆಯಬಹುದು.

Comments are closed.