ಕರ್ನಾಟಕ

ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಬರಹ; ಕೆಪಿಸಿಸಿಯ ಆನಂದ್ ಪ್ರಸಾದ್ ಬಂಧನ

Pinterest LinkedIn Tumblr


ಬೆಂಗಳೂರು(ಆ. 03): ಕೊರೋನಾ ವೈರಸ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಬಗ್ಗೆ ಆಕ್ಷೇಪಾರ್ಹವಾಗಿ ಬರೆದ ಕಾರಣಕ್ಕೆ ಕೆಪಿಸಿಸಿಯ ಸೋಷಿಯಲ್ ಮೀಡಿಯಾದ ಕಾರ್ಯದರ್ಶಿ ಆನಂದ್ ಪ್ರಸಾದ್ ಅವರನ್ನು ಬಂಧಿಸಲಾಗಿದೆ. ಕೆಆರ್ ಪುರಂನಲ್ಲಿರುವ ಅವರ ನಿವಾಸದಲ್ಲಿ ಆನಂದ್ ಪ್ರಸಾದ್ ಅವರನ್ನು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.

ಟ್ವಿಟ್ಟರ್​ನಲ್ಲಿ ಆರ್.ಜೆ. ನವೀದ್ ಎಂಬುವರು ಅಮಿತ್ ಷಾಗೆ ಕೊರೋನಾ ಪಾಸಿಟಿವ್ ಬಂದಿರುವ ಕುರಿತು ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಕೆಪಿಸಿಸಿ ಸೋಷಿಯಲ್ ಮೀಡಿಯಾ ಸೆಕ್ರೆಟರಿ ಆನಂದ್ ಪ್ರಸಾದ್ ಅವರು ಅಮಿತ್ ಷಾ ಬಗ್ಗೆ ಆಕ್ಷೇಪಾರ್ಹವಾಗಿ ಕಮೆಂಟ್ ಹಾಕಿದ್ದರು. ಈ ಸಂಬಂಧ ಆನಂದ್ ಪ್ರಸಾದ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಸಿಸಿ ಸೆಕ್ಷನ್ 505 (1)(b), 505(1) (C),153 ಅಡಿ ಎಫ್​ಐಆರ್ ದಾಖಲಾಗಿತ್ತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ನಿನ್ನೆ ದೃಢಪಟ್ಟಿದೆ. ಅವರನ್ನು ದೆಹಲಿಯ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಗುತ್ತಿದೆ.

Comments are closed.