ಆರೋಗ್ಯ

ವಾರಕ್ಕೆ ಎರಡು ದಿನ ಉಪ್ಪು ಹಾಕದೆ ಇರೋ ಹುರುಳಿ ಸಾರು ಸೇವನೆ ಆರೋಗ್ಯಕ್ಕೆ ಉತ್ತಮ

Pinterest LinkedIn Tumblr

ಮೂತ್ರಪಿಂಡದಲ್ಲಿ ಕಲ್ಲು ಅಥವಾ ಕಿಡ್ನಿ ಸ್ಟೋನ್ ನಲ್ಲಿ ಕಲ್ಲು ಈ ಸಮಸ್ಯೆಗೆ ನಾವು ತಿನ್ನುವ ಆಹಾರದಿಂದ ಇದನ್ನು ಗುಣ ಮಾಡಿಕೊಳ್ಳ ಬಹುದು. ಆದ್ರೆ ಕಿಡ್ನಿ ಸ್ಟೋನ್ ಇದಕ್ಕೆ ಸಾಕಷ್ಟು ಸಾಹಸ ಪಡುತ್ತೇವೆ ಇಲ್ಲ ಸಲ್ಲದ ಮಾತ್ರೆಗಳನ್ನ ನುಂಗಿ ಮತ್ತಷ್ಟು ಆರೋಗ್ಯ ಹದಗೆಡೆಸಿಕೊಳ್ಳುತ್ತೇವೆ. ಇದಕ್ಕಾಗಿ ನಾವು ಮನೆಯಲ್ಲಿ ಏನು ಮಾಡಬೇಕು, ಸಣ್ಣ ಗಾತ್ರದ ಕಿಡ್ನಿ ಸ್ಟೋನ್ ಇದ್ದರೆ ಯಾವ ರೀತಿಯಲ್ಲಿ ಅದನ್ನ ಕರಗಿಸಬೇಕು ಎಂಬುದನ್ನು ಈ ಲೇಖನದಲ್ಲಿ ನಾನು ನಿಮಗೆ ತಿಳಿಸುತ್ತೇನೆ. ಮೂತ್ರಪಿಂಡದಲ್ಲಿ ಕಲ್ಲುಗಳು ಉತ್ಪತ್ತಿ ಆಗಲು ಮುಖ್ಯ ಕಾರಣ ಅಂದ್ರೆ ದೇಹದಲ್ಲಿರುವ ಕಲ್ಮಶ ಲವಣಗಳು ಕಲ್ಲಿನಂತಾಗಿ ಅದು ಮೂತ್ರ ಪಿಂಡ ಅಂದ್ರೆ ಕಿಡ್ನಿ ಒಳಗೆ ಸೇರುತ್ತಾ ಹೋಗುತ್ತದೆ.

ಮೊದಲನೆದಾಗಿ ನಿಮ್ಮ ಆಹಾರದಲ್ಲಿ ವಾರಕ್ಕೆ ಎರಡು ದಿನ ಆದರೂ ಸಹ ಹುರುಳಿ ಕಷಾಯ ಮಾಡಿ ಸೇವಿಸಿ ಇಲ್ಲ ಅಂದ್ರೆ ಉಪ್ಪು ಹಾಕದೆ ಇರೋ ಹುರುಳಿ ಸಾರು ಸೇವನೆ ಮಾಡಿ. ಎರಡನೇ ಮದ್ದು ಅಂದ್ರೆ ಹುರಿದ ರಾಗಿ ಹಿಟ್ಟು 100 ಗ್ರಾಮ್ ಅದಕ್ಕೆ ಒಂದಿಷ್ಟು ಜೇನು ಬೆರೆಸಿ ಚೆನ್ನಾಗಿ ಕಲಿಸಿ. ನಂತರ ಸ್ವಲ್ಪ ಮಟ್ಟಿಗೆ ಶುದ್ಧ ಎಮ್ಮೆ ಹಾಲು ಬೆರೆಸಿ ವಾರಕ್ಕೆ ಎರಡು ದಿನ ತಿನ್ನುವ ಅಭ್ಯಾಸ ಇಟ್ಟುಕೊಂಡರೆ ನಿಮಗೆ ಈ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಬರೋದಿಲ್ಲ ಅಕಸ್ಮಾತ್ ನಿಮಗೆ ಗೊತ್ತಿಲ್ಲದೆ ಸಣ್ಣ ಗಾತ್ರದ ಕಲ್ಲುಗಳು ಇದ್ದರು ಅವುಗಳು ಬೇಗ ಕರಗಿ ಹೋಗುತ್ತದೆ.

ಮತ್ತೊಂದು ಸುಲಭದ ವಿಧಾನ ಏನು ಅಂದೆರೆ ಗ್ರಂಧಗಿ ಅಂಗಡಿಯಲ್ಲಿ ಸಿಗುವ ಕಾಮ ಕಸ್ತೂರಿ ಬೀಜ ತನ್ನಿ ಅದು ನೀರಿನಲ್ಲಿ ಚೆನ್ನಾಗಿ ನೆನೆದು ಹಾಕಿರಿ, ಇದಕ್ಕೆ 15 ಗ್ರಾಮ್ ಜೀರಿಗೆ ಬೆರಸಿ ಮತ್ತು ಸ್ವಲ್ಪವೇ ಸ್ವಲ್ಪ ಸಕ್ಕರೆ ಬೆರಕೆ ಮಾಡಿ 2ಎರಡು ವಾರ ಸೇವನೆ ಮಾಡಬೇಕು. ಹೀಗೆ ತಪ್ಪದೆ ಬೆಳ್ಳಗೆ ಸಮಯ ಸೇವನೆ ಮಾಡಿದ್ರೆ ಸಣ್ಣ ಗಾತ್ರದ ಕಿಡ್ನಿ ಕಲ್ಲು ನಿಮಗೆ ಗೊತ್ತಿಲ್ಲದ ಹಾಗೆಯೇ ಮೂತ್ರದಿಂದ ಹೊರ ಹೋಗುತ್ತದೆ.

ಮತ್ತೊಂದು ವಿಧಾನ ಏನು ಅಂದ್ರೇ ಬಿಲ್ವ ಪತ್ರೆಯ ಎಲೆಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಮಜ್ಜಿಗೆಯಲ್ಲಿ ಕದಡಿ ನಂತರ ಮದ್ಯಾನ್ಹ ಊಟದ ನಂತರ 20 ಎಮ್.ಎಲ್ ಸೇವನೆ ಎರಡು ವಾರಗಳ ಕಾಲ ಮಾಡಿದ್ದೆ ಆದಲ್ಲಿ ಸಣ್ಣ ಗಾತ್ರದ ಕಿಡ್ನಿ ಸ್ಟೋನ್ ಖಂಡಿತ ನಿವಾರಣೆ ಆಗಲಿದೆ. ಆದ್ರೆ ನಿಮ್ಮ ಸ್ಕ್ಯಾನಿಂಗ್ ಪ್ರಕಾರ ದೊಡ್ಡ ಗಾತ್ರದ ಕಲ್ಲುಗಳು ಇದ್ದಲ್ಲಿ ನೀವು ವೈದ್ಯರು ನೀಡಿರುವ ಮಾತ್ರೆಗಳ ಸೇವನೆ ಜೊತೆಗೆ ಇದನ್ನು ಸಹ ನಿಮ್ಮ ವೈದ್ಯರಿಗೆ ತಿಳಿಸಿ ಈ ಅಭ್ಯಾಸ ಸಹ ಮಾಡಿಕೊಳ್ಳಬಹುದು,

ಕೆಲವು ನಮ್ಮಲ್ಲಿ ಹೇಳುತ್ತಾರೆ ಬರೀ ನೀರು ಕುಡಿದು ಕಿಡ್ನಿ ಸ್ಟೋನ್ ದೂರ ಆಗಲಿದೆ ಎಂದು ಆದ್ರೆ ಅದು ಒಂದೇ ಪರಿಹಾರ ಅಲ್ಲ ಸಾಕಷ್ಟು ವೇಗವಾಗಿ ಕೆಲಸ ಮಾಡುವ ಮನೆ ಮದ್ದುಗಳು ಸಹ ಮೇಲೆ ಹೇಳಿದ್ದೇವೆ ಅದೆಲ್ಲವೂ ಉತ್ತಮವಾಗಿದೆ ನಿಮಗೆ ಸರಿ ಅನ್ಸಿದ್ದು ವೈದ್ಯರ ಸೂಚನೆ ಪಡೆದುಕೊಂಡೆ ಒಮ್ಮೆ ಪ್ರಯತ್ನ ಮಾಡಿರಿ ಖಂಡಿತ ನಿಮಗೆ ಒಳ್ಳೆಯ ಫಲಿತಾಂಶ ದೊರೆಯಲಿದೆ.

Comments are closed.