ಆರೋಗ್ಯ

ಸುಕೋಮಲವಾದ ತ್ವಚೆ ಪಡೆಯಲು ತೆಂಗಿನ ಹಾಲಿನ ಬಳಕೆ ಉತ್ತಮ

Pinterest LinkedIn Tumblr

ತೆಂಗಿನ ಹಾಲನ್ನು ತೆಗೆದು ಸ್ವೀಟ್ ಇನ್ನಿತರ ತಿಂಡಿಗಳನ್ನು ಮಾಡಲು ಬಳಕೆ ಮಾಡುತ್ತೇವೆ. ಆದರೆ ಇದರಿಂದ ಸೌಂದರ್ಯಕ್ಕೆ ಎಷ್ಟೊಂದು ಸಹಾಯವಿದೆ ಗೊತ್ತಾ? ಹಾಲಿನಂತಹ ಮೃದುವಾದ, ಸುಕೋಮಲವಾದ ತ್ವಚೆ ಪಡೆಯಲು ತೆಂಗಿನ ಹಾಲಿನ ಬಳಕೆ ಉತ್ತಮ
.
ತೆಂಗಿನ ಹಾಲು, ಒಂದು ಚಿಟಿಕೆ ಕಸ್ತೂರಿ, ಒಂದು ಚಮಚ ಜೇನು ಮತ್ತು ಒಂದು ಚಮಚ ಚಂದನ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿ ೧೫ ನಿಮಿಷ ಬಿಟ್ಟು ಕ್ಲೀನ್ ಮಾಡಿ. ಇದರಿಂದ ಸುಂದರವಾಗಿ ಬಿಳುಪಾದ ತ್ವಚೆ ನಿಮ್ಮದಾಗುತ್ತದೆ.

ನೆರಿಗೆ, ಸೂಕ್ಷ್ಮ ಗೆರೆಗಳು, ಚುಕ್ಕೆಗಳು ಮೊದಲಾದ ಸಮಸ್ಯೆಗಳು ಕಾಣಿಸಿಕೊಂಡರೆ ವಯಸ್ಸಾಯ್ತು ಎಂದು ತಿಳಿಯುತ್ತದೆ. ಇದನ್ನು ನಿವಾರಿಸಲು ತೆಂಗಿನ ಹಾಲು ಅತ್ಯುತ್ತಮವಾಗಿದೆ. ತೆಂಗಿನ ಹಾಲಿನ ಮಸಾಜ್ ಮಾಡಿದರೆ ಸಮಸ್ಯೆಗಳೆಲ್ಲಾ ಮಾಯವಾಗುತ್ತವೆ.

ರಾತ್ರಿ ಮಲಗುವ ಮುನ್ನ ತಣ್ಣೀರಿನಿಂದ ಮುಖ ತೊಳೆದು ತೆಂಗಿನ ಹಾಲಿನಲ್ಲಿ ಮುಳುಗಿಸಿದ ಹತ್ತಿಯುಂಡೆಯನ್ನು ಒರೆಸಿಕೊಳ್ಳಿ. ಬೆಳಿಗ್ಗೆದ್ದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.

ತೆಂಗಿನ ಹಾಲಿಗೆ , ಅದರ ಅರ್ಧದಷ್ಟು ಗುಲಾಬಿ ರಸವನ್ನು ಸೇರಿಸಿ. ಒಂದು ಬಾಟಲ್ ನಲ್ಲಿ ಈ ಮಿಶ್ರಣವನ್ನು ಹಾಕಿ ಪ್ರಿಡ್ಜ್ ನಲ್ಲಿಡಿ. ಬಿಸಿಲಿನಲ್ಲಿ ಹೊರಗಡೆ ಹೋಗಿ ಬಂದಾಗ ಸನ್ ಬರ್ನ್ ಉಂಟಾಗುತ್ತದೆ. ಆ ಸಮಯದಲ್ಲಿ ಇದನ್ನು ಮುಖಕ್ಕೆ ಹಚ್ಚಿ.

ತೆಂಗಿನ ಹಾಲು ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ. ಅದಕ್ಕೆ ಎರಡು ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ರಿಂದ 20 ನಿಮಿಷ ಮಸಾಜ್ ಮಾಡಿ. ಇದರಿಂದ ತ್ವಚೆಗೆ ಮಾಯಿಶ್ಚರೈಸ್ ಆಗುತ್ತದೆ.

Comments are closed.