ಆರೋಗ್ಯ

ಕೋವಿಡ್-19 ಮೃತದೇಹಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಮಾರ್ಗಸೂಚಿ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನೇ-ದಿನೇ ಹೆಚ್ಚುತ್ತಿರುವುದರಿಂದ ಕೋವಿಡ್-19 ಪ್ರಕರಣದಿಂದ ಮರಣಗಳ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಮೃತ ದೇಹಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

(ಸಾಂದರ್ಭಿಕ ಚಿತ್ರ)

ಸಂಪರ್ಕ ಅಧಿಕಾರಿ
ಸಂಬಂಧ ಪಟ್ಟ ಮೃತದೇಹದ ವಿಳಾಸದ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಂಪರ್ಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ. ಸಂಬಂಧಪಟ್ಟ ತಹಶೀಲ್ದಾರರೊಂದಿಗೆ ಸಂವಹನ ನಡೆಸಿ ಆಡಳಿತಾತ್ಮಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಮನ್ವಯ ಸಾಧಿಸುವುದು. ಮೃತದೇಹದ ಸಾಗಾಟ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಯವರು(ಸಂಬಂಧ ಪಟ್ಟ ತಾಲೂಕು ವೈದ್ಯಾಧಿಕಾರಿಗಳು ನಿರ್ವಹಿಸುವುದು.
ಅಂತ್ಯಸಂಸ್ಕಾರದ ವಿಧಿಗಳು ನಡೆಯುವಾಗ ಖುದ್ದು ಹಾಜರಾಗಿ ಮೃತದೇಹ ನಿರ್ವಹಣೆಯ ಮಾರ್ಗಸೂಚಿಗಳು ಪಾಲನೆ ಆಗಿರುವುದನ್ನು ಖಚಿತಪಡಿಸಿಕೊಂಡು, ಅಂತ್ಯಸಂಸ್ಕಾರದ ವಿಧಿಗಳನ್ನು ಚಿತ್ರೀಕರಿಸುವ ಮೂಲಕ ದಾಖಲೆಗಳನ್ನು ಇಟ್ಟುಕೊಳ್ಳತಕ್ಕದ್ದು. ಜಿಲ್ಲಾ ಮೃತದೇಹ ನಿರ್ವಹಣಾ ತಂಡದವರಿಗೆ ಮಾಹಿತಿ ನೀಡಿ ಸೂಚನೆ ಪಡೆಯುವುದು. ಕೋವಿಡ್-19 ಡೆತ್ ಆಡಿಟ್ ಸಮಿತಿಗೆ ಸೂಕ್ತ ಮಾಹಿತಿ ನೀಡುವುದು.

ಸ್ಮಶಾನದ ವ್ಯವಸ್ಥೆ
ಗ್ರಾಮೀಣ ಪ್ರದೇಶದಲ್ಲಿ ಮೃತದೇಹದ ವಿಳಾಸ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ/ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಮೃತದೇಹ ವಿಲೇವಾರಿ ಮಾಡುವ ಜವಾಬ್ದಾರಿಯುತ ಅಧಿಕಾರಿಯಾಗಿರುತ್ತಾರೆ. ಹಾಗೆಯೇ ನಗರಗಳಲ್ಲಿ ಮೃತದೇಹಗಳ ವಿಲೇವಾರಿ ಮಾಡಲು ನಗರ ಸಭೆಯ ಆಯುಕ್ತರು /ಮುಖ್ಯಾಧಿಕಾರಿ ಪುರಸಭೆಗಳು /ಪಟ್ಟನ ಪಂಚಾಯತ್ ಮೃತದೇಹ ವಿಲೇವಾರಿ ಮಾಡುವ ಜವಾಬ್ದಾರಿಯುತ ಅಧಿಕಾರಿಯಾಗಿರುತ್ತಾರೆ. ಮೃತದೇಹದ ವಿಲೇವಾರಿ ಬಗ್ಗೆ ಸ್ಮಶಾನದಲ್ಲಿ ಎಲ್ಲಾ ರೀತಿಯ ಅವಶ್ಯಕ ಸೌಲಭ್ಯಗಳ ಬಗ್ಗೆ ಎಲ್ಲಾ ಪಂಚಾಯತ್ ಆಡಳಿತ ಅಧಿಕಾರಿಗಳು/ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ನಗರ ಸಭೆಯ ಆಯುಕ್ತರು/ಮುಖ್ಯಾಧಿಕಾರಿ ಪುರಸಭೆಗಳು/ಪಟ್ಟಣ ಪಂಚಾಯತ್ ಅಧಿಕಾರಿಗಳು ಮುಂಚಿತವಾಗಿ ಪರೀಶಿಲಿಸಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು. ಹೊರಜಿಲ್ಲೆಯ ಪ್ರಕರಣವಾಗಿದ್ದ ಮೃತದೇಹವಾಗಿದ್ದಲ್ಲಿ ಮೃತದೇಹ ಇರುವ ಸ್ಥಳದ ಅಧಿಕಾರಿಗಳು ಜವಾಬ್ದಾರಿಯುತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಮೃತರ ಸಂಬಂಧಿಕರೊಂದಿಗೆ ಸಂವಹನ ನಡೆಸಿ ಅಂತ್ಯಸಂಸ್ಕಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು. ಅಂತ್ಯಸಂಸ್ಕಾರ ಸಂಬಂಧಿಕರು ಸಮ್ಮತಿಸದಿದ್ದರೇ ಮಾನವ ಸಂಪನ್ಮೂಲ ಹಾಗೂ ಇತರ ವ್ಯವಸ್ಥೆ ಮಾಡುವುದು. ಅಂತಹ ಸಂದರ್ಭಗಳಲ್ಲಿ ತಂಡವನ್ನು ಮೊದಲೇ ತಯಾರು ಮಾಡಿ ಅವರಿಗೆ ತರಬೇತಿ ನೀಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದು.

ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರರ ಕರ್ತವ್ಯ
ಸಂಬಂಧಪಟ್ಟ ತಹಶೀಲ್ದಾರರು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವುದು.

ಪೊಲೀಸ್ ಇಲಾಖೆ
ಶವಸಂಸ್ಕಾರಕ್ಕೆ ಅಗತ್ಯ ಪೊಲೀಸ್ ಬಂದೋಬಸ್ತ್ ನೀಡಿ, ಜವಾಬ್ದಾರಿಯುತ ಅಧಿಕಾರಿಗಳು, ಸಂಪರ್ಕ ಅಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಬಂದೋಬಸ್ತ್ ಕ್ರಮ ಜರುಗಿಸಿ ಕೋವಿಡ್-19 ಮೃತದೇಹಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಯಾವುದೇ ವಿಳಂಬ, ನ್ಯೂನತೆಗಳು ಬಾರದಂತೆ ಕಟ್ಟಿನಿಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.

Comments are closed.