ಕರಾವಳಿ

ದ.ಕ.ಜಿಲ್ಲೆಯಲ್ಲಿ 8 ಮಂದಿ ಕೊರೋನಾಗೆ ಬಲಿ : ಶತಕ ದಾಟಿದ ಮೃತರ ಸಂಖ್ಯೆ- 107ಕ್ಕೆ ಏರಿಕೆ

Pinterest LinkedIn Tumblr

ಮಂಗಳೂರು, ಜುಲೈ.25 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ‌ ಕೊರೋನಾ ಸೋಂಕಿಗೆ ಬರೋಬ್ಬರಿ‌ 8 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನದಿಂದ ಮೃತಪಟ್ಟವರ ಸಂಖ್ಯೆ ಶತಕ ದಾಟಿದ್ದು, 107 ಮಂದಿ ಬಲಿಯಾದಂತಾಗಿದೆ.

ಮಂಗಳೂರು ನಿವಾಸಿ 44 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ಮೃತರು ಜುಲೈ 19ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 22ರಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರಲ್ಲಿ ಸೋಂಕು ಇರುವುದು ಇದೀಗ ದೃಢಪಟ್ಟಿದೆ. ಸೋಂಕಿಗೆ ಮಂಗಳೂರು ಮೂಲದ 56 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಜುಲೈ 18ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಜುಲೈ 23ರಂದು ಮೃತಪಟ್ಟಿದ್ದಾರೆ.

ಮಂಗಳೂರಿನ 67 ವರ್ಷದ ವ್ಯಕ್ತಿ ಬಲಿಯಾಗಿದ್ದಾರೆ. ಜುಲೈ 13ರಂದು ಚಿಕಿತ್ಸೆಗಾಗಿ ದಾಖಲಾಗಿದ್ದರು. ಜುಲೈ 23ರಂದು ಅವರು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ. ನ್ಯೂಮೋನಿಯಾ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಅವರು ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಬಂಟ್ವಾಳದ 42 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜುಲೈ 20ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 23ಕ್ಕೆ ಅವರು ನಿಧನಹೊಂದಿರುವ ಬಗ್ಗೆ ಮಾಹಿತಿ ಲಭಿಸಿದೆ. ಶಿವಮೊಗ್ಗ ಮೂಲದ 67 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅವರು ಜುಲೈ 23ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ.

ಮಂಗಳೂರಿನ 75 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಜುಲೈ 17ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 23ರಂದು ಅವರು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಂಗಳೂರು ನಿವಾಸಿ 65 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಜುಲೈ 13ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 23ರಂದು ಅವರು ನಿಧನ ಹೊಂದಿದ್ದಾರೆ. ಅವರು ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಪುತ್ತೂರು ನಿವಾಸಿ 61 ವರ್ಷದ ಮಹಿಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಅವರು ಜುಲೈ 21ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದುಬಂದಿದೆ. ಅನಾರೋಗ್ಯದ ಕಾರಣದಿಂದ ಜುಲೈ 23ರಂದು ಮೃತಪಟ್ಟಿದ್ದು, ಅವರಲ್ಲಿ ಸೋಂಕು ಪತ್ತೆಯಾಗಿದೆ.

ಶುಕ್ರವಾರದ ಪ್ರಮುಖ ಅಂಶಗಳು :

ದಕ್ಷಿಣ ಕನ್ನಡ ಜಿಲ್ಲೆ ಕೊರೋನಾ ಸಾವಿನ ಸಂಖ್ಯೆ ಮತ್ತೆ ಏರಿಕೆ

ಕೊರೋನಾದಿಂದ ಶುಕ್ರವಾರ ಮತ್ತೆ ಎಂಟು ಮಂದಿ ಸಾವು

ಮಂಗಳೂರು ನಿವಾಸಿ 44 ಹಾಗೂ 56 ವರ್ಷದ ಇಬ್ಬರು ಪುರುಷರು

ಮಂಗಳೂರು ಮೂಲದ 65 ಹಾಗೂ 75 ವರ್ಷದ ಇಬ್ಬರು ವೃದ್ಧೆಯರು

ಭದ್ರಾವತಿ ಮೂಲದ ಇಬ್ಬರೂ 67 ವರ್ಷದ ಪುರುಷರು

ಬಂಟ್ವಾಳ ಮೂಲದ 42 ವರ್ಷದ ವ್ಯಕ್ತಿ

ಪುತ್ತೂರು ಮೂಲದ 61 ವರ್ಷದ ಮಹಿಳೆ ಸಾವು

ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದ ಮೃತರು

ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ಒಟ್ಟು 107ಕ್ಕೇರಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 180 ಪಾಸಿಟಿವ್ ಪ್ರಕರಣ ಪತ್ತೆ

ದ.ಕ‌ ಜಿಲೆಯಲ್ಲಿ ಒಟ್ಟು 4,394 ಪಾಸಿಟಿವ್ ಕೇಸ್ ಗಳು.

Comments are closed.