ರಾಷ್ಟ್ರೀಯ

ಏರುತ್ತಲಿದೆ ಚಿನ್ನದ ಬೆಲೆ ! ಚಿನ್ನ ಮತ್ತು ಬೆಳ್ಳಿ ದರಗಳು ಎಷ್ಟಿದೆ ನೋಡಿ…

Pinterest LinkedIn Tumblr

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇವತ್ತು ತುಸು ಏರಿಕೆಯಾಗಿದೆ. ನಿನ್ನೆಗಿಂತ ಚಿನ್ನ ಇವತ್ತು ಗ್ರಾಮ್​ಗೆ 1 ರೂಪಾಯಿ ದುಬಾರಿಯಾಗಿದೆ. ಬೆಳ್ಳಿ ಬೆಲೆ ಕೂಡ 100 ಗ್ರಾಮ್​ಗೆ 10 ರೂಪಾಯಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇವತ್ತಿನ ದರಗಳ ಪ್ರಕಾರ, 22 ಕೆರೆಟ್​ನ ಆಭರಣ ಚಿನ್ನದ ಬೆಲೆ 1 ಗ್ರಾಮ್​ಗೆ 4,811 ರೂ ಇದೆ. ನಿನ್ನೆಗಿಂತ 1 ರೂ ಹೆಚ್ಚಳವಾಗಿದೆ. 24 ಕೆರೆಟ್​ನ 1 ಗ್ರಾಮ್ ಅಪರಂಜಿ ಚಿನ್ನದ ಬೆಲೆ 5,248 ರೂ ಆಗಿದೆ.

ಇನ್ನು, 10 ಗ್ರಾಮ್ ಗ್ರಾಮ್ ಬೆಳ್ಳಿ ಬೆಲೆ 10 ಪೈಸೆ ಹೆಚ್ಚಳವಾಗಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಇವತ್ತಿನ ಬೆಳ್ಳಿ ಬೆಲೆ 10 ಗ್ರಾಮ್​ಗೆ 610.60 ಇದೆ.

ಕಳೆದ 10 ದಿನಗಳಲ್ಲಿ 1 ಗ್ರಾಮ್ ಆಭರಣ ಚಿನ್ನದ ಬೆಲೆ 161 ರೂಪಾಯಿ ಏರಿಕೆಯಾಗಿದೆ. ಇನ್ನು ಅಪರಂಜಿ ಚಿನ್ನದ ಬೆಲೆ 178 ರೂಪಾಯಿ ಏರಿಕೆಯಾಗಿದೆ. ಇದೇ ವೇಳೆ, 10 ಗ್ರಾಮ್ ಬೆಳ್ಳಿ ಬೆಲೆ ಕಳೆದ 10 ದಿನಗಳಲ್ಲಿ 82.60 ರೂ ದುಬಾರಿಯಾಗಿದೆ.

ಬೆಂಗಳೂರಿನಲ್ಲಿ ಜುಲೈ 25ರ ಚಿನ್ನ ಮತ್ತು ಬೆಳ್ಳಿ ದರ:
ಆಭರಣ ಚಿನ್ನ 10 ಗ್ರಾಮ್​ಗೆ: 48,100 ರೂ
ಅಪರಂಜಿ ಚಿನ್ನ 10 ಗ್ರಾಮ್​ಗೆ: 52,470 ರೂಬೆಳ್ಳಿ 10 ಗ್ರಾಮ್​ಗೆ: 610.60 ರೂ

ಇನ್ನು, ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮುಂದುವರಿದಿದೆ. ಇವತ್ತಿನ ವಿನಿಯಮ ಮಾರುಕಟ್ಟೆಯಲ್ಲಿ ಒಂದು ಡಾಲರ್​ಗೆ 74.823 ರೂನಂತೆ ವಹಿವಾಟು ಆಗುತ್ತಿದೆ. ಭಾರತದ ಷೇರುಮಾರುಕಟ್ಟೆಯ ವಿವಿಧ ಸೂಚ್ಯಂಕಗಳು ನಿನ್ನೆಯ ದಿನಾಂತ್ಯದಲ್ಲಿ ಕುಸಿತ ಕಂಡಿವೆ.

Comments are closed.