ಆರೋಗ್ಯ

ಉಡುಪಿಯಲ್ಲಿ ಶುಕ್ರವಾರವೂ 190 ಕೊರೋನಾ ಪಾಸಿಟಿವ್‌ ಪ್ರಕರಣ;ಸಾವಿನ ಸಂಖ್ಯೆ 14ಕ್ಕೇರಿಕೆ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 190 ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು ಸಕ್ರಿಯ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 1,000 ದಾಟಿದೆ. ಇದೇ ವೇಳೆ ಒಟ್ಟು ಸೋಂಕಿತರ ಸಂಖ್ಯೆ 3 ಸಾವಿರದ ಗಡಿ ದಾಟಿದೆ. ಈವರೆಗೆ 1,929 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಸಾವಿನ ಸಂಖ್ಯೆ 14ಕ್ಕೇರಿಕೆ
ಜಿಲ್ಲೆಯಲ್ಲಿ ಗುರುವಾರ ರಾತ್ರಿ ಸಾವು ಸಂಭವಿಸಿದೆ. 63 ವರ್ಷ ಪ್ರಾಯದ ಕುಂದಾಪುರ ಕೋಣಿ ನಿವಾಸಿ ಮಣಿಪಾಲ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮೃತಪಟ್ಟ ಅವರಿಗೆ ಕೊರೊನಾ ಪಾಸಿಟಿವ್‌ ವರದಿ ಬಂದಿದೆ. ಇವರ ಅಂತ್ಯಕ್ರಿಯೆ ಶುಕ್ರವಾರ ಉಡುಪಿಯಲ್ಲಿ ನಡೆಯಿತು. ಇದುವರೆಗೆ ಒಟ್ಟು 14 ಮಂದಿ ಕೊರೊನಾ ಪಾಸಿಟಿವ್‌ನಿಂದ ಮೃತಪಟ್ಟಿದ್ದಾರೆ.

ಶುಕ್ರವಾರ 413 ಮಾದರಿಗಳನ್ನು ಸಂಗ್ರಹಿಸಿದ್ದು 611 ಮಾದರಿಗಳ ವರದಿ ಬರಬೇಕಾಗಿದೆ. ಪ್ರಸ್ತುತ 1,729 ಮಂದಿ ಮನೆಗಳಲ್ಲಿ ಮತ್ತು 217 ಮಂದಿ ಆಸ್ಪತ್ರೆಗಳ ಐಸೊಲೇಶನ್‌ ವಾರ್ಡ್‌ಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಶುಕ್ರವಾರ ಆಸ್ಪತ್ರೆಯಿಂದ 88 ಜನರು ಬಿಡುಗಡೆಗೊಂಡಿದ್ದಾರೆ.

Comments are closed.