ಪ್ರತಿಯೊಂದು ಮನೆಯ ಹಿರಿಯರಿಗೆ ಕೆಲವು ಮನೆ ಮದ್ದುಗಳ ಬಗ್ಗೆ ಅರಿವುಗಳು ಇರುವುದು ಸಹಜ ಅದೇ ರೀತಿ ಅದರ ಉಪಯೋಗದಿಂದ ಅಗುವ ಪ್ರಯೋಜನಗಳು ತಿಳಿದಿರುತ್ತದೆ.
ಕಡಲೆ ಹಿಟ್ಟು :
ಮೈ ಸೋಫನ್ನು ಉಪಯೋಗಿಸಿದರೆ ಕೆಲವರಿಗೆ ಅಲರ್ಜಿಯಾಗುತ್ತದೆ. ಅಂತವರು ಕಡಲೆ ಹಿಟ್ಟನ್ನು ಹಚ್ಚಿಕೊಂಡು ಸ್ನಾನ ಮಾಡಿದರೆ ಯಾವ ತೊಂದರೆಯೂ ಅಗುವುದಿಲ್ಲ.
ಕಡಲೆ ಹಿಟ್ಟಿನಿಂದ ಕೂದಲನ್ನು ತೊಳೆಯುತ್ತಿದ್ದರೆ ತಲೆಕೂದಲು ರೇಷ್ಮೆಯಂತೆ ನುಣುಪಾಗುತ್ತದೆ.
ಮೀತವಾಗಿ ಹುರಿದ ಕಡಲೆಯನ್ನು ಬಳಸುವುದರಿಂದ ವೀರ್ಯವೃದ್ದಿಯಾಗುತ್ತದೆ.
ಹೊಟ್ಟು ತೆಗೆದ ಹುರಿಗಡಲೆಯನ್ನು ಮೂಸಿ ನೋಡುವುದರಿಂದ ಕಫ ನಿವಾರಣೆಯಾಗುತ್ತದೆ
ಹುರಿಗಡಲೆಯನ್ನು ಆಗಾಗ ತಿನ್ನುತ್ತಿದ್ದರೆ ನೆಗಡಿ ಕಡಿಮೆಯಾಗುತ್ತದೆ.
ಹುರಿಗಡಲೆ ಹಿಟ್ಟಿಗೆ ಹೆಚ್ಚಿದ ಕರ್ಜೂರ, ಹಾಲು, ಸಕ್ಕರೆ ಬೆರೆಸಿ ಸೇವಿಸಿದರೆ ಶರೀರದ ತೂಕ ಹೆಚ್ಚುತ್ತದೆ.
ಹುರಿಗಡಲೆ, ಖರ್ಜೂರ, ಹಾಲು, ಸಕ್ಕರೆಗಳಿಂದ ಲೇಹ್ಯ ತಯಾರಿಸಿ ತಿಂದರೆ ಶೀಘ್ರವಾಗಿ ವೀರ್ಯ ಸ್ಪಲನವಾಗುವುದಿಲ್ಲ.
ಈರುಳ್ಳಿ :
* ಒಂದು ಚಮಚ ಹಸಿ ಈರುಳ್ಳಿ ರಸಕ್ಕೆ ಒಂದು ಚಮಚ ಬೆಲ್ಲ ಸೇರಿಸಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
* ನಾಲ್ಕು ಚಮಚ ಈರುಳ್ಳಿ ರಸದಲ್ಲಿ ಒಂದು ಚಮಚ ಜೇನು ತುಪ್ಪ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುವುದು.
* ಈರುಳ್ಳಿ ರಸಕ್ಕೆ ಒಂದು ಚಿಟಿಕೆ ಅರಶಿನ, ಒಂದು ಚಮಚ ಜೇನು ತುಪ್ಪ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ತಲೆನೋವು ಗುಣವಾಗುತ್ತದೆ.
* ಈರುಳ್ಳಿಯನ್ನು ಜಜ್ಜಿ ಮೂಗಿನ ಬಳಿ ಹಿಡಿದು ವಾಸನೆ ತೆಗೆದು ಕೊಳ್ಳುತ್ತಿದ್ದರೆ ಮೂಗಿನಿಂದ ರಕ್ತ ಬರುವುದು ನಿಲ್ಲುತ್ತದೆ.
* ಐವತ್ತು ಮಿಲಿ ಈರುಳ್ಳಿ ರಸವನ್ನು ಸಿಹಿ ಮಜ್ಜಿಗೆಯಲ್ಲಿ ಬೆರೆಸಿ ಊಟದ ಬಳಿಕ ಕುಡಿದರೆ ಅಥವಾ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಅನ್ನಕ್ಕೆ ಹಾಕಿ ಕಲಸಿಕೊಂಡು ತಿನ್ನುತ್ತಿದ್ದರೆ ಮೂಲವ್ಯಾಧಿ ವಾಸಿಯಾಗುತ್ತದೆ.
*ಎರಡು ಸ್ಪೂನ್ ಬಿಳಿ ಈರುಳ್ಳಿ ರಸ, ಒಂದು ಸ್ಪೂನ್ ಶುಂಠಿ ರಸ, ಒಂದು ಸ್ಪೂನ್ ಜೇನುತುಪ್ಪ, ಅರ್ಧ ಸ್ಪೂನ್ ತುಪ್ಪ ಇವುಗಳನ್ನು ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಲೈಂಗಿಕ ಶಕ್ತಿ ಹೆಚ್ಚುತ್ತದೆ.
* ಈರುಳ್ಳಿಯನ್ನು ಹಸಿಯಾಗಿ ದಿನಾ ಸೇವಿಸುವ ರೂಢಿ ಇಟ್ಟುಕೊಂಡರೆ ರಕ್ತ ವೃದಿಯಾಗುವುದು.
ಲವಂಗ:
*ವಾಯುಬಾಧೆ ಹಾಗೂ ಬಾಯಿಗೆ ರುಚಿಯಿಲ್ಲದಾಗ ಲವಂಗವನ್ನು ಬಾಯಿಯಲ್ಲಿಟ್ಟು ಚಪ್ಪರಿಸಬೇಕು
* ಜಂತುಗಳುಂಟಾದಾಗ ಲವಂಗದ ಕಷಾಯ ತಯಾರಿಸಿ ಸೇವಿಸಬೇಕು
* ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಲ್ಲಿ ಲವಂಗದ ಸೇವನೆಯಿಂದ ಕಫ ಕರಗುತ್ತದೆ.
* ಲವಂಗವನ್ನು ಬಾಯಿಯಲ್ಲಿಟ್ಟು ಚಪ್ಪರಿಸುವುದರಿಂದ ಹಸಿಅವೆ ಹೆಚ್ಚುತ್ತದೆ. ಜೀರ್ಣ ಶಕ್ತಿಯೂ ಹೆಚ್ಚುತ್ತದೆ. ಜೀರ್ಣ ಶಕ್ತಿಯೂ ಹೆಚ್ಚುತ್ತದೆ. ಉತ್ತೇಜಕಾರಿಯಾದ ಗುಣವಿರುವುದರಿಂದ ತಾಂಬೂಲದಲ್ಲಿ ವೀಳ್ಯದೆಲೆಯಲ್ಲಿಟ್ಟು ಆಡಿಕೆ ಹಾಘು ಸುಣ್ಣ ಸೇವಿಸುವುದು ರೂಢಿಯಲ್ಲಿದೆ. ಬಾಯಿ ದುರ್ವಾಸನೆಯಿದ್ದವರು ಲವಂಗವನ್ನು ಚಪ್ಪರಿಸಬೇಕು
* ಹುಳುಕುಹಲ್ಲಿನ ತೊಂದರೆಯಿರುವವರು ಲವಂಗವನ್ನು ಪುಡಿಮಾಡಿ ಹುಳುಕಾಗಿರುವ ಜಾಗದಲ್ಲಿ ಇರಿಸಿ ಕೊಳ್ಳಬೇಕು.
ಟೊಮೆಟೋ ಹಣ್ಣು:
*ಟೊಮೆಟೋ ಹಣ್ಣಿನ ರಸವನ್ನು ಸೇವಿಸುವುದರಿಂದ ಮೂತ್ರ ಶುದ್ದವಾಗುತ್ತದೆ.
* ಒಂದು ಲೋಟ ಟೊಮೆಟೋ ಹಣ್ಣಿನ ತಾಜಾ ರಸಕ್ಕೆ ಒಂದು ಚಿಟಿಕೆ ಉಪ್ಪು ಮತ್ತು ಒಂದು ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ವಾಂತಿ ನಿಲ್ಲುತ್ತದೆ ಮತ್ತು ಮಲಬದ್ದತೆ ನಿವರಣೆಯಾಗುತ್ತದೆ.
* ಸ್ಥೂಲ ದೇಹಿಗಳು ದಿನಾ ಎರಡು ಟೊಮೆಟೋ ಹಣ್ಣನ್ನು ತಿನ್ನುತ್ತಾ ಇದ್ದರೆ ತೂಕ ಕಡಿಮೆಯಾಗಿ, ದೇಹ ಬಲಿಷ್ಠವಾಗುತ್ತದೆ.
* ಒಂದು ಚಮಚ ಟೊಮೆಟೋ ರಸಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಮತ್ತು ಎರಡು ಹನಿ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಒಂದು ಗಂಟೆಯ ಅನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದರೆ ಮುಖದ ಚರ್ಮಕ್ಕೆಕಾಂತಿ ಬರುತ್ತದೆ.
* ಟೊಮೆಟೋ ಹಣ್ಣನ್ನು ತಿನ್ನುವುದರಿಂದ ಹಲ್ಲು ಮತ್ತು ವಸಡು ಗಟ್ಟಿಯಾಗುತ್ತದೆ.
*ಮುಖದಲ್ಲಿ ಉಂಟಾಗುವು ಮೊಡವೆಗಳ ಮೇಲೆ ಟೊಮೆಟೋ ಹಣ್ಣಿನ ತಿರುಳಿನಿಂದ ನಯವಾಗಿ ಉಜ್ಜಿ ಒಂದು ಗಂಟೆಯ ಅನಂತರ ಬಿಸಿನೀರಿನಿಂದ ಶುಭ್ರಗೊಳಿಸಿದರೆ ಮೊಡವೆ ಮತ್ತು ಅದರಿಂದ ಉಂಟಾದ ಕಲೆ ನಿವಾರಣೆಯಾಗುತ್ತದೆ.
* ಟೊಮೆಟೋ ಹಣ್ಣಿನ ಶರಬತ್ತನ್ನು ಕುಡಿಯುವುದರಿಂದ ಮನಸ್ಸು ಮತ್ತು ಶರೀರ ಸದಾ ಉಲ್ಲಾಸದಿಂದ ತರುತ್ತದೆ.
Comments are closed.