ಕರ್ನಾಟಕ

ದ್ವಿತೀಯ ಪಿಯುಸಿಯಲ್ಲಿ ಟಾಪರ್ಸ್ ಯಾರು…? ಇಲ್ಲಿದೆ ನೋಡಿ….

Pinterest LinkedIn Tumblr

ಅಭಿಜ್ಞಾ ರಾವ್, ಅರವಿಂದ ಶ್ರೀವತ್ಸ

ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಒಟ್ಟು ಶೇ. 6180ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದರೆ ಶೇ.68.73ರಷ್ಟು ಬಾಲಕಿಯರು, ಶೇ. 54.77ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ ದಕ್ಷಿಣ ಕನ್ನಡ ದ್ವಿತೀಯ ಮತ್ತು ಕೊಡಗು ತೃತೀಯ ಸ್ಥಾನದಲ್ಲಿವೆ. ಚಿತ್ರದುರ್ಗ, ರಾಯಚೂರು ಮತ್ತು ವಿಜಯಪುರಗಳು ಕೊನೆಯ ಸ್ಥಾನದಲ್ಲಿವೆ. ಈ ಬಾರಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಟಾಪರ್ಸ್ ಆದವರ ವಿವರ ಹೀಗಿದೆ-

ವಿಜ್ಞಾನ ವಿಭಾಗ

ವಿಜ್ಞಾನ ವಿಭಾಗದಲ್ಲಿ ಉಡುಪಿಯ ವಿದ್ಯೋದಯ ಕಾಲೇಜು ವಿದ್ಯಾರ್ಥಿನಿಯಾಗಿರುವ ಅಭಿಜ್ಞಾ ರಾವ್ ಟಾಪರ್ ಆಗಿದ್ದಾರೆ. ಅಭಿಜ್ಞಾ ರಾವ್ ವಿಜ್ಞಾನ ವಿಭಾಗದಲ್ಲಿ 596 ಅಂಕಗಳನ್ನು ಗಳಿಸಿಕೊಂಡಿದ್ದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಭಿಜ್ಞಾ ಪಿಸಿಎಂಸಿ ವಿಷಯಗಳಲ್ಲಿ ತಲಾ 100 , ಇಂಗ್ಲೀಷ್ ಭಾಷೆಯಲ್ಲಿ 96 ಹಾಗೂ ಸಂಸ್ಕೃತದಲ್ಲಿ 100 ಅಂಕ ಪಡೆದಿದ್ದಾರೆ.

ಇನ್ನು ಇದೇ ವಿಭಾಗದಲ್ಲಿ ಬೆಂಗಳೂರಿನ ಮಲ್ಲೇಶ್ವರಂನ ವಿದ್ಯಾಮಂದಿರ್ ಪಿ.ಯು ಕಾಲೇಜಿನ ಪ್ರೇರಣಾ ಕೂಡ 596 ಅಂಕ ಗಳಿಸಿದ್ದಾರೆ. ಆಕಾಂಕ್ಷಾ ಪೈ (595) ದ್ವಿತೀಯ ಹಾಗೂ ಯಶಸ್​ ಎಂ.ಎಸ್ (594) ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ.

ವಿಜ್ಞಾನ ವಿಭಾಗ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
1. ಅಭಿಜ್ಞಾ ರಾವ್ 596 ಅಂಕ, ವಿದ್ಯೋದಯ ಪಿಯು ಕಾಲೇಜು ಉಡುಪಿ
1. ಪ್ರೇರಣಾ ಎಂ.ಎನ್ 596 ಅಂಕ, ವಿದ್ಯಾಮಂದಿರ ಐಎನ್‍ಡಿಪಿ ಪಿಯು ಕಾಲೇಜು ಬೆಂಗಳೂರು
2. ಆಕಾಂಕ್ಷಾ ಎ ಪೈ 595 ಅಂಕ, ಆರ್ ವಿ ಪಿಯು ಕಾಲೇಜು ಬೆಂಗಳೂರು
3. ಯಶಸ್ ಎಂ.ಎಸ್. 594 ಅಂಕ, ಗೋಪಾಲಸ್ವಾಮಿ ಎಸ್‍ವಿ ಪಿಯು ಮೈಸೂರು
3. ಶಿಫಾಲಿ ಎಂ.ಎಸ್. 594 ಅಂಕ, ಎಬಿಸಿ ಪಿಯು ಕಾಲೇಜು ಬೆಂಗಳೂರು
3. ಅಖಿಲಾ ಯು. ಹೆಗ್ಡೆ 594 ಅಂಕ, ಸರ್ಕಾರಿ ಪಿಯು ಕಾಲೇಜು ಶಿವಮೊಗ್ಗ
3. ಆಲ್ಮಾಸ್ ಬಾನು 594 ಅಂಕ, ಜ್ಞಾನಭಾರತಿ ಪಿಯು ಕಾಲೇಜು ತುಮಕೂರು

4. ಗ್ರೀಷ್ಮಾ ಕೆ 593 ಅಂಕ, ವಿದ್ಯೋದಯ ಪಿಯು ಕಾಲೇಜು ಉಡುಪಿ
4. ಮೇಧಾ ಎನ್ ಭಟ್ 593 ಅಂಕ, ಮಹಾತ್ಮಗಾಂಧಿ ಮೆಮೊ ಪಿಯು ಕಾಲೇಜು ಉಡುಪಿ
4. ದೀಪ್ತಿ ಎ 593 ಅಂಕ, ವಿದ್ಯಾನಿಧಿ ಐಎನ್‍ಡಿ ಪಿಯು ಕಾಲೇಜು ತುಮಕೂರು
4. ಧೀರಜ್ ಬಾಬಾ ಆರ್.ಎ 593 ಅಂಕ, ಮಂಗಳೂರು ಐಎನ್‍ಡಿಪಿ ಪಿಯು ಕಾಲೇಜು ಬೆಂಗಳೂರು
5. ವರ್ಷಿತಾ ವಿಶ್ವೇಶ್ ಮಾರ್ಗಸಹೇ 592 ಅಂಕ, ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು ಬೆಂಗಳೂರು
5. ಸಹನ ಕೆ 592 ಅಂಕ, ಆದಿಚುಂಚನಗಿರಿ ಪಿಯು ಕಾಲೇಜು ಶಿವಮೊಗ್ಗ
5. ಪದ್ಮಿಕಾ ಕೆ. ಶೆಟ್ಟಿ 592 ಅಂಕ, ವಿದ್ಯೋದಯ ಪಿಯು ಕಾಲೇಜು ಉಡುಪಿ

ವಾಣಿಜ್ಯ ವಿಭಾಗ

ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ವಿದ್ಯಾಮಂದಿರ್ ಪಿ.ಯು ಕಾಲೇಜಿನ ಅರವಿಂದ ಶ್ರೀವತ್ಸ 598 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮಿಗ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಬೃಂದಾ ದ್ವಿತೀಯ ಸ್ಥಾನ (596), ಮಲ್ಲೇಶ್ವರಂ ವಿದ್ಯಾಮಂದಿರ್ ಪಿಯು ಕಾಲೇಜಿನ ಅಭಿಲಾಶ್ ಶರ್ಮಾ(595) ತೃತೀಯ ಸ್ಥಾನ ಪಡೆದಿದ್ದಾರೆ.

ಬೆಂಗಳೂರು: ಮಲ್ಲೇಶ್ವರದ ವಿದ್ಯಾಮಂದಿರ ಪಿಯು ಕಾಲೇಜಿನ ಅರವಿಂದ ಶ್ರೀವಾಸ್ತವ್ ವಾಣಿಜ್ಯ ವಿಭಾಗದಲ್ಲಿ 598 ಅಂಕ ಪಡೆಯುವ ಮೂಲಕ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಈ ವರ್ಷ ವಾಣಿಜ್ಯ ವಿಭಾಗದ ಪರೀಕ್ಷೆಯನ್ನು ಒಟ್ಟು 2,60,131 ಮಂದಿ ತೆಗೆದುಕೊಂಡಿದ್ದು, 1,70,426 ಮಂದಿ ತೇರ್ಗಡೆಯಾಗುವ ಮೂಲಕ ಶೇ.65.52 ಫಲಿತಾಂಶ ಬಂದಿದೆ. ಮೂರು ವಿಭಾಗದದಲ್ಲಿ ಹೊಸಬರು ಒಟ್ಟು 5,56,267 ಮಂದಿ ಪರೀಕ್ಷೆ ಬರೆದಿದ್ದು, 3,84,947 ಮಂದಿ ತೇರ್ಗಡೆಯಾಗಿದ್ದಾರೆ. ಶೇ.69.20 ಫಲಿತಾಂಶ ಬಂದಿದೆ.

ಟಾಪರ್ ಪಟ್ಟಿ
1. ಅರವಿಂದ ಶ್ರೀವಾಸ್ತವ್ – 598 ಅಂಕ, ವಿದ್ಯಾಮಂದಿರ ಪಿಯು ಕಾಲೇಜ್ ಮಲ್ಲೇಶ್ವರಂ ಬೆಂಗಳೂರು.
2. ಬೃಂದ ಜೆ.ಎನ್ – 596 ಅಂಕ, ಶ್ರೀ ಬಿಜಿಎಸ್ ಬಾಲಕಿಯರ ಪಿಯು ಕಾಲೇಜ್ ಮೈಸೂರು.
3. ಸಿಂದು ಜಿ.ಎಂ – 595 ಅಂಕ, ಸರ್ಕಾರಿ ಬಾಲಕಿಯರ ಪಿಯು ಕಾಲೇಜ್ ಶಿವಮೊಗ್ಗ.
3. ಅಭಿಲಾಶ್ ಎಂ ಶರ್ಮಾ – 595 ಅಂಕ, ವಿದ್ಯಾಮಂದಿರ ಪಿಯು ಕಾಲೇಜ್ ಮಲ್ಲೇಶ್ವರಂ ಬೆಂಗಳೂರು.
4. ಅನನ್ಯ ಹೆಬ್ಬಾರ್ – 594 ಅಂಕ, ವಿದ್ಯಾಮಂದಿರ ಪಿಯು ಕಾಲೇಜ್ ಮಲ್ಲೇಶ್ವರಂ ಬೆಂಗಳೂರು.
4. ವರ್ಷ ಆರ್ – 594 ಅಂಕ ವಿದ್ಯಾಮಂದಿರ ಪಿಯು ಕಾಲೇಜ್ ಮಲ್ಲೇಶ್ವರಂ ಬೆಂಗಳೂರು.
4. ಧ್ವನಿ ಜೈನ್ – 594 ಅಂಕ, ಎನ್‍ಬಿ ಮಹಾವೀರ್ ಜೈನ್ ಮಹಿಳಾ ಪಿಯು ಕಾಲೇಜ್ ಬೆಂಗಳೂರು.
4. ಜೆ ತರುಣ್ – 594 ಅಂಕ, ವಿದ್ಯಾನಿಧಿ ಪಿಯು ಕಾಲೇಜ್ ತಮಕೂರು.
4. ರಿತಿಕಾ ಕಾಮತ್ – 594 ಅಂಕ, ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಕಾರ್ಕಳ ಉಡುಪಿ
4. ಸ್ವಾತಿ ಪೈ – 594 ಅಂಕ, ಶ್ರೀ ವೆಂಕಟರಮಣ ಪಿಯು ಕಾಲೇಜ್ ಕುಂದಾಪುರ ಉಡುಪಿ.
4. ಅಪೂರ್ವ ಎಂ – 594 ಅಂಕ, ವಿಕಾಸ್ ಪಿಯೂ ಕಾಲೇಜ್ ಮಂಗಳೂರು.
5. ಮೋನಿಷಾ ಜಿ.ಟಿ 593 ಪಡೆದ ಅಂಕ, ಶಾಂತಿಧಾಮ ಪಿಯು ಕಾಲೇಜ್ ಬೆಂಗಳೂರು.
5. ಜೈನ್ ಶ್ರೀಪಾಲ್ ಶಾ – 593 ಅಂಕ, ಎಸ್‍ಡಿಸಿ ಪಿಯು ಕಾಲೇಜ್ ಕೋಲಾರ,
5. ಶ್ರದ್ಧಾ ಭಟ್ – 593 ಅಂಕ, ವಿದ್ಯಾನಿಧಿ ಪಿಯು ಕಾಲೇಜ್ ತುಮಕೂರು.
5. ಪೃಥ್ವಿ ಎನ್ ಹೆಬ್ಬಾರ್ – 593 ಅಂಕ, ಶಾರದ ಪಿಯು ಕಾಲೇಜ್ ಮಂಗಳೂರು.
5 ಹರ್ಷ ಜೆ ಆಚಾರ್ಯ – 593 ಅಂಕ, ಅಳ್ವಾಸ್ ಪಿಯು ಕಾಲೇಜ್ ಮೂಡಬಿದರೆ
5 ದಿವ್ಯಾ ಟಿ.ವಿ – 593 ಅಂಕ, ಸದ್ವಿದ್ಯಾ ಪಿಯು ಕಾಲೇಜ್ ಮೈಸೂರು.
6. ಜಯಸಿಂಹ ಎಂ – 592 ಅಂಕ, ಕ್ರೈಸ್ಟ್ ಪಿಯು ಕಾಲೇಜ್ ಬೆಂಗಳೂರು.
6. ಮೊನಿಷ್ ರೆಡ್ಡಿ – 592 ಅಂಕ, ಎಸ್‍ಬಿ ಮಹಾವೀರ್ ಜೈನ್ ಪಿಯು ಕಾಲೇಜ್ ಬೆಂಗಳೂರು.
6. ಪ್ರಶಾಂತ್ ಗೋಪಾಲ್ ನಕೋಡ್ – 592 ಅಂಕ, ಎಎಸ್‍ಎಸ್ ಪಿಯು ಕಾಲೇಜ್ ಗದಗ.
6. ಅನ್ವಿತಾ ಶೆಟ್ಟಿ – 592 ಅಂಕ. ಪಿಇಎಸ್ ಪಿಯು ಕಾಲೇಜ್ ಬೆಂಗಳೂರು.

ಕಲಾ ವಿಭಾಗ

ಬಳ್ಳಾರಿಯ ಕರೇಗೌಡ ದಾಸನ್ ಗೌಡರ್ 594 ಅಂಕ ಗಳಿಸಿ ಕಲಾ ವಿಭಾಗದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ ಸ್ವಾಮಿ (592) ದ್ವಿತೀಯ ಮೊಹಮ್ಮದ್​ ರಫೀಕ್ (591) ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ.

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
1. ಕರೇಗೌಡರ ದಾಸನಗೌಡ 594 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
2. ಸ್ವಾಮಿ ಎಸ್.ಎಂ 591 ಅಂಕ, ಇಂದು ಪಿಯು ಕಾಲೇಜು, ಬಳ್ಳಾರಿ
3. ಮಹಮ್ಮದ್ ರಫೀಕ್ ಹೆಚ್ 591 ಅಂಕ, ಇಂದು ಪಿಯು ಕಾಲೇಜು, ಬಳ್ಳಾರಿ
4. ಗೀತಾ ದೊಗ್ಗಳ್ಳಿ 590 ಅಂಕ, ಎಸ್‍ಯುಜೆಎಂ ಪಿಯು ಕಾಲೇಜು ಹರಪ್ಪನಹಳ್ಳಿ ಬಳ್ಳಾರಿ
4. ಶಮೀನ್ 590 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
5. ಪ್ರಿಯಾಂಕ ಎಂ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
5. ಶರಣಬಸಪ್ಪಬಡಿಗೇರ್ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
5. ಹಕ್ಕಿ ರೂಪ 589 ಅಂಕ, ಎಸ್‍ಎಸ್‍ಹೆಚ್ ಜೈನ್ ಪಿಯು ಕಾಲೇಜು ಹರಪ್ಪನಹಳ್ಳಿ ಬಳ್ಳಾರಿ
5. ತೋಟದ ತೇಜಸ್ವಿನಿ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ

Comments are closed.