ಆರೋಗ್ಯ

ಮುಖದ ಕಲೆ ನಿವಾರಣೆಗೆ ಆ್ಯಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟಿ ಇರುವ ಪಟಿಕ ಉತ್ತಮ ಪರಿಹಾರ

Pinterest LinkedIn Tumblr

ಈ ಕಲ್ಲಿನ ಹೆಸರು ಆಲಂ ಅಥವಾ ಸ್ಪಟಿಕ ಅಥವಾ ಪಟಿಕ ಅಂತಾನೂ ಕರೀತಾರೆ.ಇದು ನೋಡಲು ನಿಮಗೆ ಕಲ್ಲು ಸಕ್ಕರೆಯ ರೀತಿ ಕಾಣಿಸುತ್ತೆ ಆದರೆ ಇದು ಕಲ್ಲು ಸಕ್ಕರೆಯಲ್ಲ.ಇದೊಂದು ವಿಶೇಷವಾದ ಕಲ್ಲು ಇದನ್ನು ಆಯುರ್ವೇದದಲ್ಲಿ ಜಾಸ್ತಿಯಾಗಿ ಬಳಸಲಾಗುತ್ತದೆ.ಇನ್ನು ಇದನ್ನು ಕೂದಲಿಗೆ , ಚರ್ಮಕ್ಕೆ ಬಳಸಲಾಗುತ್ತದೆ.ಹಾಗೆ ಇನ್ನೂ ಕೆಲವು ಆಯುರ್ವೇದಿಕ್ ಔಷಧಿಗಳಲ್ಲೂ ಇವುಗಳನ್ನು ಬಳಸಲಾಗುತ್ತದೆ .ಆಲಂ ನಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಕೂಡ ನಿಮ್ಮ ಸ್ಪಿನ್ನಿಗೆ ಆಗುವುದಿಲ್ಲ.

ಈ ಆಲಂ ಎಲ್ಲ ದಿನಸಿ ಅಂಗಡಿಗಳಲ್ಲೂ ಸಿಗುತ್ತದೆ.ಇದು ಕಲ್ಲಿನ ರೂಪದಲ್ಲೂ ಸಿಗುತ್ತದೆ ಹಾಗೆನೇ ಪೌಡರ್ ರೂಪದಲ್ಲೂ ಸಿಗುತ್ತದೆ .ಆಲಂ ನಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟಿ ಇದೆ ಹಾಗೆ ಇದು ಗಾಯಗಳನ್ನು ಬೇಗನೇ ಗುಣಪಡಿಸುವ ಶಕ್ತಿಯನ್ನು ಇದಕ್ಕಿದೆ.ಸ್ಕಿನ್ ವೈಟ್ನಿಂಗ್ ಗೂ ಇದು ಸಹಾಯಕಾರಿ ,ಹಾಗೇನೇ ಸ್ಕಿನ್ನನ್ನು ಟೈಟ್ ಮಾಡುತ್ತದೆ.ಆಲಂ ಉಪಯೋಗಿಸಿಕೊಂಡು ಹೇಗೆ ನಮ್ಮ ಪಿಂಪಲ್ಸ್ , ಮಾರ್ಕ್ಸ್ ನ ಹಾಗೂ ಭಂಗವನ್ನು ದೂರ ಪಡಿಸಬಹುದು ಬನ್ನಿ ತಿಳಿಯೋಣ..

ಬೇಕಾಗಿರುವ ಸಾಮಾಗ್ರಿಗಳು:ಆಲಂ , ಜೇನುತುಪ್ಪ ಮತ್ತು ರೋಸ್ ವಾಟರ್,ಆಲಂ ಅನ್ನು ಒಂದು ಸ್ಪೂನ್ ಆಗುವಷ್ಟು ಪುಡಿ ಮಾಡಿಕೊಳ್ಳಿ ,ಅದಕ್ಕೆ 3 ಡ್ರಾಪ್ ಜೇನುತುಪ್ಪ ,ಅರ್ಧ ಸ್ಪೂನ್ನಷ್ಟು ರೋಸ್ ವಾಟರ್,ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ .ಈಗ ಮುಖವನ್ನು ಚೆನ್ನಾಗಿ ವಾಷ್ ಮಾಡ್ಕೊಂಡು ಈ ಪ್ಯಾಕನ್ನು ನ ಅಪ್ಲೈ ಮಾಡಿ ನಂತರ 10 ನಿಮಿಷ ಬಿಟ್ಟು ವಾಶ್ ಮಾಡಿ .ಪ್ರತಿ ದಿನ ಈ ರೀತಿ ಅಪ್ಲೈ ಮಾಡಿ ನಿಮಗೆ ಬೇಗ ಒಳ್ಳೆಯ ವ್ಯತ್ಯಾಸ ಕಂಡು ಬರುತ್ತದೆ.

Comments are closed.