ಕರಾವಳಿ

ಕೋಟ ಜೋಡಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ‌‌ ಜಾಮೀನು ಅರ್ಜಿ‌ ತಿರಸ್ಕರಿಸಿದ‌ ಹೈಕೋರ್ಟ್

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆ ಕೋಟ ಸಮೀಪದ ಮಣೂರಿನಲ್ಲಿ ಜನವರಿ 26 ರಾತ್ರಿ ನಡೆದ ಯತೀಶ್ ಕಾಂಚನ್ ಹಾಗೂ ಭರತ್ ಎನ್ನುವ ಗೆಳೆಯರಿಬ್ಬರ ಜೋಡಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ವಕೀಲರ ಮೂಲಕ ಸಲ್ಲಿಸಿದ್ದ ಜಾಮೀನು ಅರ್ಜಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.

ಜೋಡಿ ಕೊಲೆ ಪ್ರಕರಣದ ಆರೋಪಿಗಳಾದ ಸುಜಯ್ , ಮಹೇಶ್ ಕುಮಾರ್, ರವಿಚಂದ್ರ, ಅಭಿಷೇಕ್ ಪಾಲನ್ ಎನ್ನುವರ ಜಾಮೀನು ತಿರಸ್ಕ್ರತಗೊಂಡಿದೆ.

ಕೋಟ ಜೋಡಿ ಕೊಲೆ ಪ್ರಕರಣದಲ್ಲಿ ಇವರು ಪ್ರಮುಖ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಕೊಲೆಗೆ‌ ಬಳಸಿದ ಮಾರಕಾಯುಧಗಳನ್ನು‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತ್ಯಕ್ಷದರ್ಶಿಗಳು‌ ಕೂಡ ಆರೋಪಿಗಳನ್ನು ಗುರುತು ಪತ್ತೆ ಪರೇಡಿನಲ್ಲಿ ಗುರುತಿಸಿದ್ದಾರೆ. ಆದ್ದರಿಂದ ಇವರಿಗೆ ಜಾಮೀನು‌ ‌ನೀಡಿದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಹಾಕಿ ಸಾಕ್ಷ್ಯ ನಾಶ ಮಾಡುವ ಸಂಭವವಿದೆ ಎಂಬ ವಾದ ಆಲಿಸಿದ ನ್ಯಾಯಾಧೀಶರು ನಾಲ್ವರು ಆರೋಪಿಗಳ ಜಾಮೀನು‌ ಅರ್ಜಿ ತಿರಸ್ಕರಿಸಿ ಆದೇಶ ನೀಡಿದ್ದಾರೆ.

Comments are closed.