ಆರೋಗ್ಯ

ಸಂಧಿವಾತ ,ಹೊಟ್ಟೆ ಕಾಯಿಲೆ, ಮಧುಮೇಹ, ಹೃದಯಾಘಾತ ಇತ್ಯಾದಿಗಳನ್ನು ನಿವಾರಿಸುವ ಗುಣ ಈ ಹಣ್ಣಿನಲ್ಲಿದೆ

Pinterest LinkedIn Tumblr

ಸಾಮಾನ್ಯವಾಗಿ ಭಾರತದಲ್ಲಿ ಹೆಚ್ಚಾಗಿ ಬೆಳೆಯುವಂತಹ ನೇರಳೆ ಹಣ್ಣು ಕೂಡ ಪೋಷಕಾಂಶಗಳ ಆಗರವಾಗಿದೆ.ಇದು ನಮ್ಮ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ.ಇದರಲ್ಲಿ ಮಧುಮೇಹ , ಕ್ಯಾನ್ಸರ್ , ಹೃದಯಾಘಾತ , ಸಂಧಿವಾತ ,ಹೊಟ್ಟೆ ಕಾಯಿಲೆಗಳಾಗಿರುವ ಭೇದಿ ಇತ್ಯಾದಿಗಳನ್ನು ನಿವಾರಿಸುವ ಗುಣಗಳು ಇವೆ.ನೇರಳೆಹಣ್ಣಿನ ಸೇವನೆಯಿಂದ ಇತರ ಹಲವಾರು ಆರೋಗ್ಯ ಲಾಭಗಳು ನಮ್ಮ ದೇಹಕ್ಕೆ ದೊರೆಯುತ್ತದೆ.

ನೇರಳೆ ಹಣ್ಣಿನಲ್ಲಿ ಹೇರಳವಾದ ಪೋಷಕಾಂಶವಿದೆ ಇದರಲ್ಲಿ ಪ್ರೊಟೀನ್,ಕಾರ್ಬೊಹೈಡ್ರೇಟ್ಗಳು , ಕ್ಯಾಲ್ಸಿಯಂ , ಕಬ್ಬಿಣಾಂಶ , ವಿಟಮಿನ್ ಸಿ , ವಿಟಮಿನ್ ಬಿ , ಖನಿಜಗಳು,ಉತ್ಕರ್ಷಣಾ ನಿರೋಧಕಗಳು , ಮೆಗ್ನಿಷಿಯಂ,ಪೊಟ್ಯಾಶಿಯಂ,ಗ್ಲೂಕೋಸ್ ,ಕರಗುವ ನಾರು ಮುಂತಾದ ಪೋಷಕಾಂಶಗಳಿದ್ದು ಇದು ಉಳಿದ ಹಣ್ಣುಗಳನ್ನು ಈ ಎಲ್ಲ ಗುಣಗಳಿಂದ ಎಷ್ಟೋ ಹಿಂದೆ ಹಾಕುತ್ತದೆ.

ನೇರಳೆ ಹಣ್ಣು ವಾಸ್ತವದಲ್ಲಿ ಕಾಡಿನ ಬೆಳೆಯಾಗಿದ್ದು , ಯಾವುದೇ ಆರೈಕೆ ಇಲ್ಲದೆ ಬೆಳೆಯುತ್ತದೆ.ಇನ್ನು ಇದು ಸುಲಭವಾಗಿ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಇದರ ಸೇವನೆ ಮಾಡುವವರು ತುಂಬಾ ಕಡಿಮೆ ಆದರೆ ಇದು ದೊರೆತಾಗ ತಪ್ಪದೇ ಸೇವಿಸಿ.ಯಾಕೆ ಗೊತ್ತಾ ?ಇದರಿಂದ ಹೇರಳವಾದ ಆರೋಗ್ಯ ಪ್ರಯೋಜನಗಳು ನಮಗೆ ದೊರೆಯುತ್ತದೆ.

ಅವುಗಳಲ್ಲಿ ಮುಖ್ಯವಾಗಿ ಮಧುಮೇಹ ನಿಯಂತ್ರಣಕ್ಕೆ ಉತ್ತಮ .ನೇರಳೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ನೇರಳೆ ಹಣ್ಣಿನ ಬೀಜಗಳನ್ನು ಒಣಗಿಸಿ ಅದನ್ನು ಹುಡಿ ಮಾಡಿಕೊಂಡು ಪ್ರತಿನಿತ್ಯ ಊಟಕ್ಕೆ ಮೊದಲು ಈ ಹುಡಿಯನ್ನು ಮಧುಮೇಹಿಗಳು ಸೇವನೆ ಮಾಡಿದರೆ ನೈಸರ್ಗಿಕವಾಗಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು.

ನೇರಳೆ ಹಣ್ಣು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತಹೀನತೆಯನ್ನು ನಿವಾರಣೆ ಮಾಡುತ್ತದೆ.ನೇರಳೆ ಹಣ್ಣಿನಲ್ಲಿ ಇರುವಂತಹ ಕಬ್ಬಿಣಾಂಶವು ರಕ್ತ ಹೀನತೆಯನ್ನು ಹೋಗಲಾಡಿಸುತ್ತದೆ.ರಕ್ತಹೀನತೆಯಿಂದ ಬಳಲುತ್ತಿರುವವರು ನೇರಳೆ ಹಣ್ಣನ್ನು ಆಹಾರ ಕ್ರಮದಲ್ಲಿ ಸೇರಿಸಬಹುದು.ಇದರಲ್ಲಿ ಇರುವಂತಹ ಕಬ್ಬಿಣಾಂಶವು ರಕ್ತವನ್ನು ಶುದ್ಧೀಕರಿಸುತ್ತದೆ. ಮತ್ತು ಚರ್ಮಕ್ಕೂ ಇದು ಒಳ್ಳೆಯದು, ರಕ್ತದ ಒತ್ತಡವನ್ನು ನಿವಾರಿಸುತ್ತದೆ. ನಿಯಮಿತವಾಗಿ ನೇರಳೆ ಹಣ್ಣು ಸೇವನೆ ಮಾಡುವುದರಿಂದ ರಕ್ತದ ಒತ್ತಡವನ್ನು ನಿವಾರಿಸಿಕೊಳ್ಳಬಹುದು.

ಹೊಟ್ಟೆ ಸಂಬಂಧಿ ಕಾಯಿಲೆಗಳನ್ನು ನಿವಾರಿಸುತ್ತದೆ.ನೇರಳೆ ಹಣ್ಣು ಅಲ್ಸರ್ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ಭೇದಿ ಸಮಸ್ಯೆಗೆ ಕೂಡ ಉತ್ತಮವಾಗಿದೆ.ನೇರಳೆಹಣ್ಣು ಇನ್ನು ಸೇವಿಸಿದರೆ ಅತಿಸಾರ ಕಾಯಿಲೆ ಕಡಿಮೆಯಾಗುತ್ತದೆ.ನೇರಳೆ ಹಣ್ಣು ತಿನ್ನುವುದರಿಂದ ಜೀರ್ಣ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ.ನೇರಳೆಹಣ್ಣಿನ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.ನೇರಳೆಹಣ್ಣಿನ ಸೇವನೆಯಿಂದ ಮೂಳೆಗಳು ಹಾಗೂ ಹಲ್ಲುಗಳು ಬಲಿಷ್ಠವಾಗುತ್ತದೆ.ಹೃದಯದ ತೊಂದರೆಗಳನ್ನು ಸರಿಪಡಿಸಲು ನೆರವಾಗುತ್ತದೆ.ನೇರಳೆ ಹಣ್ಣಿನಲ್ಲಿ ಖನಿಜಗಳು ಮತ್ತು ಆ್ಯಂಟಿ ಆಕ್ಸಿಡೆಂಟ್ಗಳು ಹೇರಳವಾಗಿದ್ದು ಹೃದಯದ ತೊಂದರೆಗಳನ್ನು ದೂರವಿಡಲು ನೆರವಾಗುತ್ತದೆ.

ಇದು ರಕ್ತದ ಒತ್ತಡ , ಹೃದಯ ಸಂಬಂಧಿ ತೊಂದರೆಗಳು , ಪಾರ್ಶವಾಯು ಮುಂತಾದ ತೊಂದರೆಗಳನ್ನು ತಡೆಯಲು ಸಹಾಯ ಮಾಡುತ್ತದೆ.ತ್ವಚೆಗೂ ಉತ್ತಮ ನೇರಳೆ ಹಣ್ಣಿನಲ್ಲಿ ಹೆಚ್ಚಿನ ಅಲ್ಪಪ್ರಮಾಣದ ಕಬ್ಬಿಣ ಅಂಶವಿದೆ.ಅದು ನಮ್ಮ ರಕ್ತವನ್ನು ಶುದ್ಧಗೊಳಿಸುತ್ತದೆ ಇದರಿಂದಾಗಿ ನಮ್ಮ ಚರ್ಮವನ್ನು ಸ್ವಚ್ಛವಾಗಿರಿಸಲು ಮತ್ತು ಸುಂದರವಾಗಿರಿಸಲು ಸಾಧ್ಯವಾಗುತ್ತದೆ ಅದಲ್ಲದೇ ಶುದ್ಧ ರಕ್ತದ ಕಾರಣದಿಂದಾಗಿ ಮೊಡವೆಗಳು , ಕಲೆಗಳು , ಸುಕ್ಕುಗಳು , ಕಲೆಗಳು ಆಗದಂತೆ ತಡೆಯಲು ನೇರಳೆ ಹಣ್ಣು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇನ್ನು ಇಷ್ಟೆಲ್ಲಾ ಲಾಭವಿರುವ ನೇರಳೆ ಹಣ್ಣನ್ನು ಯಾವಾಗ ಸೇವಿಸಬಾರದು ಹಾಗೂ ಯಾರು ಸೇವಿಸಬಾರದು ?

ನೇರಳೆ ಹಣ್ಣನ್ನು ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ.
ಆಹಾರ ಸೇವಿಸಿದ ನಂತರ ಇದನ್ನು ಸೇವಿಸಬಹುದು.ಇನ್ನು ರಾತ್ರಿ ಸಮಯದಲ್ಲೂ ನೇರಳೆ ಹಣ್ಣು ಸೇವಿಸಬಹುದು ಆದರೆ ಮಲಗುವ ಒಂದು ಗಂಟೆ ಮೊದಲು ಸೇವಿಸಿದರೆ ಉತ್ತಮ.ನೇರಳೆ ಹಣ್ಣು ವಾತ ಗುಣವನ್ನು ಹೊಂದಿದೆ.ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಲಬದ್ಧತೆಯ ತೊಂದರೆ ಉಂಟಾಗುತ್ತದೆ.

Comments are closed.