ಆರೋಗ್ಯ

ಮೂತ್ರವನ್ನು ಕಟ್ಟಿಕೊಂಡರೆ ದೇಹಕ್ಕೆ ಅಗುವ ಅಪಾಯಕ್ಕೆ ಬಲ್ಲಿರಾ?

Pinterest LinkedIn Tumblr

ಮೂತ್ರಕೋಶಕ್ಕೆ ಕೇವಲ 2 ಕಪ್ ಮೂತ್ರ ಮಾತ್ರ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವಿರುತ್ತದೆ. ಮೂತ್ರ ಬಂದರೂ ಬಲವಂತವಾಗಿ ತಡೆಹಿಡಿದರೆ ಸೋಂಕು ತಗುಲಿ, ಮೂತ್ರದ ಬ್ಲಾಡರ್ ನಲ್ಲಿ ಬ್ಯಾಕ್ಟೀರಿಯಾ ಬೆಳಯುತ್ತವೆ ಹಾಗೂ ಮೂತ್ರಪಿಂಡಕ್ಕೆ ಸೋಂಕು ತಗುಲ ಬಹುದು ಅಥವಾ ಹಾಳಾಗಬಹುದು. ಹಾಗಾಗಿ ಏನೇ ಕೆಲಸವಿದ್ದರೂ, ಅದನ್ನು ಬದಿಗಿಟ್ಟು ಸಮಯಕ್ಕೆ ಸರಿಯಾಗಿ ಮೂತ್ರ ವಿಸರ್ಜನೆ ಮಾಡಿ.

ಮೂತ್ರ ಕೋಶದ ಸೋಂಕಿಗೆ ವಯಸ್ಸಿನ ಮಿತಿಯಿಲ್ಲ. ಎಲ್ಲ ವಯಸ್ಸಿನಲ್ಲಿಯೂ ಇದು ಕಾಡುತ್ತದೆ. ಮೂತ್ರವನ್ನು ಹೆಚ್ಚು ಕಾಲ ಕಟ್ಟಿದ್ರೆ ಸೋಂಕಿಗೆ ಕಾರಣವಾಗುತ್ತದೆ. ಮೂತ್ರ ವಿಸರ್ಜನೆ ಮಾಡುವಾಗ ಉರಿ, ತುರಿಕೆ ಸೇರಿದಂತೆ ಕೆಲ ಸಮಸ್ಯೆಗಳು ಕಾಡುತ್ತವೆ. ದಿನ ಕಳೆದಂತೆ ಸಮಸ್ಯೆ ಉಲ್ಬಣಿಸುತ್ತದೆ.

ಮೂತ್ರವನ್ನು ಕಟ್ಟಿಕೊಂಡರೆ ಬಹಳ ಅಪಾಯಕ್ಕೆ ಸಿಲುಕಿದಂತೆ. ಹಾಗಾಗಿ ತಡಮಾಡದೆ ಹೆಣ್ಣಾಗಲಿ ಗಂಡಾಗಲಿ ಮೂತ್ರ ಬಂದಾಗ ಹೆಚ್ಚು ಒತ್ತು ತಡೆಹಿಡಿದುಕೊಳ್ಳುವುದು ಸರಿಯಲ್ಲಾ ಎಂದು ಡಾಕ್ಟರ್ ಹೇಳುತ್ತಾರೆ.

ಮೂತ್ರದ ಸೋಂಕು ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ. 100 ರಲ್ಲಿ 80 ಮಂದಿ ಮೂತ್ರದ ಸೋಂಕಿಗೆ ಒಳಗಾಗ್ತಿದ್ದಾರೆ. ಮೂತ್ರವನ್ನು ಬಹಳ ಹೊತ್ತು ಕಟ್ಟಿಕೊಂಡಿದ್ದರೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದು ಮೂತ್ರಕೋಶದ ಸೋಂಕಿಗೆ ಕಾರಣವಾಗುತ್ತದೆ. ಇದರಿಂದ ಗರ್ಭಧಾರಣೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ.

Comments are closed.