ಆರೋಗ್ಯ

ಕೋಟದ ಹೋಟೆಲ್ ಮಾಲಿಕನಿಗೆ ಕೊರೋನಾ ಪಾಸಿಟಿವ್: ‘ಲತಾ’ ಸೀಲ್ ಡೌನ್

Pinterest LinkedIn Tumblr

ಉಡುಪಿ : ಜಿಲ್ಲೆಯ ಕೋಟದಲ್ಲಿರುವ ಹೋಟೆಲ್ ಮಾಲಿಕನಿಗೆ ಪಾಸಿಟಿವ್ ಬಂದ ಪ್ರಕರಣ ಬುಧವಾರ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಹೋಟೆಲ್ ಮತ್ತು ಅವರು ವಾಸವಾಗಿರುವ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತ ಮಾಲಿಕರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಕೋಟ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

ಕೋಟದ ಪ್ರಸಿದ್ಧ ಹೋಟೆಲ್ ಎಂಬ ಹೆಗ್ಗಳಿಗೆ ಪಾತ್ರವಾದ ಈ ಹೋಟೆಲ್ ಹಲವಾರು ಜನರು ಊಟ- ಉಪಹಾರ ಸೇವಿಸಲು ಬರುತ್ತಿದ್ದು ಸಾರ್ವಜನಿಕರು ಭೀತಿಗೊಂಡಿದ್ದಾರೆ.

Comments are closed.