ಆರೋಗ್ಯ

ಕೈ ತುಂಬ ಗಾಜಿನ ಬಳೆಗಳನ್ನು ಗರ್ಭಿಣಿ ಮಹಿಳೆಯರು ಧರಿಸುತ್ತಾರೆ ಯಾಕೆ ಗೊತ್ತೇ?

Pinterest LinkedIn Tumblr

ಹೆಣ್ಣು ಮಕ್ಕಳ ಅಂದವನ್ನು ಹೆಚ್ಚಿಸುವ ಸೀರೆ. ಬಳೆ. ಸರ ಹೂವು. ಉದ್ದವಾದ ಕೂದಲು. ಕುಂಕುಮ ಇವೆಲ್ಲ ಕೂಡ ಹೆಣ್ಣು ಮಕ್ಕಳ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಜೊತೆಗೆ ಹೆಣ್ಣು ಮಕ್ಕಳ ಅಂದವನ್ನು ಕೂಡ ಹೆಚ್ಚಿಸುತ್ತದೆ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ಕೈಯನ್ನು ನೋಡಿದರೆ ಸಾಕು ಏನೋ ಒಂದು ರೀತಿಯ ಖುಷಿ ಆಗುತ್ತಿತ್ತು ಏಕೆಂದರೆ ಅವರ ಕೈ ತುಂಬಾ ಬಳೆಗಳು ಹಾಕುತ್ತಿದ್ದರು ಅವರ ಕೈ ಸ್ವಲ್ಪ ಅಲುಗಡಿಸಿದರು ಸಾಕು ಬಳೆಗಳ ಗಲ ಗಲ ಶಬ್ದ ಬರುತ್ತಿತ್ತು. ಹಾಗೆಯೇ ಹಿಂದಿನ ಕಾಲದಲ್ಲಿ ಕಡ್ಡಾಯವಾಗಿ ಬಳೆಗಳನ್ನು ತೊಡಲೇ ಬೇಕಿತ್ತು ಹಾಗೆಯೇ ಮದುವೆ ಆದ ಮೇಲೆ ಗಂಡ ಏನಾದರೂ ಸತ್ತರೆ ಆಗ ಮಾತ್ರ ಕೈಗಳಿಂದ ಬಳೆಗಳನ್ನು ತೆಗೆಯ ಬೇಕಿತ್ತು, ಹಿಂದಿನ ಕಾಲದಲ್ಲಿ ಇದ್ದ ಧಾರ್ಮಿಕ ಆಚರಣೆ. ಆದರೆ ಈಗ.ಈ ಧಾರ್ಮಿಕ ಆಚರಣೆಗಳು ಇಲ್ಲ.

ಹೆಣ್ಣು ಮಕ್ಕಳು ಕೈಗೆ ಬಳೆಗಳನ್ನು ತೊಡುವುದರಿಂದ ಏನೆಲ್ಲ ಲಾಭಗಳು ಇವೆ ಗೊತ್ತೇ. ಮನುಷ್ಯನ ದೇಹದಲ್ಲಿ ಕೈಗಳ ಮುನ್ನಿಕಟ್ಟು ಅತ್ಯಂತ ಶಕ್ತಿಯುತವಾದ ಜಾಗವಾಗಿದೆ ಈ ಜಾಗದಲ್ಲಿ ಸಾಕಷ್ಟು ಶಕ್ತಿ ಉತ್ಪಾದನೆಯಾಗುತ್ತದೆ, ಮತ್ತು ಈ ಜಾಗದಿಂದಲೇ ದೇಹದ ಉಳಿದ ಭಾಗಗಳಿಗೆ ಶಕ್ತಿಯು ಹರಿಯುತ್ತದೆ. ಬಳೆಗಳನ್ನು ತೊಡುವುದು ಮುನ್ನಿ ಕಟ್ಟು ಸುತ್ತ, ಇದೆ ಮುನ್ನಿ ಕಟ್ಟು ಪದೇ ಪದೇ ಬಳೆಯ ಸಂಪರ್ಕಕ್ಕೆ ಬಂದು ಪ್ರಚೋದನೆಗೆ ಒಳಗಾಗುತ್ತದೆ ಇದರಿಂದ ರಕ್ತ ಪರಿಚಲನೆ ದೇಹದಲ್ಲಿ ಹೆಚ್ಚುತ್ತದೆ ಹೆಂಗಸರು ಮನೆಯಲ್ಲಿ ಮಾಡುವ ಅಷ್ಟು ಶ್ರಮದ ಕೆಲಸಕ್ಕೆ ಶಕ್ತಿ ನೀಡುವುದೇ ಈ ಬಳೆಗಳು ಎಂದು ಕೂಡ ಹೇಳಬಹುದು.

ಮಹಿಳೆಯರು ತುಂಬಾ ಕ್ರಿಯಾಶೀಲರಾದವರು ಇದಕ್ಕೆ ಕಾರಣ ಬಳೆಗಳು ಸಹ ಒಂದು ಅದು ಹೇಗೆ ಎಂದರೆ ಕೈಗಳು ಅಥವಾ ಕೈಗಳಲ್ಲಿರುವ ಬಳೆಗಳು ನಿರಂತರವಾಗಿ ಅಲುಗಾಡುತ್ತದೆ ಇದರಿಂದ ಘರ್ಷಣೆ ಉಂಟಾಗಿ ವಿದ್ಯುತ್ಕಾಂತೀಯ ತರಂಗಗಳು ದೇಹದಲ್ಲಿ ಉತ್ಪತ್ತಿಯಾಗುತ್ತದೆ ಹಾಗೂ ಇಡೀ ದೇಹಕ್ಕೆ ಹರಡುತ್ತದೆ, ಬಳೆಯು ವೃತ್ತಾಕಾರದಲ್ಲಿ ಇರುವುದರಿಂದ ಅಲ್ಲಿ ಉತ್ಪತ್ತಿಯಾಗುವ ಶಕ್ತಿಯು ಸಹ ವೃತ್ತಾಕಾರದಲ್ಲಿ ನರವ್ಯೂಹದ ಮೂಲಕ ಸಂಪೂರ್ಣ ದೇಹಕ್ಕೆ ವರ್ಗಾವಣೆಯಾಗುತ್ತದೆ, ಇದು ಸಣ್ಣ ಪ್ರಮಾಣದಲ್ಲಿ ಆದರೂ ಕೂಡ ನಿರಂತರವಾಗಿ ವರ್ಗಾವಣೆ ಆಗುವುದರಿಂದ ಮಹಿಳೆಯರು ಸದಾ ಕಾಲ ಕ್ರಿಯಾ ಶೀಲರಾಗಿರುತ್ತಾರೆ.

ಹಾಗೆಯೇ ಗರ್ಭಿಣಿ ಮಹಿಳೆಯರಿಗೆ ಶ್ರೀಮಂತ ಮಾಡುವ ಸಮಯದಲ್ಲಿ ಅವರ ಕೈ ತುಂಬ ಗಾಜಿನ ಬಳೆಗಳನ್ನು ಧರಿಸುತ್ತಾರೆ ಯಾಕೆ ಗೊತ್ತೇ ಗಾಜಿನ ಬಳೆಗಳ ಶಬ್ದ ಬೆಳೆಯುತ್ತಿರುವ ಭ್ರೂಣಕ್ಕೆ ಸಂಗೀತದ ಹಾಗೆ ಕೇಳಿಸುತ್ತದೆ ಹಾಗೆ ಭ್ರೂಣದಲ್ಲಿರುವ ಮಗುವು ತನ್ನ ತಾಯಿಯನ್ನು ಗುರುತಿಸಲು ಇದು ಕೂಡ ನೆರವಾಗುತ್ತದೆ ಅಷ್ಟೇ ಅಲ್ಲದೆ ಯಾವುದೇ ಲೋಹದ ಮೇಲೆ ಅಥವಾ ಕಡಗ ಧರಿಸಿದಲ್ಲಿ ಬಟ್ಟೆಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಸುಲಭವಾಗಿ ಹೊರಹರಿಸಲು ನೆರವಾಗುತ್ತದೆ. ಹಾಗಾಗಿ ಪ್ರತಿ ಹೆಣ್ಣು ಮಕ್ಕಳು ಕೂಡ ಕೈಗೆ ಬಳೆಗಳನ್ನು ಧರಿಸಬೇಕು ಇದು ಅವರ ಅಂದವನ್ನು ಹೆಚ್ಚಿಸುವ ಜೊತೆಗೆ ಅವರ ಆರೋಗ್ಯವನ್ನು ಕಾಪಾಡಲು ತುಂಬಾ ಸಹಾಯ ಮಾಡುತ್ತದೆ ಹಾಗಾಗಿ ಹೆಣ್ಣು ಮಕ್ಕಳು ತಪ್ಪದೆ ಇನ್ನು ಮುಂದೆ ಬಳೆಗಳನ್ನು ಧರಿಸಿಸುವುದು ತುಂಬಾ ಒಳ್ಳೆಯದು.

Comments are closed.