ಮಂಗಳೂರು : ಸನಾತನ ಭಾರತ ಕಲಾ ಸಂಸ್ಕೃತಿ ಉಳಿಸುವ ಕಾರ್ಯ ಸಂಸ್ಕಾರ ಭಾರತಿಯ ಕಾರ್ಯಚಟುವಟಿಕೆಗಳ ಬಗ್ಗೆ ಮತ್ತು ಕೊರೊನದಂತಹ ಮಹಾಮಾರಿಯ ಸಂದರ್ಭ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಸಂಸ್ಕಾರ ಭಾರತಿ ಕಲಾ ಪುರಸ್ಕಾರ ಕಾರ್ಯಕ್ರಮದ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಮೆಚ್ಚುಗೆಯ ಮಾತನ್ನಾಡಿದರು.
ಯಕ್ಷಗಾನ, ದೈವಾರಾಧನೆ, ನಾಟಕ, ಸಂಗೀತ ಮುಂತಾದ ಕಲಾಕ್ಷೇತ್ರದಲ್ಲಿ ಪ್ರಾಮಾಣಿಕ ಕಲಾಸೇವೆ ಮಾಡುತ್ತಿರುವ ನಿಟ್ಟೆ ಶಿಕ್ಷಣ ಸಂಸ್ಥೆಯ ವತಿಯಿಂದ ಗೌರವ ನಿಧಿಯೊಂದಿಗೆ ಸಂಸ್ಕಾರ ಭಾರತಿ ಕಲಾ ಪುರಸ್ಕಾರ ನೀಡಲಾಯಿತು.
ಹೋಟೆಲ್ ಅಟ್ಟಣೆ ಸಭಾಂಗಣ, ಗರೋಡಿ, ಮಂಗಳೂರು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮ ನ ಪಾ ಮೇಯರ್ ದಿವಾಕರ್ ಪಾಂಡೇಶ್ವರ್, ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸತೀಶ್ ರಾವ್, ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯರಾದ ಸೂರ್ಯನಾರಾಯಣ ಭಟ್ ಕಶೆಕೋಡಿ, ದ.ಕ. ಜಿಲ್ಲಾ ಕ ಸಾ ಪ ಅಧ್ಯಕ್ಷ ಎಸ್ ಪ್ರದೀಪ್ ಕುಮಾರ್ ಕಲ್ಕೂರ, ಸ್ಥಳೀಯ ಕಾರ್ಪೊರೇಟರ್ ಸಂದೀಪ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಂಸ್ಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಪ್ರಸ್ತಾವನೆಗೈದರು. ಸಂಸ್ಕಾರ ಭಾರತಿ ಮಂಗಳೂರು ಅಧ್ಯಕ್ಷ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕಾರ ಭಾರತಿಯ ಪ್ರಾಂತ ಕಾರ್ಯದರ್ಶಿ ನಾಗರಾಜ್ ಶೆಟ್ಟಿ ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆ ಶಾರದಾಮಣಿ ಶೇಖರ್ ಉಪಸ್ಥಿತರಿದ್ದರು. ಮಂಗಳೂರು ಸಮಿತಿಯ ಧನಪಾಲ್ ಶೆಟ್ಟಿಗಾರ್, ಗಣೇಶ್ ಕುಮಾರ್, ಶ್ರೀಲತಾ ನಾಗರಾಜ್, ಶ್ರೀಮತಿ ರತ್ನಾವತಿ ಬೈಕಾಡಿ, ಹರಿಪ್ರಸಾದ್ ರೈ, ಶ್ರೀಮತಿ ಪ್ರಭಾ ಕುಲಾಲ್, ರಘುವೀರ್ ಗಟ್ಟಿ, ಕಿರಣ್ ಕುಮಾರ್, ಸುಜೀರ್ ವಿನೋದ್ ಸಹಕರಿಸಿದರು.ಪ್ರಧಾನ ಕಾರ್ಯದರ್ಶಿ ಮಾಧವ ಭಂಡಾರಿ ವಂದಿಸಿದರು.
Comments are closed.