ಯಾರನ್ನಾದರೂ ನಿಮ್ಮ ವಯಸ್ಸು ಎಷ್ಟು ಅಂತ ಕೇಳಿ? ಒಂದೆರೆಡು ಮೂರು ವರ್ಷ ಕಡಿಮೆ ಹೇಳ್ತಾರೆ. ಅವರ ವಯಸ್ಸಿಗಿಂತಲೂ ಚಿಕ್ಕವರಾಗಿ ಕಾಣಲು ಬಯಸುವುದು ಸಹಜ ತಾನೆ. ಅದರಲ್ಲೂ ಈ ವಿಚಾರದಲ್ಲಿ ಮಹಿಳೆಯರ ಪಾತ್ರವೇ ಹೆಚ್ಚು. ಇದಕ್ಕೆ ಮಹಿಳೆಯರು ಮೇಕಪ್ ಮೊರೆ ಹೋಗೋದೇ ಹೆಚ್ಚು…!
ಅದಕ್ಕೆ ಹುಡುಗಿಯರು ಮೇಕಪ್ ತೆಗದ್ರೆ ಹತ್ತು ವರ್ಷ ಮುಂದೆ ಹೋಗ್ತಾರೆ. ಹುಡುಗರು ಗಡ್ಡ ಮೀಸೆ ತೆಗುದ್ರೆ 10 ವರ್ಷ ಹಿಂದೆ ಹೋಗ್ತಾರೆ ಅಂತಾ ಕಿಂಡಲ್ ಮಾಡ್ತಾರೆ. ಆದರೆ ಚೆನ್ನಾಗಿ ಯಂಗ್ ಆಗಿ ಕಾಣಲು ಯಾವುದೇ ಡ್ರಸ್ ಮೇಕಪ್ ಮೊರೆ ಹೋಗ್ಬೇಡಿ ನಾವೇಳೋ ಸಿಂಪಲ್ ಟಿಪ್ಸ್ ಅನುಸರಿಸಿ ಸಾಕು.
ಬಟರ್ ಫ್ರೂಟ್
ಬೆಣ್ಣೆ ಹಣ್ಣು ಎಂದೊಡನೆ ಕೊಬ್ಬಿನಾಂಶ ಹೆಚ್ಚಿದೆ ಎಂದು ಹಿಂಜರಿಯುವವರೇ ಹೆಚ್ಚು. ಆದರೆ ಇದು ತಪ್ಪು ಭಾವನೆ. ಇದರಲ್ಲಿರುವ ಕೊಬ್ಬಿನಾಂಶ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಬೇಕಾಗಿರುವ ಕೊಬ್ಬಿನಾಂಶ ಹೆಚ್ಚಾಗಿ ಸಿಗುತ್ತದೆ. ಚರ್ಮದ ಕಾಂತಿ ಹೆಚ್ಚುತ್ತದೆ. ಚರ್ಮ ಸುಕ್ಕು ಕಟ್ಟದಂದೆ ಮಾಡುತ್ತದೆ. ನಿಮ್ಮ ವಯಸ್ಸು ದಿನಕಳೆದಂತೆ ಹಿಂದಕ್ಕ ಜಾರುತ್ತದೆ. ದಿನಕ್ಕೆ ಒಂದು ಬೆಣ್ಣೆ ಹಣ್ಣು ತಿನ್ನಿ ನಿಮಗೆ ಇದರ ಮಹತ್ವ ತಿಳಿಯುತ್ತದೆ.
ಆಲಿವ್ ಎಣ್ಣೆ
ದಿನನಿತ್ಯ ಉಪಯೋಗಿಸುವ ಆಹಾರದಲ್ಲಿ ಆಲಿವ್ ಎಣ್ಣೆ ಬಳಸುವುದು ಬಹಳ ಒಳ್ಳೆಯದು. ದಿನ ನಿತ್ಯ ಮಲಗುವ ಮುನ್ನ ಕೈ, ಕಾಲು ಮತ್ತು ಮುಖಕ್ಕೆ ಆಲಿವ್ ಎಣ್ಣೆ ಹಚ್ಚುತ್ತಾ ಬನ್ನಿ. ಚರ್ಮ ಕಾಂತಿಯುತವಾಗಗುತ್ತಲ್ಲದೇ ಸುಕ್ಕು ಬಾರದಂತೆ ತಡೆಯುತ್ತದೆ. ಅಲ್ಫಾಲಿನೋಲಿಕ್ ಆಸಿಡ್ ಇರುವುದರಿಂದ ಚರ್ಮವನ್ನು ಆರೋಗ್ಯವಾಗಿ ಇಡುತ್ತದೆ. ಕಣ್ಣಿನ ಸುತ್ತ ಬರುವ ಕಪ್ಪು ವರ್ತುಲದಿಂದ ದೂರ ಉಳಿಯಬಹುದು.
ಕ್ಯಾರೆಟ್ ಜ್ಯೂಸ್
ನೀವು ಸದಾ ಯಂಗ್ ಆಗಿ ಫ್ರಶ್ ಆಗಿ ಕಾಣೋಕೆ ದಿನಕ್ಕೆ 2 ಬಾರಿ ಕ್ಯಾರೆಟ್ ಜ್ಯೂಸ್ ಕುಡಿದ್ರೆ ಸಾಕು. ಚರ್ಮವನ್ನು ಯು ವಿ ಕಿರಣಗಳಿಂದ ರಕ್ಷಿಸುತ್ತದೆ. ಕಣ್ಣಿನ ಆರೋಗ್ಯಕ್ಕೂ ಕ್ಯಾರೆಟ್ ತುಂಬಾ ಒಳ್ಳೆಯದು.
ಬೆಳ್ಳುಳ್ಳಿ
ದಿನನಿತ್ಯ ನೀವು ಸೇವಿಸುವ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಬಳಸಿ. ಫಂಗಲ್ ಮತ್ತು ಬ್ಯಾಕ್ಟೀರಿಯಾ ದಿಂದ ದೂರ ಮಾಡೋಕೆ ಬೆಳ್ಳುಳ್ಳಿ ತುಂಬಾನೇ ಸಹಾಯಕಾರಿ. ವಯಸ್ಸಾಗೋದನ್ನ ತಡೆಯುವುದಲ್ಲದೆ, ರಕ್ತಸಂಭಂದಿ ಖಾಯಿಲೆಯಿಂದ ದೂರ ಉಳಿಯುವಂತೆ ಮಾಡುತ್ತದೆ.
ಡಾರ್ಕ್ ಚಾಕೊಲೆಟ್
ಡಾರ್ಕ್ ಚಾಕೊಲೇಟ್ ನಲ್ಲಿ ಫ್ಲಾವಿನಾಯಿಡ್ಸ್ ಅನ್ನೋ ಆಂಟಿ ಆಕ್ಸಿಡೆಂಟ್ ಇರೋ ಕಾರಣ ಯು ವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ನೀವು ತಿನ್ನೋ ಡಾರ್ಕ್ ಚಕೊಲೇಟ್ ನಲ್ಲಿ 75% ರಷ್ಟು ಭಾಗವಾದ್ರು ಕೋಕೋ ಅಂಶ ಇರಬೇಕು.
Comments are closed.