ಶಿವಮೊಗ್ಗ/ಉಡುಪಿ: ಕೊರೊನಾ ಮಹಾಮಾರಿ ಆತಂಕದ ಹಿನ್ನಲೆಯಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
ಹೊರರಾಜ್ಯ ಹಾಗೂ ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಕೊರೊನಾ ಹರಡುವ ಆತಂಕದದಿಂದಾಗಿ ಜೋಗ ಜಲಪಾತ ವೀಕ್ಷಣೆಗೆ ತಿಂಗಳುಗಟ್ಟಲೆ ನಿಷೇಧ ಹೇರಲಾಗಿತ್ತು. ಆದರೆ ಸದ್ಯ ಕೆಲವು ದಿನಗಳಿಂದ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶವಿದ್ದರೂ ಕೋವಿಡ್ ಭಯದ ಹಿನ್ನೆಲೆಯಲ್ಲಿ ಜನರೇ ಬರುತ್ತಿಲ್ಲ. ಜೂನ್ ತಿಂಗಳಿನಿಂದ ಆರಂಭಿಸಿ ಆಗಸ್ಟ್ ಕೊನೆಯವರೆಗೂ ವಾರಾಂತ್ಯದಲ್ಲಿ ಸಾವಿರಾರು ಜನರು ಆಗಮಿಸುತ್ತಿದ್ದರು. ಆದರೆ ಈಗ ಬೆರಳೆಣಿಕೆಯ ಪ್ರವಾಸಿಗರು ಮಾತ್ರವೇ ಬರುತ್ತಿರುವುದು ಕೊರೋನಾ ಬಿಸಿ ಜೋಗ ಜಲಪಾತಕ್ಕೂ ತಟ್ಟಿದಂತಾಗಿದೆ. ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿ ಬರುವ ಹಿನ್ನೆಲೆ ಸ್ಥಳೀಯ ವರ್ತಕರಿಗೂ ಯಾವುದೇ ವ್ಯಾಪಾರ ವಹಿವಾಟು ಇಲ್ಲದಂತಾಗಿದೆ.
ಮುಂಜಾಗೃತಾ ಕ್ರಮಗಳೇನು?
ಕೊರೋನಾ ಜಾಗೃತಿಯ ಸರ್ಕಾರದ ಸೂಚನೆ ಮೇರೆಗೆ ಜೋಗ ಜಲಪಾತಕ್ಕೆ ಎಂಟ್ರಿ ಕೊಡುವ ಮುಖ್ಯ ದ್ವಾರದಲ್ಲಿ ಒಬ್ಬೊಬ್ಬರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ ಅಲ್ಲದೆ ಸ್ಯಾನಿಟೈಸರ್ ಹಾಕಲಾಗುತ್ತೆ. ಪ್ರವಾಸಿಗರು ಒಳಕ್ಕೆ ತೆರಳಲು ಮಾಸ್ಕ್ ಕಡ್ಡಾಯವಾಗಿದೆ. ಹೆಚ್ಚು ಗುಂಪು ಸೇರದಿರಲು, ಮಾಸ್ಕ್ ಕಡ್ಡಾಯ ವಿಚಾರದಲ್ಲಿ ಅಲ್ಲಿನ ಸಿಬ್ಬಂದಿಗಳು ಎಚ್ಚರಿಕೆ ನೀಡುತ್ತಿರುತ್ತಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.