ಆರೋಗ್ಯ

ವ್ಯಾಕ್ಸಿಂಗ್ ಬಳಿಕ ಬರುವ ತುರಿಕೆಯನ್ನು ಕಡಿಮೆ ಮಾಡಲು ಈ ಟಿಪ್ಸ್

Pinterest LinkedIn Tumblr

ವ್ಯಾಕ್ಸಿಂಗ್‌ಗಿಂತ ಮೊದಲೇ ಡೆಡ್ ಸ್ಕಿನ್ ಕೋಶವನ್ನು ತೆಗೆಯಲು ಮೃದುವಾದ ಸ್ಕ್ರಬ್ಬಿಂಗ್ ಬಳಸಿ ತ್ವಚೆಯನ್ನು ಮೃದುವಾಗಿ ಉಜ್ಜಿ. ವ್ಯಾಕ್ಸಿಂಗ್‌ನ ಎರಡು ದಿನ ಮೊದಲು ಹೀಗೆ ಮಾಡುವುದರಿಂದ ವ್ಯಾಕ್ಸಿಂಗ್ ಬಳಿಕ ಬರುವ ತುರಿಕೆಯನ್ನು ಕಡಿಮೆ ಮಾಡಬಹುದು.

ವ್ಯಾಕ್ಸಿಂಗ್ ಮಾಡಿದ ತಕ್ಷಣ ಬಿಸಿಲಿಗೆ ಹೋಗದಿರಿ ಬಿಸಿನೀರಿನಲ್ಲಿ ಸ್ನಾನ ಮಾಡದಿರಿ ತ್ವಚೆಯ ಆರೈಕೆಯತ್ತ  ಹೆಚ್ಚಿನ ಗಮನ ಕೊಡಿ

ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು, ಇದಕ್ಕೆ ಒಂದು ಚಮಚ ಮೊಸರು ಸೇರಿಸಿ ನುಣ್ಣಗೆ ಅರೆಯಬೇಕು. ಈ ಪೇಸ್ಟ್ ಅನ್ನು ನಯವಾಗಿ ಮಸಾಜ್ ಮಾಡಬೇಕು. ಸುಮಾರು ಇಪ್ಪತ್ತು ನಿಮಿಷ ಹಾಗೇಯೇ ಬಿಡಬೇಕು. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆಯಬೇಕು.

ಮುಖದ ಕಪ್ಪು ಕಲೆಗಳು ಮಾಯ

ಮುಖದ ಸೌಂದರ್ಯದ ಕುರಿತು ಎಲ್ಲರೂ ಕೂಡ ಬಹಳ ಕಾಳಜಿ ವಹಿಸುತ್ತಾರೆ. ಅದರಲ್ಲೂ ಮಹಿಳೆಯರಂತೂ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಸುಂದರವಾಗಿ ಕಾಣಲು ಏನೆಲ್ಲಾ ಕಸರತ್ತನ್ನು ಮಾಡುತ್ತಾರೆ. ಮುಖದಲ್ಲಿ ಒಂದು ಸಣ್ಣ ಗುಳ್ಳೆ ಮೂಡಿದರೂ ಸಹ ಇಲ್ಲದ ಫೇಸ್ ವಾಶ್ ಉಪಯೋಗಿಸಿ ಬ್ಯೂಟಿ ಪಾರ್ಲರ್‌ಗಳಿಗೆ ಹೋಗುತ್ತಿರುತ್ತಾರೆ. ಈ ಕೆಲವೊಮ್ಮೆ ಇದರಿಂದ ಹಣ ಕೂಡ ವ್ಯಯವಾಗುತ್ತದೆ.
ಆದರೆ, ಯಾವುದೇ ರೀತಿಯ ಖರ್ಚಿಲ್ಲದೇ ಬಹಳ ಸುಲಭವಾಗಿ ಮುಖದ ಮೇಲೆ ಮೂಡುವ ಕಪ್ಪು ಕಲೆಗಳನ್ನು ನಿವಾರಿಸಬಹುದಾಗಿದೆ. ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಉಪಯೋಗಿಸಿ ತಯಾರಿಸಿದ ಫೇಸ್ ವಾಶ್ ಅನ್ನು ಬಳಸಿ ಮುಖದಲ್ಲಿರುವ ಕಪ್ಪು ಕಲೆಯನ್ನು ನಿವಾರಿಸಿ ಸುಂದರವಾಗಿ ಕಾಣಬಹುದಾಗಿದೆ.

ಜಾಯಿಕಾಯಿಗಳನ್ನು ಅಡುಗೆ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ಜಾಯಿ ಕಾಯಿಯನ್ನು ಹಾಲಿನಲ್ಲಿ ಅರೆದು ಮುಖಕ್ಕೆ ಹಚ್ಚಿ. ವಾರದಲ್ಲಿ ೨ ಬಾರಿ ಹೀಗೆ ಮಾಡುತ್ತಾ ಬಂದರೆ ಕಪ್ಪು ಕಲೆಗಳು ಮಾಯವಾಗುತ್ತವೆ.

Comments are closed.