ಕರಾವಳಿ

ಮೀನು ಕೃಷಿಕರಿಗೆ ವಿವಿಧ ಯೋಜನೆಗಳಿಗೆ ಹಾಗೂ ಮೀನುಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು : ಮೀನುಗಾರಿಕೆ ಇಲಾಖೆಯಿಂದ ಕಾಟ್ಲಾ, ರೋಹು, ಸಾಮಾನ್ಯಗೆಂಡೆ ಜಾತಿಯ ಮೀನು ಮರಿಗಳನ್ನು ಜುಲೈ, ಅಗೋಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಸರಕಾರ ನಿಗದಿಪಡಿಸಿದ ದರದಂತೆ ವಿತರಿಸಲಾಗುವುದು. ಆಸಕ್ತ ಮೀನು ಕೃಷಿಕರು ಮೀನುಮರಿಗಳಿಗೆ ಬೇಡಿಕೆಯನ್ನು ಸಲ್ಲಿಸುವ ಜೊತೆಗೆ ಕೊಳದ ವಿವರ ವಿಸ್ತೀರ್ಣದ ವಿವರವನ್ನೂ ಕೂಡ ನೀಡುವಂತೆ ತಿಳಿಸಿದೆ.

ಇಲಾಖೆಯ ಜಿಲ್ಲಾ ಪಂಚಾಯತ್ ಯೋಜನೆಯಡಿ ಗ್ರಾಮಾಂತರ ಪ್ರದೇಶದ ಮೀನು ಮಾರಾಟ ವೃತ್ತಿಯಲ್ಲಿ ನಿರತರಾಗಿರುವವರಿಗೆ ಮೀನು ಸಾಗಾಟ ಮಾರಾಟಕ್ಕೆ ಮತ್ಸ್ಯವಾಹಿನಿ ಯೋಜನೆಯಡಿ ವಾಹನ ಖರೀದಿಗಾಗಿ ಸಹಾಯಧನ ನೀಡಲಾಗುವುದು.

ಮೀನನ್ನು ಇಳಿದಾಣ ಕೇಂದ್ರಗಳಿಂದ ತಾಜಾ ಹಾಗೂ ಆರೋಗ್ಯಕರ ರೀತಿಯಲ್ಲಿ ಮಾರಾಟ ಸ್ಥಳಗಳಿಗೆ ತ್ವರಿತವಾಗಿ ಸಾಗಾಣಿಕೆ ಮಾಡಲು ಅನುಕೂಲವಾಗುವಂತೆ ನಿರುದ್ಯೋಗಿ ಮೀನುಗಾರರು, ಮೀನುಗಾರ ಮಹಿಳೆಯರು, ಮೀನುಗಾರರ ಸಹಕಾರ ಸಂಘದ ಸದಸ್ಯರು ಅಥವಾ ಸ್ವಸಹಾಯ ಗುಂಪುಗಳು ಅಂದರೆ ಮೂರು ಅಥವಾ ನಾಲ್ಕು ಫಲಾನುಭವಿಗಳ ಗುಂಪಿಗೆ ತ್ರಿಚಕ್ರ, ನಾಲ್ಕುಚಕ್ರ ವಾಹನ ಖರೀದಿಗೆ ಸಹಾಯಧನ ನೀಡಲು ಅವಕಾಶವಿದೆ.

ಈ ಕಾರ್ಯಕ್ರಮದಡಿ ಒಂದು ಹೊಸ ತ್ರಿಚಕ್ರ ಮೀನು ಸಾಗಾಟ ವಾಹನವನ್ನು ಖರೀದಿಸಲು ಗರಿಷ್ಠ ರೂ.30 ಸಾವಿರ ಹಾಗೂ ನಾಲ್ಕು ಚಕ್ರದ ಮೀನು ಸಾಗಾಟ ವಾಹನವನ್ನು ಖರೀದಿಸಲು ಗರಿಷ್ಠ ರೂ.35 ಸಾವಿರ ಮಿತಿಯೊಳಗೆ ಸಹಾಯಧನ ನೀಡಲಾಗುವುದು. ಉಳಿದ ಮೊತ್ತವನ್ನು ಫಲಾನುಭವಿಯು ಬ್ಯಾಂಕ್ ಇಲ್ಲವೇ ಇತರ ಮೂಲಗಳಿಂದ ಭರಿಸಬೇಕು.

ಮೀನು ಕೃಷಿಕೊಳ ಹೊಂದಿದ್ದು, ಮೀನು ಕೃಷಿಯಲ್ಲಿ, ಮೀನುಗಾರಿಕೆಯಲ್ಲಿ ನಿರತರಾಗಿರುವ ಪರಿಶಿಷ್ಟ ಜಾತಿ ಮೀನುಗಾರರಿಗೆ ರೂ.10 ಸಾವಿರ ಮೌಲ್ಯದ ಮೀನು ಹಿಡಿಯುವ ಪರಿಕರಗಳನ್ನು ಖರೀದಿಸಿ ಕಿಟ್‌ರೂಪದಲ್ಲಿ ಉಚಿತವಾಗಿ ನೀಡುವ ಬಗ್ಗೆ ಅರ್ಜಿ ಆಹ್ವಾನಿಸಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ- 0824-2421680,9606313259, ಅಥವಾ ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಗ್ರೇಡ್-2), ಮಾಹಿತಿ ಕೇಂದ್ರ ಕಟ್ಟಡ, ಸೌತ್ ವಾರ್ಫ್, ಬಂದರು, ಮಂಗಳೂರು 575001 ಗೆ ಸಂಪರ್ಕಿಸಬಹುದು ಎಂದು ಮಂಗಳೂರು. ಮೀನುಗಾರಿಕೆ ಸಹಾಯಕ ನಿರ್ದೇಶಕರು,(ಗ್ರೇಡ್-1) ಪ್ರಕಟನೆ ತಿಳಿಸಿದೆ.

Comments are closed.