ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೆ ಎಷ್ಟು ಮುಖ್ಯವೋ, ಹುಟ್ಟುವ ಮಗುವಿನ ಬೆಳವಣಿಗೆಗೂ ಅಷ್ಟೇ ಮುಖ್ಯ. ತಾಯಿ ತಿನ್ನುವ ಆಹಾರ ಮಗುವಿನ ಮೇಲೆ ಪ್ರಭಾವ ಬಿರುತ್ತದೆ.
ಸಂಶೋಧನೆಗಳ ಪ್ರಕಾರ ಕುರುಕಲು ತಿಂಡಿ ಮತ್ತು ಎಣ್ಣೆಯ ಚಿಪ್ಸ್ ಮಗುವಿಗೆ ಅಪಾಯಕಾರಿ ಎನ್ನಲಾಗಿದೆ. ಅದರಲ್ಲೂ ಆಲೂಗಡ್ಡೆ ಚಿಪ್ಸ್ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅತಿಯಾದ ಆಲೂಗಡ್ಡೆ ಚಿಪ್ಸ್ ಸೇವಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಮದ್ಯಪಾನ ಕಡ್ಡಾಯವಾಗಿ ಮಾಡಬಾರದು. ಅದು ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದಿನವಿಡೀ ಕೆಫೆನ್ ನಿಂದ ತುಂಬಿರುವ ಆಹಾರವನ್ನು ಸೇವಿಸಬಾರದು. ಪಪ್ಪಾಯ ಮತ್ತು ಅನಾನಸು ಹಣ್ಣುಗಳಿಂದ ದೂರವಿರಬೇಕು. ಮಿತವಾಗಿ ಮೀನು ಸೇವನೆ ಮಾಡಬಹುದು. ಹಸಿ ಮಾಂಸ, ಹಸಿ ಹಾಲು ಸೇವಿಸಬಾರದು.
Comments are closed.