ಕರಾವಳಿ

ಬೈಂದೂರಿನ ಉಪ್ಪುಂದದಲ್ಲಿ ಅಂದರ್-ಬಾಹರ್ ಇಸ್ಪಿಟ್ ಆಟ: 10 ಮಂದಿ ಜುಗಾರಿಕೋರರು ಅಂದರ್

Pinterest LinkedIn Tumblr

ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪಿಟ್ ಜುಗಾರಿ ಆಡುತ್ತಿದ್ದ ಹತ್ತು ಮಂದಿಯನ್ನು ಬೈಂದೂರು ಪೊಲೀಸ್ ಠಾಣೆ ಪ್ರಭಾರ ಪಿಎಸ್ಐ ಭೀಮಾಶಂಕರ್ ಸಿನ್ನೂರ ಸಂಗಣ್ಣ ಹಾಗೂ ಸಿಬ್ಬಂದಿಗಳ‌ ತಂಡ ಬಂಧಿಸಿದ ಘಟನೆ ಬುಧವಾರ ನಡೆದಿದೆ.

ಜಡ್ಕಲ್ ನಿವಾಸಿ ರಘುರಾಮ ಶೆಟ್ಟಿ (44), ಉಪ್ಪುಂದ ನಿವಾಸಿ ನಾಗರಾಜ ಖಾರ್ವಿ(24 ), ಯಡ್ತರೆಯ ಪ್ರಶಾಂತ ಪೂಜಾರಿ (30), ಉಪ್ಪುಂದ ನಿವಾಸಿಗಳಾದ ಗೋಪಾಲಕೃಷ್ಣ ಖಾರ್ವಿ (21), ಕೃಷ್ಣ ಖಾರ್ವಿ (30), ನಾರಾಯಣ ಖಾರ್ವಿ (35), ಉದಯ ಖಾರ್ವಿ(38), ರಾಮ ಖಾರ್ವಿ (35) , ನಾಗರಾಜ ಖಾರ್ವಿ ( 32), ಮಂಜುನಾಥ ಖಾರ್ವಿ (32) ಬಂಧಿತರು.

ಉಪ್ಪುಂದ ಗ್ರಾಮದ ಶಾಲೆಬಾಗಿಲು ಪೋಸ್ಟ್ ಆಫೀಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಿಕ್ಕಿದಂತೆ ಪೊಲೀಸರು ದಾಳಿ ನಡೆಸಿದ್ದು ಗಂಗೊಳ್ಳಿ ಠಾಣಾ ಪ್ರೊಬೆಷನರಿ ಪಿ.ಎಸ್.ಐ ದೇವರಾಜ್ ಸಿದ್ದಣ್ಣ ಬಿರಾದಾರ್ , ಸಿಬ್ಬಂದಿಗಳಾದ ಮೌನೇಶ್, ಕೇಶವ ಈ ದಾಳಿ‌ ನಡೆಸಿದ್ದಾರೆ.

ಬಂಧಿತರಿಂದ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟಕ್ಕೆ ಉಪಯೋಗಿಸಿದ 15,710 ರೂ ನಗದು ಹಾಗೂ ವಿವಿಧ ಜಾತಿಯ ಇಸ್ಪೀಟ್ ಎಲೆಗಳು 52 ,ಹಾಗೂ ನೆಲಕ್ಕೆ ಹಾಸಿದ ಹಳೆಯ ಪ್ಲಾಸ್ಟಿಕ್ ಚೀಲ ವಶಕ್ಕೆ ಪಡೆಯಲಾಗಿದೆ.

ಬೈಂದೂರು ‌ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.