ಆರೋಗ್ಯ

ಉಡುಪಿಗೆ ಸೋಮವಾರ ಕೊರೋನಾಘಾತ: 14 ಮಂದಿಗೆ ಕೋವಿಡ್ ಪಾಸಿಟಿವ್

Pinterest LinkedIn Tumblr

ಉಡುಪಿ: ಬೈಂದೂರಿನ ಪೊಲೀಸ್‌ ಸಿಬ್ಬಂದಿ, ಶಿರೂರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಇಂದು 14 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ.

ಜಿಲ್ಲೆಯಲ್ಲಿ ಇಂದು 67 ಸ್ಯಾಂಪಲ್ ಗಳ ಪರೀಕ್ಷೆ ವರದಿ ಜಿಲ್ಲಾಡಳಿತದ ಕೈಸೇರಿದ್ದು, ಅದರಲ್ಲಿ 53 ಸ್ಯಾಂಪಲ್ ಗಳು ನೆಗೆಟಿವ್ ಬಂದಿದೆ. ಅದರಲ್ಲಿ 14 ಜನರ ಕೋವಿಡ್ ವರದಿ ಪಾಸಿಟಿವ್ ಆಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1077ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 961 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದು, ಸದ್ಯ ಜಿಲ್ಲೆಯಲ್ಲಿ 114 ಸಕ್ರಿಯ ಸೋಂಕು ಪ್ರಕರಣಗಳಿವೆ.

ಇಂದಿನ ಸೋಂಕಿತರಲ್ಲಿ ಎಂಟು ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಇಬ್ಬರ ಸೋಂಕು ಸಂಪರ್ಕ ಪತ್ತೆ ಹಚ್ಚಲಾಗುತ್ತಿದ್ದು, ಸೋಂಕಿತ ಸಂಖ್ಯೆ 6843ರ ಸಂಪರ್ಕದಿಂದ ನಾಲ್ವರಿಗೆ ಸೋಂಕು ಹರಡಿರುವುದು ದೃಢವಾಗಿದೆ.

Comments are closed.