ಆರೋಗ್ಯ

ಬೈಂದೂರು ಠಾಣೆಯಲ್ಲಿ ಇನ್ನೊಬ್ಬರಿಗೆ ಕೊರೋನಾ ಪಾಸಿಟಿವ್ ದೃಢ, ಶಿರೂರು ಆರೋಗ್ಯಕೇಂದ್ರದ ಸಿಬ್ಬಂದಿಗೂ ಪಾಸಿಟಿವ್

Pinterest LinkedIn Tumblr

ಕುಂದಾಪುರ: ಬೈಂದೂರು ಪೊಲೀಸ್ ಠಾಣೆಯ ಮಹಿಳಾ ಕಾನ್ಸ್‍ಸ್ಟೇಬಲ್ ಒಬ್ಬರಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದೆ. ಜೂನ್ 21ರಂದು ಇದೇ ಠಾಣೆಯ ಕಾನ್ಸ್‍ಸ್ಟೇಬಲ್ ಒಬ್ಬರಿಗೂ ಪಾಸಿಟಿವ್ ದೃಢಪಟ್ಟಿದ್ದು, ಇವತ್ತು ಅದೇ ಠಾಣೆಯ ಇನ್ನೊರ್ವರಿಗೆ ಕಾನ್ಸ್‍ಸ್ಟೇಬಲ್‍ಗೆ ಪಾಸಿಟಿವ್ ಕಂಡು ಬಂದಿದೆ.
ಬೈಂದೂರು ಠಾಣೆಯನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೇ ಕೊರೊನಾ ತಗಲಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಬೈಂದೂರು ಪೊಲೀಸ್ ಠಾಣೆ ಹಾಗೂ ವೃತ್ತ ನಿರೀಕ್ಷಕರ ಕಛೇರಿಯನ್ನು ಮುಚ್ಚಲಾಗಿದ್ದು, ಸ್ಯಾನಿಟೈಸರ್ ಮಾಡಿದ ಬಳಿಕ ಮತ್ತೆ ಠಾಣೆಯನ್ನು ತೆರೆಯಲಾಗುವುದು. ಹಾಗೂ ಎಲ್ಲಾ ಸಿಬ್ಬಂದಿಗಳನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಲಾಗಿದೆ. ಹಳೆಯ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಕುಂದಾಪುರ ಉಪ ವಿಭಾಗದ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಆತ್ತ ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಭಯ ಹುಟ್ಟಿಸಿದೆ. ಅಲ್ಲಿನ ಹಿರಿಯ ಆರೋಗ್ಯ ಸಹಾಯಕಿಯಲ್ಲಿಯೂ ಕೊರೋನಾ ದೃಢ ಪಟ್ಟಿದೆ. ಆರೋಗ್ಯ ಕೇಂದ್ರವನ್ನು ಬಂದ್ ಮಾಡಲಾಗಿದೆ. ಈಗಾಗಲೇ ಪಾಸಿಟಿವ್ ಕಾಣಿಸಿಕೊಂಡವರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದೆ.

Comments are closed.