ಆರೋಗ್ಯ

ಲಿವರ್ ನಲ್ಲಿನ ನಂಜನ್ನು ಹೊರಹಾಕಲು ಸಹಕಾರಿ ಬೆಲ್ಲ

Pinterest LinkedIn Tumblr

ಬೆಲ್ಲವನ್ನು ನಾವು ಅದ್ಭುತವಾದ ಸಿಹಿ ಎಂದು ಪರಿಗಣಿಸಬಹುದು, ಏಕೆಂದರೆ ಸಾಮಾನ್ಯವಾಗಿ ಸಿಹಿಯನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಆದರೆ ಬೆಲ್ಲ ಸಿಹಿಯಾದರು ತನ್ನಲ್ಲಿ ಅದ್ಬುತ ಶಕ್ತಿ ಇಂದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಬೆಲ್ಲದ ಚಿಕಿತ್ಸಕ ಮತ್ತು ಪೌಷ್ಟಿಕಾಂಶದ ಆರೋಗ್ಯ ಪ್ರಯೋಜನಗಳಿಂದ ಇದನ್ನು ಹಲವು ವರ್ಷಗಳಿಂದ ವಿಶ್ವದಾದ್ಯಂತ ಉಪಯೋಗಿಸುತ್ತಿರುವರು. ಇದು ಸುಕ್ರೋಸ್ ರೂಪದಲ್ಲಿ ಸಿಹಿಯ ಅಂಶವನ್ನು ಹೊಂದಿದೆ. ಬೆಲ್ಲದ ಪ್ರಯೋಜನಗಳನ್ನು ನಾವು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.

೧.ಉತ್ಕರ್ಷಣ ನಿರೋಧಕಗಳಾಗಿ(Antioxidants) ಕೆಲಸ ಮಾಡುತ್ತವೆ
ಬೆಲ್ಲವು ಉತ್ಕರ್ಷಣ ನಿರೋಧಕಗಳಿಂದ ಮತ್ತು ಸತು ಹಾಗು ಸೆಲೆನಿಯಮ್ ನಂತಹ ಖನಿಜಗಳಿಂದ ಸಮೃದ್ಧವಾಗಿದೆ, ಇವು ಫ್ರೀ-ರಾಡಿಕಲ್ (free-radical) ಗಳ ತಡೆಯುವಿಕೆಗೆ ಸಹಾಯ ಮಾಡುತ್ತವೆ(ಇದು ಬೇಗನೆ ವಯಸ್ಸಾಗುವಂತೆ ಕಾಣುವ ಚಿಹ್ನೆ). ಇದು ಸೋಂಕಿನ ವಿರುದ್ಧ ಪ್ರತಿರೋಧವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದ್ದರಿಂದ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸಲು ಸಹಾಯ ಮಾಡುತ್ತದೆ.

೨.ಮಲಬದ್ದತೆಯನ್ನು ತಡೆಯುತ್ತದೆ
ಬೆಲ್ಲ ನಮ್ಮ ದೇಹದಲ್ಲಿರುವ ಜೀರ್ಣಕ್ರಿಯೆ ಕಿಣ್ವಗಳನ್ನು ಸಕ್ರಿಯೆಗೊಳಿಸುತ್ತದೆ, ಇದು ಕರುಳಿನ ಚಲನವಲನವನ್ನು ಪ್ರಚೋದಿಸುವಂತೆ ಮಾಡುತ್ತದೆ, ಇದರಿಂದ ಮಲಬದ್ಧತೆಯನ್ನು ತಡೆಯಲು ಮತ್ತು ಅದರಿಂದ ಪಾರಾಗಲು ಬೆಲ್ಲ ಸಹಾಯ ಮಾಡುತ್ತದೆ.

೩.ಲಿವರ್ ನಲ್ಲಿನ ನಂಜನ್ನು ಹೊರಹಾಕುತ್ತದೆ
ಬೆಲ್ಲ ಲಿವರ್ ನಲ್ಲಿರುವ ಜೀವಾಣು ವಿಷವನ್ನು ತೆಗೆದುಹಾಕುವುದರ ಮೂಲಕ ಅಥವಾ ಹೊರಹಾಕುವ ಮೂಲಕ ಲಿವರ್ ಅನ್ನು ಸ್ವಚ್ಛಗೊಳಿಸುತ್ತದೆ. ನಿಮ್ಮ ದೇಹದಲ್ಲಿನ ಜೀವಾಣು ವಿಷಗಳನ್ನು ನೀವು ಹೊರಹಾಕಬೇಕು ಎಂದು ಅಂದುಕೊಂಡರೆ ಸ್ವಲ್ಪ ಬೆಲ್ಲವನ್ನು ಸೇವಿಸಿರಿ.

೪.ಶೀತಜ್ವರದಂತಹ ಲಕ್ಷಣಗಳಿಗೆ ಚಿಕಿತ್ಸೆಯಾಗುತ್ತದೆ
ಬೆಲ್ಲ ಶೀತ, ಕೆಮ್ಮು, ಶೀತಜ್ವರ ದಂತಹ ಲಕ್ಷಣಗಳ ವಿರುದ್ಧ ಹೋರಾಡುತ್ತದೆ.

೫.ರಕ್ತವನ್ನು ಶುದ್ದೀಕರಿಸುತ್ತದೆ
ಎಲ್ಲರಿಗು ತಿಳಿದಿರುವಂತಹ ಬೆಲ್ಲದ ಒಂದು ಅದ್ಭುತ ಉಪಯೋಗವೆಂದರೆ ಅದು ಬೆಲ್ಲ ರಕ್ತವನ್ನು ಶುದ್ಧಮಾಡುವುದು. ಬೆಲ್ಲವನ್ನು ನಿಯಮಿತವಾಗಿ ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತವನ್ನು ಶುದ್ಧಮಾಡಿಕೊಳ್ಳಬಹುದು, ಮತ್ತು ಆರೋಗ್ಯಕರ ದೇಹವನ್ನು ಪಡೆಯಬಹುದು.

೬.ಗುಳ್ಳೆ ಮತ್ತು ಮೊಡವೆಯನ್ನು ಗುಣಪಡಿಸುತ್ತದೆ
ಬೆಲ್ಲ ಮೊಡವೆ ಮತ್ತು ಗುಳ್ಳೆಗಳು ತ್ವಚೆಯ ಮೇಲೆ ಬರದಂತೆ ನೋಡಿಕೊಳ್ಳುತ್ತದೆ ಮತ್ತು ಮುಖದ ಚರ್ಮದಲ್ಲಿ ರಿಂಕಲ್ಸ್ ಮತ್ತು ಕಲೆಗಳು ಆಗದಂತೆ ತಡೆಯುತ್ತದೆ.

೭.PMS(Pre-Menstrual Syndrome) ಅನ್ನು ಕಡಿಮೆ ಮಾಡುತ್ತದೆ
ನಿಮ್ಮ ಪಿರಿಯಡ್ ಗೆ ಮೊದಲು ನೀವು ದಿಡೀರ್ ಮನಸ್ಥಿತಿ ಬದಲಾವಣೆಯನ್ನು ಅನುಭವಿಸುವಿರೇ? ಹೌದು ಎಂದರೆ, ಪ್ರತಿದಿನ ಒಂದು ಸಣ್ಣ ಪೀಸ್ ಬೆಲ್ಲವನ್ನು ಪ್ರತಿದಿನ ಸೇವಿಸಿ. ಇದು ನಿಮ್ಮ ದೇಹದಲ್ಲಿ ಹಾರ್ಮೋನುಗಳ ಏರಿಳಿತಗಳ ಕಾರಣದಿಂದ ಆಗುತ್ತದೆ, ಬೆಲ್ಲ ಎಂದೋರ್ಫಿನ್ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ ಅಂದರೆ ಇದು ಖುಷಿಯ ಹಾರ್ಮೋನು ಆಗಿದೆ. ಇದು ನಿಮ್ಮ ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ ಮತ್ತು ಇದರಿಂದ ನೀವು ಆರಾಮದಾಯಕ ಅನುಭವವನ್ನು ಪಡೆಯಬಹುದು.(ನೆನಪಿರಲಿ ಹೆಚ್ಚು ಬೆಲ್ಲವನ್ನು ಸೇವಿಸುವಂತಿಲ್ಲ)

೮.ಉಸಿರಾಟದ ತೊಂದರೆಯನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ
ಬೆಲ್ಲವನ್ನು ನಿಯಮಿತವಾಗಿ ನಿರಂತರ ಸೇವಿಸುವುದರಿಂದ ಅಸ್ತಮಾ ಮತ್ತು ಬ್ರಾಂಕೈಟಿಸ್ ಮುಂತಾದವುಗಳಂತಹ ಉಸಿರಾಟದ ತೊಂದರೆಯಿಂದ ಮುಕ್ತಿ ಪಡೆಯಬಹುದು. ತಜ್ಞರು ಹೆಚ್ಚಿನ ಲಾಭ ಅಥವಾ ಪ್ರಯೋಜನವನ್ನು ಪಡೆಯಲು ಇದನ್ನು ಎಳ್ಳಿನ ಜೊತೆ ಸೇವಿಸಲು ಶಿಫಾರಸ್ಸು ಮಾಡುವರು.

೯.ತೂಕ ಕಡಿಮೆ ಮಾಡಿಕೊಳ್ಳಲು
ನಿಮಗೆ ಆಶ್ಚರ್ಯವಾಗಬಹುದು, ಆದರೆ ನಿಜ ಬೆಲ್ಲ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದಕ್ಕೆ ಕಾರಣ ಬೆಲ್ಲದಲಿರುವ ಪೊಟ್ಯಾಸಿಯಮ್, ಇದು ಒಂದು ಖನಿಜವಾಗಿದ್ದು, ಎಲೆಕ್ಟ್ರೋಲೈಟ್ಸ್ ಗಳನ್ನು ಸಮತೋಲನದಲ್ಲಿಡಲು ಮತ್ತು ಸ್ನಾಯುಗಳ ಚಯಾಪಚಯ ಕ್ರಿಯೆ ಸುಗಮವಾಗಿ ಆಗಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹದ ತೂಕವನ್ನು ಸರಿಯಾಗಿ ಈರಿಸಲು ಸಹಾಯಮಾಡುತ್ತದೆ ಎಂದು ತಜ್ಞರು ಹೇಳುವರು.

೧೦.ರಕ್ತಹೀನತೆಯನ್ನು ತಡೆಯುತ್ತದೆ/ಸರಿಪಡಿಸುತ್ತದೆ
ಬೆಲ್ಲದಲ್ಲಿ ಕಬ್ಬಿಣಾಂಶ ಮತ್ತು ಫೋಲೇಟ್ ಹೇರಳವಾಗಿದ್ದು, ಇದು ಕೆಂಪು ರಕ್ತಕಣಗಳನ್ನು ಸಮತೋಲನದಲ್ಲಿ ಇರಿಸಿ ರಕ್ತಹೀನತೆ ಆಗದಂತೆ ನೋಡಿಕೊಳ್ಳುತ್ತದೆ. ಇದು ವಿಶೇಷವಾಗಿ ಗರ್ಭಿಣಿಯರಿಗೆ ತುಂಬಾ ಪ್ರಯೋಜನಕಾರಿಯಾಗುತ್ತದೆ. ಇದರ ಜೊತೆಗೆ ಬೆಲ್ಲ ತ್ವರಿತ ಶಕ್ತಿಯನ್ನು ನೀಡುತ್ತದೆ, ಇದು ದೇಹದ ಆಯಾಸ ಮತ್ತು ದುರ್ಬಲತೆಯನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.

Comments are closed.