ಮಂಗಳೂರು: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಮಾನತಿನಲ್ಲಿರುವ ಕೆ.ಐ.ಎ.ಡಿ.ಬಿ ವಿಶೇಷ ಭೂಸ್ವಾಧೀನಾಧಿಕಾರಿ ದಾಸೇಗೌಡ ನಿವಾಸದ ಮೇಲೆ ದಾಳಿ ಎಸಿಬಿ ನಡೆದಿದ್ದು, ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧೆಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮನೆ, ಆಸ್ತಿಯ ಮೇಲೆ ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದು, ಇದೇ ವೇಳೆ ಕೆ.ಐ.ಎ.ಡಿ.ಬಿ ವಿಶೇಷ ಭೂಸ್ವಾಧೀನಾಧಿಕಾರಿ ದಾಸೇಗೌಡ ನಿವಾಸದ ಮೇಲೂ ದಾಳಿ ನಡೆದಿದೆ. ಮಂಗಳೂರು ಮತ್ತು ಮಂಡ್ಯದಲ್ಲಿ ಎಸಿಬಿ ಏಕಕಾಲಕ್ಕೆ ದಾಳಿ ನಡೆದಿದ್ದು ಮಂಗಳೂರಿನ ಬಿಜೈಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.
ದಾಸೇಗೌಡ ಅವರಿಗೆ ಸೇರಿದ ಮಂಗಳೂರಿನಲ್ಲಿ ಒಂದು ಫ್ಲಾಟ್ ಹಾಗೂ ಮಂಡ್ಯದಲ್ಲಿ ಮೂರ್ನಾಲ್ಕು ಮನೆ ಪತ್ತೆಯಾಗಿದೆ. ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ದಾಸೇಗೌಡ ಮಂಡ್ಯದ ಗೆಸ್ಟ್ ಹೌಸ್ ನಲ್ಲಿ ಪತ್ತೆಯಾಗಿರುವುದಾಗಿ ಅಧಿಕಾರಿಗಳ ಮೂಲಗಳಿಂದ ತಿಳಿದು ಬಂದಿದೆ.
ಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ದಾಸೇಗೌಡ ಕೆ. ಮಂಗಳೂರಿನಲ್ಲಿ ಡಿ.19 ರಂದು 5 ಲಕ್ಷ ಲಂಚ ಸ್ವೀಕರಿಸಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದು, ಲಂಚ ಸ್ವೀಕಾರ ಆರೋಪದಡಿ ಅಮಾನತ್ತಿನಲ್ಲಿದ್ದರು. ನಗರದಲ್ಲಿ ಕರ್ಫ್ಯೂ ಮತ್ತು ಕೊರೊನಾ ಲಾಕ್ ಡೌನ್ ಇದ್ದಿದ್ರಿಂದ ಕಾರ್ಯಾಚರಣೆ ಮುಂದೂಡಿದ್ದ ಎಸಿಬಿ ಶುಕ್ರವಾರ ದಾಳಿ ಸಂಘಟಿಸಿದೆ.
ದಾಳಿ ಕಾರ್ಯಾಚರಣೆ ಮಂಗಳೂರು ಎಸಿಬಿ ಎಸ್ಪಿ ಉಮಾಪ್ರಶಾಂತ್, ಡಿವೈಎಸ್ಪಿ ಮಂಜುನಾಥ್, ಇನ್ಸ್ ಪೆಕ್ಟರ್ ಯೋಗೀಶ್ ನಾಯ್ಕ್ ನೇತೃತ್ವದಲ್ಲಿ ನಡೆದಿದೆ.


Comments are closed.