ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರವೂ ಮತ್ತೆ 22 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 991ಕ್ಕೆ ಏರಿಕೆಯಾಗಿದೆ.
ಕಳೆದ ಎರಡು ದಿನಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಸೋಂಕಿತರ ವರದಿ ದೃಢ ಪಟ್ಟಿಲ್ಲ ಆದರೆ ಗುರುವಾರ ಮತ್ತೆ 22 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು.
ಇಂದು ವರದಿಯಾದ ಸೋಂಕಿತರ ಪಟ್ಟಿಯಲ್ಲಿ 21 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು ಒಂದು ಸ್ಥಳೀಯ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಪಾಸಿಟಿವ್ ಬಂದ ಲ್ಯಾಬ್ ಟೆಕ್ನಿಶಿಯನ್ ಅವರ ಮನೆಯ 71 ವರ್ಷ ಪ್ರಾಯದ ವೃದ್ದರಿಗೆ ಸೋಂಕು ದೃಢಪಟ್ಟಿದೆ.
Comments are closed.