ಕರಾವಳಿ

ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ ದೇವಾಡಿಗ ಸಮಾಜದ ಬಾಲಕನಿಗೆ ಬ್ರಹ್ಮೋಪದೇಶ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಬಾರಕೂರು ತಮ್ಮ ದೇವರ ಮೂಲ ಸ್ಥಳ ಎನ್ನುವುದನ್ನುನ ಕಂಡುಕೊಂಡ ದೇವಾಡಿಗ ಸಮಾಜದವರು ವಿಶ್ವದಾದ್ಯಂತ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಎರಡು ವರ್ಷದ ಹಿಂದೆ ಶ್ರೀ ಏಕನಾಥೇಶ್ವರೀ ದೇವಿಯನ್ನು ಪ್ರತಿಷ್ಠಾಪಿಸಿ ಕುಲದೇವರು ಅನ್ನುವುದನ್ನು ಕಂಡುಕೊಂಡಿದ್ದರು.

ದೇವಾಡಿಗ ಸಮಾಜವೇ ಒಂದಾದ ದೇವಸ್ಥಾನದಲ್ಲಿ ಜೂನ್ 11 ರಂದು ದೇವಾಡಿಗ ಸಮಾಜದ ಓರ್ವ ಬಾಲಕ ವಟುವಿಗೆ ಉಪನಯನ ಸಂಸ್ಕಾರ ನಡೆದಿದೆ. ಬೈಂದೂರಿನ ಶಿಕ್ಷಕ ದಂಪತಿಗಳಾದ ಜನಾರ್ದನ ದೇವಾಡಿಗ ಮತ್ತು ಭಾರತಿ ಬಾಗಿಲ್ ದಂಪತಿಗಳ ಪುತ್ರ ೧೧ ವರ್ಷ ಅಭಿರಾಮ್ ದೇವಾಡಿಗರಿಗೆ ದೇವಸ್ಥಾನದ ತಂತ್ರಿಗಳಾದ ರಮೇಶ್ ಭಟ್ ಇವರ ನೇತೃತ್ವದಲ್ಲಿ ಪಾದೇ ಮಠ ಸೂರ್ಯ ಅಡಿಗರು ಮಧ್ಯಾಹ್ನ 11.50ರ ಸುಮೂಹೂರ್ಥದಲ್ಲಿ ಉಪನಯನ ಸಂಸ್ಕಾರ, ಗಾಯತ್ರಿ ಮಂತ್ರ ಉಪದೇಶ ನೀಡಿದರು. ಧಾರ್ಮಿಕ ಪ್ರಕ್ರಿಯೆಯಂತೆ ಎಲ್ಲಾ ಕಈಕರ್ಯಗಳು ನಡೆದಿದ್ದು ವಟುವಿಗೆ ಚವಲ, ಕೌಪೀನ ಧಾರಣೆ ,ಮಾತೃಬೋಜನ , ಭಿಕ್ಷೆ ಸೇರಿದಂತೆ ಎಲ್ಲ ವಿಧಿ ವಿಧಾನಗಳು ನಡೆದವು.ಈ ಉಪನಯನಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಬಂಧು ಬಾಂಧವರು ಕೆಲವೇ ಮಂದಿ ಸೇರಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು.

ಉತ್ತರ ಕನ್ನಡದ ಹಲವೆಡೆ ನಮ್ಮ ಸಮಾಜದವರಿಗೆ ಜನಿವಾರ ತೊಡಿಸುವ ಪದ್ದತಿಯಿದೆ. ಪತ್ನಿಯೂ ಆ ಭಾಗದವರೇ ಅದ್ದರಿಂದ ಅಲ್ಲಿಯ ನಿಕಟ ಸಂಪರ್ಕವಿದೆ. ಮಗನಿಗೆ ಸಂಪ್ರದಾಯಬದ್ಧವಾಗಿ ಜನಿವಾರಧಾರಣೆ ಮಾಡಬೇಕೆಂಬ ನಿಟ್ಟಿನಲ್ಲಿ ನಾನು ಧಾರ್ಮಿಕ ಆಚರಣೆಯನ್ನು ಬಾರ್ಕೂರು ದೇವಸ್ಥಾನದಲ್ಲಿ ವಿಧಿವತ್ತಾಗಿ ನೆರವೇರಿಸಿ ಉಪನಯನ ಮಾಡಿದ್ದೇನೆ .
– ಜನಾರ್ದನ ದೇವಾಡಿಗ, ವಟುವಿನ ತಂದೆ

ಪ್ರಸ್ತುತ ಮಕ್ಕಳು ಧಾರ್ಮಿಕ ಭಾವನೆ, ಗುರುಹಿರಿಯರ ಬಗ್ಗೆ ಗೌರವ ಹೆಚ್ಚಿಸಿಕೊಳ್ಳಲು ಇಂತಹ ಪ್ರಕ್ರಿಯೆ ಹಾಗೂ ನಿತ್ಯ ಅನುಷ್ಟಾನ ಮೊದಲಾದವುಗಳಿಂದ ಸಾಧ್ಯ. ಜನಾರ್ಧನ್ ದೇವಾಡಿಗರ ಪುತ್ರನಿಗೆ ಬ್ರಹ್ಮೋಪದೇಶ ಮಾಡುವ ಮೂಲಕ ಬಾರ್ಕೂರು ಶ್ರೀ ಏಕನಾಥೇಷ್ವರೀ ದೇವಸ್ಥಾನದಲ್ಲಿ ಸರಳ ಹಾಗೂ ಸಂಪ್ರದಾಯಬದ್ಧವಾಗಿ ಉಪನಯನ ಕಾರ್ಯ ನಡೆಸಲಾಗಿದೆ.
– ನರಸಿಂಹ ದೇವಾಡಿಗ (ಶ್ರೀ ಏಕನಾಥೇಶ್ವರಿ ಟ್ರಸ್ಟ್ ಆಡಳಿತ ಮಂಡಳಿ ಕಾರ್ಯದರ್ಶಿ)

Comments are closed.