ಆರೋಗ್ಯ

ಉಡುಪಿಗಿಂದು ಶುಭ ಮಂಗಳವಾರ: ಇಂದು ಹೊಸ ಕೊರೋನಾ ಪ್ರಕರಣಗಳಿಲ್ಲ: 103 ಮಂದಿ ಡಿಶ್ಚಾರ್ಜ್

Pinterest LinkedIn Tumblr

ಉಡುಪಿ: ಉಡುಪಿಗಿಂದು ಶುಭ ಮಂಗಳವಾರ: ಇಂದು ಹೊಸ ಕೊರೋನಾ ಪ್ರಕರಣಗಳಿಲ್ಲ: 103 ಮಂದಿ ಡಿಶ್ಚಾರ್ಜ್ ಕಳೆದ ಎರಡು ವಾರಗಳಿಂದ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದ ಉಡುಪಿ ಜಿಲ್ಲೆಯ ಮಟ್ಟಿಗೆ ಮಂಗಳವಾರ ಶುಭ ವಾರ್ತೆಯೊಂದು ಸಿಕ್ಕಿದೆ.

ಮಂಗಳವಾರ ಜಿಲ್ಲೆಯಲ್ಲಿ ಹೊಸ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಅಲ್ಲದೇ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 103 ಮಂದಿ ನೆಗೆಟಿವ್ ರಿಪೋರ್ಟ್ ಹಿನ್ನಲೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈ ಬಗ್ಗೆ ಸ್ವತಃ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.

Comments are closed.