ಹೃದಯ ನಮ್ಮ ಶರೀರದ ಒಂದು ಪ್ರಮುಖ ಅಂಗ. ಅದು ಮಾಡುವ ಕೆಲಸದ ಬಗ್ಗೆ ಎಲ್ಲರಿಗೂಗೂ ಗೊತ್ತೇ ಇರುತ್ತದೆ. ನಮ್ಮ ಶರೀರದ ಪ್ರತಿಯೊಂದು ಅವಯವಕ್ಕೂ, ಹೃದಯ ರಕ್ತವನ್ನು ಸರಬರಾಜು ಮಾಡುತ್ತದೆ. ಹೃದಯ ಒಂದು ನಿಮಿಷ ಕೆಲಸ ಮಾಡದೆ ನಿಂತು ಹೋದರೆ, ಅನರ್ಥವುಂಟಾಗುತ್ತದೆ. ಇಂತಹ ಮುಖ್ಯವಾದ ಹೃದಯವನ್ನು ನಾವುಲ್ಲರೂ ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು. ಹೃದಯದ ತೊಂದರೆಗಳು ಹೇಳಿ ಬರುವುದಿಲ್ಲ. ಅಚಾನಕ್ ಆಗಿ ಬರುವಂತದ್ದೇ. ಒಂದು ವೇಳೆ ಹೃದಯದ ತೊಂದರೆ ಬಂತೆಂದರೆ, ಅಪಾಯ ಕಟ್ಟಿಟ್ಟ ಬುತ್ತಿ. ಹೃದಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಪ್ರತೀ ದಿನ ವ್ಯಾಯಮ, ಪೌಷ್ಟಿಕವಾದ ಆಹಾರ ಸೇವನೆ ಮಾಡಿದರೆ, ಹೃದಯದ ತೊಂದರೆಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳ ಬಹುದು. ಅಸಲಿಗೆ ಒಬ್ಬ ವ್ಯಕ್ತಿ ಹೃದಯದ ತೊಂದರೆಯಿಂದ ನರಳುತ್ತಾನೆಂದು ತಿಳಿದುಕೊಳ್ಳುವುದಾದರೂ ಹೇಗೆ..? ಏನಾದರೂ ಲಕ್ಷಣಗಳು ಕಾಣಿಸುತ್ತವೆಯಾ..? ಎಂಬ ಪ್ರಶ್ನೆಗಳಿಗೆ ಉತ್ತರ… ಯಾವುದೇ ಲಕ್ಷಣಗಳನ್ನು ನೋಡದೆ,ಕೇವಲ ಒಂದು ಸುಲಭ ಪರೀಕ್ಷೆಯ ಮೂಲಕ ಒಬ್ಬ ವ್ಯಕ್ತಿಗೆ ಹೃದಯದ ತೊಂದರೆ ಇದೆಯೋ, ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು. ಆ ಸುಲಭ ಪರೀಕ್ಷೆ ಏನೆಂದರೆ…
ನೆಲದ ಮೇಲೆ ಕುಳಿತುಕೊಂಡು ಕಾಲುಗಳನ್ನು ಮುಂದೆ ಚಾಚಬೇಕು. ಮೊಣಕಾಲುಗಳನ್ನು ಮಡಿಚದೆ ಮುಂದೆ ಬಾಗಿ ಕಾಲಿನ ಬೆರಳುಗಳನ್ನು ಸ್ಪರ್ಷಿಸಬೇಕು. ಹೀಗೆ ಮಾಡಿದರೆ, ಹೃದಯದ ತೊಂದರೆ ಇಲ್ಲವೆಂದರ್ಥ. ಹಾಗಲ್ಲದೆ ಮೊಣಕಾಲುಗಳನ್ನು ಸ್ವಲ್ಪಮಡಿಚ ಬೇಕಾಗಿ ಬಂದರೆ… ಆಗ ನೀವು ಹೃದಯದ ತೊಂದರೆಯಿಂದ ನರಳುತ್ತಿದ್ದೀರೆಂದು ಅರ್ಥ. ಒಡನೆಯೇ ಡಾಕ್ಟರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.
ಈ ಚಿಕ್ಕ ಸರಳ ಪರೀಕ್ಷೆಯಿಂದ ಹೃದಯದ ಸಮಸ್ಯೆ ಇದೆಯೋ ಇಲ್ಲವೋ ಎಂದು ನಿಜವಾಗಿಯೂ ತಿಳಿಯುತ್ತದೆಯೇ…?ಎಂದರೆ, ಹೌದು ಎಂತಲೇ ಹೇಳಬಹುದು. ಇದು ವಾಸ್ತು, ಜ್ಯೋತಿಶ್ಯಾಸ್ತ್ರಕ್ಕೆ ಸಂಬಂಧಿಸಿದ್ದಲ್ಲ. ವಿಜ್ಞಾನಕ್ಕೆ ಸಂಬಂಧಿಸಿದ್ದು. ಇದನ್ನು ವಿಜ್ಞಾನಿಗಳು ಹಲವು ಸಂಶೋಧನೆಗಳ ಮೂಲಕ ತಿಳಿದುಕೊಂಡಿದ್ದಾರೆ.
ಉತ್ತರ ಟೆಕ್ಸಾಸ್ ನಲ್ಲಿರುವ ಅಮೆರಿಕನ್ ಫಿಜಿಯಲಾಜಿಕಲ್ ಸೊಸೈಟಿ ಯವರು 20 ರಿಂದ 83 ವರ್ಷ ವಯಸ್ಸಿನ 526 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದರು. ಆ ಸಮಯದಲ್ಲಿ ಪ್ರಯೋಗಕ್ಕೆ ಒಳಪಟ್ಟವರ ಹೃದಯದ ಕಾರ್ಯವೈಖರಿಯನ್ನು ತಿಳಿದುಕೊಂಡರು. ಮೊಣಕಾಲುಗಳನ್ನು ಮಡಿಚಿ ಮುಂದೆ ಬಾಗಿದರೇ,ಅಥವಾ ಮೊಣಕಾಲು ಮಡಿಚದೆ ಬಾಗಿ ಕಾಲುಗಳ ಬೆರಳುಗಳನ್ನು ಸ್ಪರ್ಶಿಸಿದರೇ ಎಂಬುದನ್ನು ಪರಿಶೀಲಿಸಿದರು.
ಆನಂತರ ಬಂದ ಫಲಿತಾಂಶವನ್ನು ವಿಶ್ಲೇಸಿದರು. ಮೊಣಕಾಲುಗಳನ್ನು ಬಗ್ಗಿಸದೆ, ಕಾಲಿನ ಬೆರಳುಗಳನ್ನು ಸ್ಪರ್ಶಿಸಿದವರಿಗೆ ಯಾವುದೇ ರೀತಿಯ ಹೃದಯ ಸಮಸ್ಯೆ ಇರುವುದಿಲ್ಲವೆಂದು ಕಂಡುಕೊಂಡರು. ನೀವೂ ಸಹ ಈ ರೀತಿ ಸುಲಭ ಪರೀಕ್ಷೆಯಿಂದ ನಿಮಗೆ ಹೃದಯದ ತೊಂದರೆ ಇದೆಯೋ,ಇಲ್ಲವೋ ತಿಳಿದುಕೊಂಡು , ಸಮಸ್ಯೆ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ..!
Comments are closed.