ಆರೋಗ್ಯ

ಎರಡನೆ ಮಗುವಿನ ತಾಯ್ತನಕ್ಕಾಗಿ ಹಂಬಲಿಸುವ ತಾಯಂದಿರಿಗಾಗಿ ಈ ಮಾತುಗಳು.

Pinterest LinkedIn Tumblr

ಮಗುವಿರುವ ಮನೆಯಲ್ಲಿ, ಸದಾಕಾಲ ನಗುವಿರುತ್ತದೆ ಎಂದರೆ ತಪ್ಪಾಗುವುದಿಲ್ಲ. ಒಂದು ಮಗುವಿನ ತಾಯ್ತನದ ಸುಖವನ್ನು ಅನುಭವಿಸಿದ ಮಹಿಳೆಯು, ಎರಡನೆ ಮಗುವಿನ ತಾಯ್ತನಕ್ಕಾಗಿ ಹಂಬಲಿಸುವುಡು ಸಹಜ. ಆದರೆ, ಹಲವು ಪೋಷಕರು ಹಣಕಾಸಿನ ದೃಷ್ಟಿಯಿಂದಲೋ ಅಥವಾ ಮಗುವಿನ ಪಾಲನೆಗೆ ಸಮಯವಿಲ್ಲದಿರುವ ಕಾರಣದಿಂದಲೋ ಎರಡನೆ ಮಗುವಿನ ಬಗ್ಗೆ ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಹೀಗಾಗಿ, ಎರಡು ರೀತಿಯ ಪೋಷಕರು ಕೂಡ ತಪ್ಪಲ್ಲ. ಅವರವರ ಪ್ರಾಮುಖ್ಯತೆಯ ಅನುಗುಣವಾಗಿ ನಿರ್ಧಾರವನ್ನು ಕೈಗೊಳ್ಳುತಾರೆ. ಒಟ್ಟಿನಲ್ಲಿ, ಮನೆಯಲ್ಲಿ ಎರಡೆನೆ ಮಗುವಿದ್ದರೆ, ಅದರಿಂದಾಗುವ ಪ್ರಯೋಜನವೇನೆಂದು ತಿಳಿಯೋಣ ಬನ್ನಿ.

೧. ಸಂಗಡವಿದ್ದಂತೆ ಆಗುತ್ತದೆ
ನಿಮ್ಮ ಮೊದಲನೆ ಮಗುವಿಗೆ ಒಳ್ಳೆಯ ಸ್ನೇಹಿತ/ತೆ, ನಿಮ್ಮ ಎರಡನೆ ಮಗು ಎಂದರೆ ತಪ್ಪಾಗುವುದಿಲ್ಲ. ಪೋಷಕರಿಬ್ಬರು ತಮ್ಮ ಸಮಯ, ಪ್ರೀತಿಯನ್ನು ಮಗುವಿಗೆ ನೀಡಿದರೂ, ವಯಸ್ಸಿನ ಅಂತರ ಇದ್ದೆ ಇರುತ್ತದೆ. ಮಗು ಯಾವುದಾದರು ವಿಷಯಗಳ್ಳನ್ನು ಹಂಚಿಕೊಳ್ಳಬೇಕಾದರೆ, ತಂದೆ ತಾಯಿಗಿಂತ ಹೆಚ್ಚಾಗಿ ತಮ್ಮ ಸೋದರ ಸೋದರಿಯೊಂದಿಗೆ ಹೆಚ್ಚು ಹಂಚಿಕೊಳ್ಳುತ್ತಾರೆ. ಮಗು ಒಂಟಿಯಾಗದೆ ಎಲ್ಲರೊಂದಿಗೆ ಬೆಳೆಯುತ್ತದೆ.

೨. ಮುಕ್ತವಾಗಿ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು
ಯಾವುದೇ ಕಷ್ಟವನ್ನು ಮತ್ತೊಬರೊಂದಿಗೆ ಹಂಚಿಕೊಂಡರೆ ಕಷ್ಟವೇನು ಕಡಿಮೆಯಾಗುವುದಿಲ್ಲ ನಿಜ, ಆದರೆ ಮನಸ್ಸು ಎಷ್ಟು ಹಗುರವಾಗುತ್ತದೆ ಎಂದು ನೀವು ಗಮನಿಸ್ಸಿದ್ದೀರ? ಹೌದು! ನಿಮ್ಮ ಮಕ್ಕಳ ಮನಸ್ಸು ಕೂಡ ಹಾಗೆಯೇ, ಹೆಚ್ಚಿನ ವಿಷಯಗಳ್ಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ತಮ್ಮದೇ ವಯ್ಯಸ್ಸಿನ ಮಕ್ಕಳೊಂದಿಗೆ ಸುಲಭವಾಗಿ ಹಂಚಿಕೊಳ್ಳುತ್ತಾರೆ. ಹೀಗಾಗಿ, ಮಕ್ಕಳು ತಮ್ಮ ಮನಸ್ಸಿನಲ್ಲಿರುವ ವಿಷಯಗಳಿಗೆ, ಉತ್ತಮ ನಿರ್ಧಾರವನ್ನು ಕೈಗೊಳ್ಳಲಾಗದೆ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು.

೩. ಜವಾಬ್ಧಾರಿಯನ್ನು ಕಡಿಮೆಗೊಳಿಸುತ್ತದೆ
ಮೊದಲನೆ ಮಗು ಹುಟ್ಟಿದಾಗ ಹೆಚ್ಚಾದ ಜವಾಬ್ಧಾರಿಯಷ್ಟು, ಎರಡನೆ ಮಗು ಜನಿಸಿದಾಗ ನಿಮಗೆ ಆಗುವುದಿಲ್ಲ. ಯಾಕೆಂದರೆ ನಿಮ್ಮ ಮೊದಲನೆ ಮಗು ವಯಸ್ಸಿನಲ್ಲಿ ದೊಡ್ದವನಾಗಿರುವುದರಿಂದ, ನಿಮ್ಮ ಎರಡನೆ ಮಗುವಿನ ಚಿಕ್ಕ-ಪುಟ್ಟ ಜವಾಬ್ಧಾರಿಯನ್ನು ವಹಿಸಿಕೊಳ್ಳುತ್ತದೆ. ಇದರಿಂದ ನಿಮಗೆ ಹೆಚ್ಚು ಸಮಯ ಉಳಿದಂತಾಗುತ್ತದೆ.

೪. ಖರ್ಚು ಕಡಿಮೆಯಾಗುತ್ತದೆ
ನಿಮ್ಮ ಮೊದಲನೇ ಮಗು ಹುಟ್ಟಿದಾಗ ಅದಕ್ಕೆ ಕೊಡಿಸಿದ ಹೊಸ ಬಟ್ಟೆ, ಆಟ ಸಾಮಾನುಗಳು, ಎಲ್ಲವು ನಿಮ್ಮ ಎರಡನೆ ಮಗುವಿಗೆ ಉಪಯೋಗವಾಗುತ್ತದೆ. ಹೊಸದಾಗಿ ಕೊಂಡುಕೊಳ್ಳಬೇಕಾದ ವಸ್ತುವೆಂದರೆ, ನಿಮ್ಮ ಮಗುವಿನ diaperಗಳು ಮಾತ್ರ!

೫. ಹೆಚ್ಚಿನ ಅನುಭವವಾಗುತ್ತದೆ
ಈಗಾಗಲೇ, ತಾಯಿಯಾಗಿರುವ ನೀವು, ಮಗುವಿನ ಅಗತ್ಯತೆಯ ಬಗ್ಗೆ ಹೆಚ್ಕಾಗಿಯೇ ತಿಳಿದಿರುತ್ತೀರ. ಮಗುವಿಗೆ ಯಾವ ಆಹಾರ ನೀಡಬೇಕು, ಯಾವ ಸಮಯದಲ್ಲಿ ಮಲಗಿಸಬೇಕು ಇತ್ಯಾದಿ ವಿಷಯಗಳ್ಳಲ್ಲಿ ಪರಿಣಿತರಾಗಿದ್ದೀರ. ಎರಡನೆ ಮಗುವಿಗಾಗಿ, ನೀವು ಹೊಸದಾಗಿ ಯಾವ ವಿಷಯವನ್ನು ಕಲಿಯುವ ಅಗತ್ಯವಿರುವುದಿಲ್ಲ.

ಇದರಿಂದ, ನಿಮ್ಮ ಜೀವನದಲ್ಲಿ ಎರಡನೆ ಬಾರಿ ತಾಯ್ತನದ ಸುಖವನ್ನು ಪೂರ್ತಿಯಾಗಿ ಅನುಭವಿಸಲು ಅವಕಾಶ ಸಿಕ್ಕಂತಾಗುತ್ತದೆ.

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Comments are closed.