ಆರೋಗ್ಯ

ಕೊರೋನಾ ನೆಪದಲ್ಲಿ ದಂಧೆ ಎಂದು ಉಡುಪಿ‌ ಜಿಲ್ಲಾಡಳಿತ‌ದ ಬಗ್ಗೆ ಸೋಶಿಯಲ್ ಮೇಡಿಯಾದಲ್ಲಿ ಸುಳ್ಳು ಬರಹ: ಯುವಕನ ಬಂಧನ

Pinterest LinkedIn Tumblr

ಉಡುಪಿ: ತಪಾಸಣೆ ನೆಪದಲ್ಲಿ ಕೋವಿಡ್ -19 ರೋಗಿಗಳಿಂದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಲಕ್ಷಾಂತರ ರೂ. ಹಣ ಪಡೆದುಕೊಳ್ಳುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವಿಚಾರ ವೈರಲ್ ಮಾಡಿದ ಆರೋಪದಡಿ ಯುವಕನ ಮೇಲೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಕುಂದಾಪುರ ತಾಲೂಕಿನ ಕಮಲಶಿಲೆಯ ಸುರೇಶ್ ಕುಲಾಲ್ (27) ಬಂಧಿತ ಆರೋಪಿ.

ಕೋವಿಡ್ ನೆಪದಲ್ಲಿ ಕೂಡಿ‌ಹಾಕಿ ಮೂರುವರೆ ಲಕ್ಷ ಹಣ ಬೇಡಿಕೆ ಇಟ್ಟಿದ್ದಾರೆ ಎಂಬ ಸುಳ್ಳೆಸುಳ್ಳು ಆರೋಪವನ್ನು ಆರೋಪಿ ಜಾಲತಾಣದಲ್ಲಿ ಪ್ರಸರಿಸಿದ್ದ. ಅದಷ್ಟೆ ಅಲ್ಲದೆ ಕೊರೋನಾ ರಿಪೋರ್ಟ್ ನೀಡಿಲ್ಲ, ಮಾದ್ಯಮದ ಮುಂದೆ ಹೋಗುವುದಾಗಿಯೂ ತಾನು ಜಾಲತಾಣದಲ್ಲಿ ಬರದುಕೊಂಡು‌ ಬೇರೆಬೇರೆ ಗ್ರೂಫ್ ಗಳಿಗೆ ಹರಿಯಬಿಟ್ಟಿದ್ದ.

ಕೊರೋನಾ ವೈರಸ್ ವಿರುದ್ದ ಉಡುಪಿ ಜಿಲ್ಲಾಡಳಿತ , ಆರೋಗ್ಯ ಇಲಾಖೆ ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆಗಳು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದು, ಸಂಬಂಧಿಸಿದ ಎಲ್ಲಾ ಇಲಾಖೆಗಳು ಕರ್ತವ್ಯ ನಿರ್ವಹಿಸಲ‌ಉ ಆತ್ಮಸ್ಥೆರ್ಯ ಕುಗ್ಗುವಂತೆ ಇಲಾಖೆಗಳ ವಿರುದ್ದ ಸುಳ್ಳು ಮಾಹಿತಿಯನ್ನು ಸಾರ್ವಜನಿಕ ವಾಟ್ಸಾಪ್ ಗ್ರೂಪಿನಲ್ಲಿ ಹಾಕಿ ಇಲಾಖೆಗಳ ವಿರುದ್ದ ತಪ್ಪು ಸಂದೇಶವನ್ನು ಹರಿಬಿಟ್ಟು ಸಾರ್ವಜನಿಕರಲ್ಲಿ ಅಶಾಂತಿ ಮತ್ತು ಅನುಮಾನ ಮೂಡುವಂತೆ ‌ಮಾಡಿದ ಬಗ್ಗೆ ವಂಡ್ಸೆ ಕಂದಾಯ ನಿರೀಕ್ಷಕ ರಾಘವೇಂದ್ರ ಡಿ. ಅವರು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿತನ ಮೇಲೆ ಐಪಿಸಿ ಕಲಂ 505 (1) (b), ಡಿಎಂ ಕಾಯ್ದೆ 54, ಐಟಿ ಕಾಯ್ದೆ ಸೇರಿದಂತೆ ಪ್ರಕರಣ ದಾಖಲಾಗಿದೆ.

Comments are closed.