ರಾಷ್ಟ್ರೀಯ

ಚಿಕಿತ್ಸೆ ಪಡೆದು ಶುಲ್ಕ ಪಾವತಿಸದ ಕಾರಣಕ್ಕಾಗಿ ವೃದ್ಧರೊಬ್ಬರನ್ನು ಆಸ್ಪತ್ರೆಯ ಬೆಡ್ಡ್ ಗೆ ಕಟ್ಟಿ ಹಾಕಿ ಕ್ರೂರತೆ ಮೆರೆದ ಆಸ್ಪತ್ರೆ ಆಡಳಿತ !

Pinterest LinkedIn Tumblr

ಭೂಪಾಲ್: ಮಧ್ಯಪ್ರದೇಶದ ಭೂಪಾಲ್ ನಲ್ಲಿ ಅಮಾನವೀಯ, ಆತಂಕಕಾರಿ ಘಟನೆಯೊಂದು ನಡೆದಿದೆ. ಚಿಕಿತ್ಸೆ ಪಡೆದು ಶುಲ್ಕ ಪಾವತಿಸದ ಕಾರಣಕ್ಕಾಗಿ ವೃದ್ಧರೊಬ್ಬರನ್ನು ಆಸ್ಪತ್ರೆಯ ಬೆಡ್ಡ್ ಗೆ ಕಟ್ಟಿ ಹಾಕಿ ಆಸ್ಪತ್ರೆ ಆಡಳಿತ ಮಂಡಳಿ ಕ್ರೂರವಾಗಿ ವರ್ತಿಸಿದೆ.

ಆದಾಗ್ಯೂ, ಆ ವೃದ್ಧ ವ್ಯಕ್ತಿ ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಕೈ ಹಾಗೂ ಕಾಲುಗಳನ್ನು ಹಾಸಿಗೆ ಬೆಡ್ ಗಳಿಗೆ ಕಟ್ಟಿಹಾಕಲಾಗಿತ್ತು ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿಕೊಂಡಿದೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್, ಶಾಜಪುರ ಮೂಲದ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಘಟನೆ ಸಂಬಂಧ ಜಿಲ್ಲಾ ಆಸ್ಪತ್ರೆ ತನಿಖೆಗೆ ಆದೇಶಿಸಿದೆ.

11 ಸಾವಿರ ಶುಲ್ಕವನ್ನು ಪಾವತಿಸದ ಕಾರಣ್ಕಾಗಿ ಆಸ್ಪತ್ರೆ ಆಡಳಿತ ಮಂಡಳಿಯವರು ವೃದ್ಧನ ಕೈ ಹಾಗೂ ಕಾಲುಗಳನ್ನು ಕಟ್ಟಿಹಾಕಿದ್ದಾರೆ ಎಂದು ಆ ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗುವಾಗ 5 ಸಾವಿರ ರೂ. ಪಾವತಿಸಿದ್ದೇವು ಆದರೆ, ಚಿಕಿತ್ಸೆಗಾಗಿ ಇನ್ನು ಕೆಲವು ದಿನಗಳ ತೆಗೆದುಕೊಂಡಿದ್ದರಿಂದ ಹಣವಿಲ್ಲದೆ ಆ ಶುಲ್ಕವನ್ನು ಪಾವತಿ ಮಾಡಿರಲಿಲ್ಲ ಎಂದು ವಯೋವೃದ್ಧರ ಸಹೋದರಿ ಹೇಳಿದ್ದಾರೆ. ನಂತರ ಮಾನವೀಯತೆಯ ಆಧಾರದ ಮೇಲೆ ಶುಲ್ಕವನ್ನು ಆಸ್ಪತ್ರೆ ಮನ್ನಾ ಮಾಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Comments are closed.