ಇಂದು ಜನರನ್ನು ಕಾಡುವ ದೊಡ್ಡ ಸಮಸ್ಯೆಯೆಂದರೆ ಬೊಜ್ಜು, ಇಂದಿನ ಆಹಾರ ಪದ್ಧತಿ ನಮ್ಮ ಬೊಜ್ಜಿಗೆ ಕಾರಣವಾಗಿದೆ. ಹೊರಗಿನ ಆಹಾರವನ್ನು ತಿನ್ನುವುದರಿಂದ ಬೊಜ್ಜು ಸಮಸ್ಯೆ ಉಂಟಾಗುತ್ತದೆ. ಹೊಟೇಲ್ಗಳಲ್ಲಿ ತಿನ್ನುವ ಫಾಸ್ಟ್ಪುಡ್ ಮುಂತಾದ ಆಹಾರವನ್ನು ರುಚಿ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ ತಿಂದು ತೂಕ ಹೆಚ್ಚಿಸಿಕೊಂಡು ಜಿಮ್ ಗೆ ಅಲೆಯೋದು ಈಗ ಮಾಮೂಲಿಯಾಗಿದೆ.
ತೂಕ ಏರಿಸಿಕೊಳ್ಳೋದು ಇತ್ತೀಚಿಗೆ ಸುಲಭ. ಆದರೆ ತೂಕ ಕಡಿಮೆ ಮಾಡಿಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಬೊಜ್ಜು ಕರಗಿಸಲು ಆಹಾರದಲ್ಲಿ ನಿಯಂತ್ರಣದ ಜೊತೆ ಹಗಲು-ರಾತ್ರಿ ವ್ಯಾಯಾಮ, ಜಿಮ್, ಯೋಗ ಮಾಡಿದರು ತೂಕ ಮಾತ್ರ ಕಡಿಮೆಯಾಗೋದಿಲ್ಲ ಎನ್ನುತ್ತಾರೆ ಅನೇಕರು. ಕೆಲವರು ಹೆಚ್ಚಾಗಿರುವ ಹೊಟ್ಟೆ ಕಡಿಮೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆ ಕೂಡ ಮಾಡಿಸಿಕೊಳ್ಳುತ್ತಾರೆ. ಹೆಚ್ಚಾಗಿ ಮಹಿಳೆಯರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಮಹಿಳೆಯರಲ್ಲಿ ಹಾಂಓರ್ನ್ ಬದಲಾವಣೆಯಿಂದಾಗಿ ಸೋಂಟದ ಸುತ್ತಳತೆ ಅಧಿಕವಾಗುತ್ತದೆ.
ಪ್ರಯತ್ನ ಮಾಡಿದರೆ ಯಾವುದು ಅಸಾಧ್ಯವಲ್ಲ. ಮೈ ಬೊಜ್ಜು ಕರಗಿಸಬೇಕೆಂದು ಮನಸ್ಸು ಮಾಡಿದರೆ, ಯೋಗ, ವ್ಯಾಯಾಮ, ಡಯಟ್ ಮೂಲಕ ಬೊಜ್ಜು ಕರಗಿಸಬಹುದು. ಅಲ್ಲದೆ ಆಹಾರವನ್ನು ಕಡಿಮೆ ಸೇವಿಸುವುದರ ಮೂಲಕ ಬೊಜ್ಜಿನ ಸಮಸ್ಯೆಯನ್ನು ಕಡಿಮೆ ಮಾಡಬಹುದಾಗಿದೆ. ರಾತ್ರಿ ವೇಳೆ ಭರ್ಜರಿ ಊಟ, ಮಾಂಸಹಾರ ಸೇವನೆಯನ್ನು ಕಡಿಮೆ ಮಾಡಿ.
ಇನ್ನು ರಾತ್ರಿ ಮಲಗುವ ಮೊದಲು ಒಂದು ದೊಡ್ಡ ಟವೆಲ್ ಗೆ ಬಿಸಿ ಅಥವಾ ತಣ್ಣನೆಯ ನೀರು ಹಾಕಿ ಒದ್ದೆ ಮಾಡಿಕೊಳ್ಳಿ. ಆ ಟವೆಲ್ ಹೊಟ್ಟೆ ಮೇಲಿಟ್ಟು, ಅದ್ರ ಮೇಲೆ ಬಟ್ಟೆಯೊಂದನ್ನು ಕಟ್ಟಿ ಮಲಗಿ. ಬೆಳಿಗ್ಗೆ ಎಚ್ಚರವಾದ ತಕ್ಷಣ ಟವೆಲ್ ತೆಗೆದುಬಿಡಿ. ಇದು ಜೀರ್ಣಕ್ರಿಯೆ ಸುಲಭ ಮಾಡುವ ಜೊತೆಗೆ ಕೊಬ್ಬು ಹೆಚ್ಚು ಮಾಡುವ ಜೀವಕೋಶಗಳನ್ನು ನಿಯಂತ್ರಣದಲ್ಲಿಡುತ್ತದೆ.
Comments are closed.