ಜೈಪುರ: ತನ್ನ ಸಹೋದರಿಯನ್ನ ಅತ್ಯಾಚಾರ ಮಾಡಲು ಯತ್ನಿಸಿದ ಪತಿಯನ್ನು ತುಂಬು ಗರ್ಭಿಣಿಯೊಬ್ಬಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ನಡೆದಿದೆ.
ಮಹಾವೀರ್ ಬಾಲೈ (30) ಮೃತ ಪತಿ. ಆರೋಪಿ ಸರೋಜಾ (27) ಪತ್ನಿಯನ್ನು ಕೊಂದು ಮನೆಯ ಹಿಂದೆ ಸಮಾಧಿ ಮಾಡಿದ್ದಾಳೆ. ನಂತರ ತಾನೇ ಪೊಲೀಸ್ ಠಾಣೆಗೆ ಹೋಗಿ ಪತಿಯನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ವಿಚಾರಣೆ ಮಾಡುತ್ತಿದ್ದಾರೆ.
ಏನಿದು ಪ್ರಕರಣ?
ಭೈರಂಪುರ ಜಾಗೀರ್ ಗ್ರಾಮದ ನಿವಾಸಿ ಸರೋಜಾ ತುಂಬು ಗರ್ಭಿಣಿಯಾಗಿದ್ದರು. ಆದರೆ ಮೃತ ಪತಿ ಮಹಾವೀರ್ ಪತ್ನಿಯ ಸೋದರಿ ಅಂದರೆ ನಾದಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಸಹೋದರಿಯ ಕಿರುಚಾಟ ಕೇಳಿ ಪತ್ನಿ ಮನೆಗೆ ಬಂದು ನೋಡಿದ್ದಾಳೆ. ಇದರಿಂದ ಕೋಪಗೊಂಡ ಸರೋಜಾ ಕೊಡಲಿಯಿಂದ ಪತಿಯನ್ನು ಕೊಲೆ ಮಾಡಿದ್ದಾಳೆ. ನಂತರ ಪತಿಯ ಮೃತದೇಹವನ್ನು ಹಗ್ಗದಿಂದ ಕಟ್ಟಿ ಅದನ್ನು ಮನೆ ಹಿಂದೆ ಎಳೆದುಕೊಂಡು ಹೋಗಿದ್ದಾಳೆ. ಬಳಿಕ ತಾನೇ ಆತನನ್ನು ಸಮಾಧಿ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರುದಿನ ಆರೋಪಿ ಸರೋಜಾ ಪೊಲೀಸ್ ಠಾಣೆಗೆ ಹೋಗಿ ಪತಿಯನ್ನು ಹತ್ಯೆ ಮಾಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಮಾಹಿತಿ ತಿಳಿದ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಸಮಾಧಿ ಮಾಡಿದ್ದ ಮಹಾವೀರ್ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಗರ್ಭಿಣಿ ಸರೋಜಾ ಪತಿ ಮಹಾವೀರ್ ನನ್ನು ಕೊಡಲಿಯಿಂದ ಕೊಂದಿದ್ದು, ಪತಿಯ ಮೃತದೇಹವನ್ನು ಮನೆಯ ಹಿಂದೆ ಸಮಾಧಿ ಮಾಡಿದ್ದಾಳೆ. ನಂತರ ಆಕೆಯೇ ಬಂದು ಪೊಲೀಸರಿಗೆ ಶರಣಾಗಿದ್ದಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗಗನ್‍ದೀಪ್ ಸಿಂಗ್ ಹೇಳಿದ್ದಾರೆ.
ಆರೋಪಿ ಸರೋಜಾ ತುಂಬು ಗರ್ಭಿಣಿಯಾಗಿದ್ದು, ತನ್ನ ಸಹಾಯಕ್ಕಾಗಿ ಕೆಲವು ದಿನಗಳ ಹಿಂದೆ ಸಹೋದರಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಳು. ಆದರೆ ಈ ವೇಳೆ ಆಕೆಯ ಪತಿ ನಾದಿನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಸರೋಜಾ ಕೋಪಗೊಂಡು ಕೊಲೆ ಮಾಡಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ.
Comments are closed.