ಆರೋಗ್ಯ

ನಿಮ್ಮ ದೇಹದ ತೂಕ ಇಳಿಸಲು ಇಲ್ಲಿದೆ ಸರಳ ಉಪಾಯ…

Pinterest LinkedIn Tumblr

ದೇಹ ತೂಕವನ್ನು ಕಡಿಮೆ ಮಾಡಲು ಮಾಡುವ ಕಸರತ್ತು ಒಂದಾ ಎರಡಾ..! ಆದರೂ ತೂಕದಲ್ಲಿ ಅಂತಹ ವ್ಯತ್ಯಾಸ ಕಂಡು ಬರುವುದಿಲ್ಲ. ಅದರಲ್ಲೂ ಡೊಳ್ಳು ಹೊಟ್ಟೆಯನ್ನು ಕರಗಿಸಲು ನಾನಾ ರೀತಿಯ ವ್ಯಾಯಾಮ ಮಾಡಿದರೂ ಪ್ರಯೋಜನ ಮಾತ್ರ ಶೂನ್ಯ ಎಂದು ಕೆಲವರು ಹೇಳುತ್ತಾರೆ.

ತೂಕ ಇಳಿಸಿಕೊಳ್ಳಲು ಅಥವಾ ಬೊಜ್ಜು ಕಡಿಮೆ ಮಾಡಲು ಕೆಲವರು ಹೊಸ ಆಹಾರ ಪದ್ಧತಿಯನ್ನು ಪ್ರಾರಂಭಿಸಿದರೆ, ಮತ್ತೆ ಕೆಲವರು ವ್ಯಾಯಾಮದ ಮೊರೆ ಹೋಗುತ್ತಾರೆ. ಇನ್ನು ಕೆಲವರರು ಅವರಿವರು ಹೇಳಿದ ಮನೆಮದ್ದುಗಳ ಪ್ರಯೋಗಕ್ಕೆ ಮುಂದಾಗುತ್ತಾರೆ. ಇಷ್ಟೆಲ್ಲಾ ಸರ್ಕಸ್ ಮಾಡುವ ಬದಲು ಅಡುಗೆಮನೆಯಲ್ಲಿರುವ ಕೆಲ ಆಹಾರ ಪದಾರ್ಥಗಳಿಂದಲೇ ದೇಹ ತೂಕ ಇಳಿಸಿಕೊಳ್ಳಬಹುದು.

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಸಾಲೆ ಪದಾರ್ಥಗಳಿರುತ್ತವೆ. ಇದನ್ನೇ ಬಳಿಸಿ ತಯಾರಿಸಲಾಗುವ ಪಾನೀಯದಿಂದ ನಿಮ್ಮ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಹಾಗೆಯೇ ಅವುಗಳಲ್ಲಿರುವ ಪೌಷ್ಟಿಕಾಂಶಗಳಿಂದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಈ ಪಾನೀಯವನ್ನು ತಯಾರಿಸಲು ನೀವು ಲವಂಗದ ಎಲೆ, ಏಲಕ್ಕಿ, ದಾಲ್ಚಿನ್ನಿ ಮತ್ತು ಜೀರಿಗೆ ತೆಗೆದುಕೊಳ್ಳಬೇಕು. ಏಲಕ್ಕಿಯಲ್ಲಿ ಒತ್ತಡವನ್ನು ನಿಯಂತ್ರಿಸುವ ಅಂಶಗಳು ಕಂಡು ಬರುತ್ತವೆ. ಅತಿಯಾದ ಒತ್ತಡದಿಂದಾಗಿ ತೂಕ ಹೆಚ್ಚಾಗುತ್ತದೆ ಎಂದು ಅನೇಕ ಸಂಶೋಧನೆಗಳಿಂದ ತಿಳಿದು ಬಂದಿವೆ. ಹೀಗಾಗಿ ಏಲಕ್ಕಿ ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಕೊಬ್ಬನ್ನು ಕರಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ಹಾಗೆಯೇ ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಬಹುದು. ಲವಂಗದ ಎಲೆಗಳನ್ನು ತರಕಾರಿ ಅಥವಾ ಬಿರಿಯಾನಿಯಲ್ಲಿ ಸುಗಂಧಕ್ಕಾಗಿ ಬಳಸಲಾಗುತ್ತದೆ. ಇದು ಸಹ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕಾರಿ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳ ಜೊತೆಗೆ, ವಿಟಮಿನ್ ಸಿ ಕೂಡ ಲವಂಗದ ಎಲೆಗಳಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ಚಯಾಪಚಯ ಕ್ರಿಯೆಯ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ದೇಹವನ್ನು ನಿರ್ವಿಷಗೊಳಿಸುತ್ತದೆ.

ಅದೇ ಸಮಯದಲ್ಲಿ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ದಾಲ್ಚಿನ್ನಿ ಸಹಾಯ ಮಾಡುತ್ತದೆ. ಇದಲ್ಲದೆ, ಅದರಲ್ಲಿರುವ ಕೆಲವು ಪೌಷ್ಟಿಕ ಅಂಶಗಳು ತೂಕವನ್ನು ನಿಯಂತ್ರಿಸುವ ಗುಣವನ್ನೂ ಹೊಂದಿವೆ. ಹಾಗೆಯೇ ಇದನ್ನು ಆಹಾರದಲ್ಲಿ ಬಳಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇವುಗಳನ್ನು ಸೇರಿಸಿ ಕುದಿಸಿದ ಪಾನೀಯವನ್ನು ಬೆಳಿಗ್ಗೆ ಮತ್ತು ದಿನದಲ್ಲಿ ಕನಿಷ್ಠ ಮೂರು ಬಾರಿ ಸೇವಿಸುವುದರಿಂದ ತೂಕವನ್ನು ಕಡಿಮೆಯಾಗುತ್ತದೆ.

ಈ ಪಾನೀಯವನ್ನು ಹೇಗೆ ತಯಾರಿಸುವುದು?ಈ ಪಾನೀಯವನ್ನು ತಯಾರಿಸಲು , 2-3 ಲವಂಗದ ಎಲೆಗಳು, 3-4 ಸಣ್ಣ ತುಂಡು ದಾಲ್ಚಿನ್ನಿ, 1 ಟೀಸ್ಪೂನ್ ಜೀರಿಗೆ ಮತ್ತು 2 ಸಣ್ಣ ಏಲಕ್ಕಿ ಅಗತ್ಯವಿದೆ. ಈ ಎಲ್ಲಾ ಮಸಾಲೆಗಳನ್ನು ನೀರಿನಲ್ಲಿ ಕುದಿಸಿ. ಅದರ ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ತಣ್ಣಗಾಗಲು ಬಿಡಿ. ಈ ಪಾನೀಯವನ್ನು ದಿನಕ್ಕೆ ಮೂರು ಬಾರಿಯಾದರೂ ಸೇವಿಸಿ.

Comments are closed.