ಆರೋಗ್ಯ

ಹೊಟ್ಟೆನೋವು ಕ್ಷಣ ಮಾತ್ರದಲ್ಲಿ ಶಮನಗೊಳಿಸಲು ಇಲ್ಲಿದೆ ಸರಳ ಉಪಾಯ !

Pinterest LinkedIn Tumblr

ಹೊಟ್ಟೆ ನೋವು ಬರಲು ನಾವು ಸೇವಿಸುವಂತಹ ಆಹಾರ ಪ್ರಮುಖ ಕಾರಣಗಳಲ್ಲಿ ಒಂದು . ಹೆಚ್ಚಾಗಿ ಆಹಾರ ಸಮಸ್ಯೆಯಿಂದ ಹಿಂದಿನ ದಿನಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಾದೆ. ವಿಷಾಹಾರ ಸೇವನೆ, ಆಮಶಂಕೆ, ಹೊಟ್ಟೆ ಅಥವಾ ಕರುಳುಗಳ ಒಳಭಾಗದಲ್ಲಿ ಹುಣ್ಣುಗಳಾಗುವುದು, ಅಪೆಂಡಿಸೈಟಿಸ್, ಪಿತ್ತಕೋಶದಲ್ಲಿ ಕಲ್ಲುಗಳು, ಮೂತ್ರಪಿಂಡದ ಕಲ್ಲುಗಳು ಇತ್ಯಾದಿಗಳಿಂದ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ.

ಹೊಟ್ಟೆ ನೋವಿನಿಂದ ಮುಕ್ತಿ ಪಡೆಯಲೂ ಕೆಲವೊಂದು ಸರಳ ಮನೆ ಮದ್ದುಗಳು

1) ಹೊಟ್ಟೆ ನೋವು ಕಂಡುಬಂದ ತಕ್ಷಣ ಹಸಿ ಪುದೀನಾ ಎಲೆಗಳನ್ನು ಚೆನ್ನಾಗಿ ಜಗಿದು ನುಂಗುವುದು ಉತ್ತಮ. ಇದು ಸಾಧ್ಯವಾಗದೇ ಹೋದರೆ ಕೆಲವು ಎಲೆಗಳನ್ನು ಮಿಕ್ಸಿಯಲ್ಲಿ ಕಡೆದು ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯಬಹುದು. ಕೆಲವೊಮ್ಮೆ ಊಟದ ತಕ್ಷಣ ಹೊಟ್ಟೆನೋವು ಕಂಡುಬರುತ್ತದೆ. ಆಗಲೂ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

2) ಒಂದು ವೇಳೆ ಅಜೀರ್ಣವಾಗದ ಕಾರಣ ಹೊಟ್ಟೆನೋವು ಕಾಣಿಸಿಕೊಂಡಗ ಒಂದು ಲೋಟ ನೀರಿನಲ್ಲಿ ಕೆಲವು ಏಲಕ್ಕಿ ಕಾಳುಗಳನ್ನು ಚೆನ್ನಾಗಿ ಕುದಿಸಿ ಇದರೊಂದಿಗೆ ಕೊಂಚ ಜೀರಿಗೆಯನ್ನೂ ಸೇರಿಸಿ ನೀರು ಅರ್ಧದಷ್ಟಾದ ಬಳಿಕ ತಣಿಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.

3) ಒಂದು ಲೋಟ ನೀರನ್ನು ಕುದಿಸಿ ಇದರಲ್ಲಿ ಒಂದು ಚಿಕ್ಕಚಮಚ ದೊಡ್ಡಜೀರಿಗೆಯನ್ನು ಹಾಕಿ ಮೂರು ನಾಲ್ಕು ನಿಮಿಷ ಕುದಿಸಿ. ಬಳಿಕ ಆರಿಸಿ ತಣಿಸಿ ಕೊಂಚ ಲಿಂಬೆರಸವನ್ನು ಮಿಶ್ರಣ ಮಾಡಿ. ಊಟಕ್ಕೂ ಮುನ್ನ ಈ ನೀರನ್ನು ಕುಡಿಯುವ ಮೂಲಕ ಹೊಟ್ಟೆನೋವಾಗುವುದನ್ನು ತಪ್ಪಿಸಬಹುದು.

4) ಒಂದು ಇಂಚು ಹಸಿ ಶುಂಠಿಯ ಸಿಪ್ಪೆ ತೆಗೆದು ಬಳಿಕ ಅದನ್ನು ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಸಣ್ಣ ಉರಿಯಲ್ಲಿ 10 ನಿಮಿಷ ಕುದಿಸಿರಿ. ಬಳಿಕ ಆ ನೀರನ್ನು ಸೋಸಿ, ಬಿಸಿಬಿಸಿಯಿರುವಾಗಲೇ ಕುಡಿಯಿರಿ. ಹೀಗೆ ಮಾಡಿ ದಿನಕ್ಕೆ ಎರಡು ಬಾರಿ ಕುಡಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ.

5) ಒಂದು ಲೋಟ ನೀರಿಗೆ ಕೆಲವು ಪುದೀನಾ ಎಲೆ ಮತ್ತು ತುಳಸಿ ಎಲೆಯನ್ನು ಹಾಕಿ ಕೆಲವು ಹೊತ್ತು ಕುದಿಸಿರಿ, ಬಳಿಕ ಆ ನೀರನ್ನು ಕುಡಿಯಿರಿ. ಆಗ ಹೊಟ್ಟೆನೋವು ಕೆಲವೇ ಕ್ಷಣದಲ್ಲಿ ವಾಸಿಯಾಗುತ್ತಾದೆ.

6) ಒಂದು ಚಮಚ ಅಲೋವೆರಾ ರಸಕ್ಕೆ ಒಂದು ಟೀಸ್ಪೂನ್ ಜೇನುತುಪ್ಪವನ್ನು ಮಿಕ್ಸ್ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಹೊಟ್ಟೆನೋವು ಕಡಿಮೆ ಮಾಡುತ್ತದೆ.

7) ಒಂದು ಅಥವಾ ಎರಡು ಚಿಕ್ಕಚಮಚದಷ್ಟು ಕಲ್ಲುಪ್ಪನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕರಗಿಸಿ ಗಟಗಟನೇ ಕುಡಿದುಬಿಡಬೇಕು. ಆಗ ಹೊಟ್ಟೆ ನೋವು ತಕ್ಷಣವೇ ಮಂಗಮಾಯವಾಗುತ್ತಾದೆ.

8) ಹೊಟ್ಟೆನೋವು ಬಂದ ಸಂದರ್ಭದಲ್ಲಿ ಚಾಕೋಲೇಟ್ ಮತ್ತು ಸ್ವೀಟ್ಸ್ ತಿನ್ನಬಾರದು ಅದಷ್ಟು ನೀರನ್ನು ಕುಡಿಯುವುದು ಉತ್ತಮ ಈ ರೀತಿ ಮಾಡುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತಾದೆ.

9)ಕ್ಯಾರೆಟ್ ಬೀಟ್ ರೂಟ್ ಜ್ಯೂಸ್ ಹಾಗೂ ನಾರು ಪದಾರ್ಥವಿರುವ ಆಹಾರವನ್ನು ಜ್ಯೂಸ್ ಮಾಡಿಕೊಂಡು ಸೇವಿಸಿದರೆ ಹೊಟ್ಟೆ ನೋವು ದಿನ ಕಳೆದಂತೆ ಕಡಿಮೆಯಾಗುತ್ತ ಹೋಗುತ್ತಾದೆ

10) ಪ್ರತೀ ದಿನ ಹೊಟ್ಟೆನೋವಿನಿಂದ ಬಳಲುತ್ತಿರುವವರು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು ನಂತರ ವಾಕಿಂಗ್ ಗೆ ಹೋಗುವುದರಿಂದ ದೇಹದಲ್ಲಿ ಜೀರ್ಣ ಕ್ರಿಯೆ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆನೋವು ದಿನಕಳೆದಂತೆ ಕಡಿಮೆಯಾಗುತ್ತಾದೆ.

Comments are closed.