ಕರಾವಳಿ

ಕಾಸರಗೋಡು ಜಿಲ್ಲೆಯ ನೂತನ ಎಸ್ಪಿಯಾಗಿ ಕನ್ನಡತಿ ಶಿಲ್ಪಾ ನೇಮಕ

Pinterest LinkedIn Tumblr

ಕಾಸರಗೋಡು, ಮೇ 30: ಕಾಸರಗೋಡು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ (SP)ಯಾಗಿ ಕರ್ನಾಟಕ ಮೂಲದ ಡಿ.ಶಿಲ್ಪಾರನ್ನು ನೇಮಿಸಲಾಗಿದೆ.

ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು ರವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಮಾರ್ಚ್‌ನಲ್ಲಿ ಕಾಸರಗೋಡು ಎಸ್ಪಿಯಾಗಿ ನಿಯುಕ್ತಿಗೊಂಡಿದ್ದ ಸಾಬು ಅವರನ್ನು ಇದೀಗ ಆಲಪ್ಪುಝ ಜಿಲ್ಲೆಗೆ ವರ್ಗಾಯಿಸಲಾಗಿದೆ.

ಇದೀಗ ಸಾಬು ಅವರ ಬದಲಿಗೆ ಕರ್ನಾಟಕ ಮೂಲದ ಡಿ. ಶಿಲ್ಫಾ ಅರವರನ್ನು ನೇಮಿಸಲಾಗಿದೆ. ಶಿಲ್ಪಾ ಕಾಸರಗೋಡು ಜಿಲ್ಲೆಯ ಪ್ರಥಮ ಮಹಿಳಾ ಎಸ್ಪಿಯಾಗಿದ್ದಾರೆ.

ಶಿಲ್ಪಾ ಅವರು ಈ ಹಿಂದೆ ಕಾಸರಗೋಡು ಎಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಣ್ಣೂರು ಎಎಸ್ಪಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

Comments are closed.