ರಾಷ್ಟ್ರೀಯ

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ 114 ಮಂದಿ ಪೊಲೀಸರಿಗೆ ಸೋಂಕು-ಓರ್ವ ಸೋಂಕಿತ ಅಧಿಕಾರಿ ಸಾವು

Pinterest LinkedIn Tumblr

ಮುಂಬೈ: ಮಾರಕ ಕೊರೋನಾ ವೈರಸ್ ಗೆ ನೆರೆಯ ಮಹಾರಾಷ್ಟ್ರ ಹೈರಾಣಾಗಿ ಹೋಗಿದ್ದು, ಕೊರೋನಾ ವೈರಸ್ ಲಾಕ್ ಡೌನ್ ನಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಪೊಲೀಸರಿಗೇ ಕೊರೋನಾ ಸೋಂಕು ತಗುಲುತ್ತಿದೆ.

ಹೌದು.. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ 114 ಮಂದಿ ಪೊಲೀಸರಿಗೆ ಸೋಂಕು ತಗುಲಿದ್ದು, ಓರ್ವ ಸೋಂಕಿತ ಅಧಿಕಾರಿ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಮಹಾರಾಷ್ಟ್ರದಾದ್ಯಂತ ಕೊರೋನಾ ವೈರಸ್ ಗೆ ಈ ವರೆಗೂ 2,325 ಪೊಲೀಸ್ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದು, 26 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 62228ಕ್ಕೆ ಏರಿಕೆಯಾಗಿದ್ದು, 2098 ಮಂದಿ ಸಾವಿಗೀಡಾಗಿದ್ದಾರೆ. 26997 ಸೋಂಕಿತರು ಗುಣಮುಖರಾಗಿದ್ದಾರೆ. ಪ್ರತಿ ನಿತ್ಯ 100 ಮಂದಿ ಪೊಲೀಸರಲ್ಲಿ ಸೋಂಕು ದೃಢಪಡುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

Comments are closed.