ಆರೋಗ್ಯ

ಕ್ಯಾನ್ಸರ್, ಚರ್ಮ ರೋಗ, ಒಬೆಸಿಟಿಯಂತಹ ಅನೇಕ ಕಾಯಿಲೆ ನಿವಾರಿಸಬಲ್ಲ ಈ ಕಾಯಿಯ ಮಹತ್ವ ತಿಳಿಯಿರಿ.

Pinterest LinkedIn Tumblr

ನಿಮಗೆ ಮಾಡಹಾಗಲ ಕಾಯಿ ಬಗ್ಗೆ ಗೊತ್ತಾ? ಹಾಗಲಕಾಯಿ ಜಾತಿಗೆ ಸೇರಿದ ಇದನ್ನು ಕೆಲವು ಪ್ರದೇಶಗಳಲ್ಲಿ ಮಾಡಹಾಗಲ, ಮೂಡಹಾಗಲ ಕಾಯಿ ಎನ್ನುತ್ತಾರೆ. ನೋಡಲು ಹಾಗಲಕಾಯಿ ತರಹವೇ ಇರುತ್ತದೆ. ಆದರೆ ಕಹಿ ಇರಲ್ಲ. ನೋಡಲು ಉದ್ದವಾಗಿ ಅಲ್ಲದೆ ಗುಂಡಾಗಿ ಅದರ ಮೇಲೆ ಚಿಕ್ಕಚಿಕ್ಕ ಮುಳ್ಳಿನಂತಹವು ಇರುತ್ತವೆ. ಅವುಗಳನ್ನು ನಮ್ಮ ಅಡುಗೆಯಲ್ಲಿ ಚೆನ್ನಾಗಿ ಬಳಸಿಕೊಂಡರೆ ಶುಗರ್, ಕ್ಯಾನ್ಸರ್, ಚರ್ಮ ರೋಗಗಳು, ಒಬೆಸಿಟಿಯಂತಹ ಅನೇಕ ಕಾಯಿಲೆಗಳು ಮೊದಲೇ ನಿವಾರಿಸಿಕೊಳ್ಳಬಹುದು.

ಮಾಡಹಾಗಲಕಾಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ನಿಮಗಾಗಿ:
ಗರ್ಭಿಣಿಯರಿಗೆ: ಮಾಡಹಾಗಲಕಾಯಲ್ಲಿ ಫೋಲೇಟ್‌ಗಳು ಅಧಿಕವಾಗಿ ಇರುತ್ತವೆ. ಇವು ದೇಹದಲ್ಲಿನ ಹೊಸ ಕಣಗಳ ವೃದ್ಧಿಗೆ, ಗರ್ಭಸ್ಥ ಶಿಶುವಿನ ಬೆಳವಣಿಗೆಗೆ ಸಹಕಾರಿ.

ಮಧುಮೇಹಿಗಳು: ಮಾಡಹಾಗಲಕಾಯಿ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.

ಕ್ಯಾನ್ಸರ್ ರೋಗಿಗಳು: ಮಾಡಹಾಗಲದಲ್ಲಿ ಇರುವ ಫೈಟೋ ನ್ಯೂಟ್ರಿಯಂಟ್‌ಗಳು ಪಿತ್ತಜನಕಾಂಗ, ಸ್ನಾಯುಗಳ ಕಣಜಾಲಕ್ಕೆ ಶಕ್ತಿಯನ್ನು ನೀಡುತ್ತವೆ. ನಿತ್ಯ ತಿನ್ನುವುದರಿಂದ ಇದರಲ್ಲಿನ ಪೋಷಕಗಳು ದೇಹದಲ್ಲಿ ಉಂಟಾಗುವ ಕ್ಯಾನ್ಸರ್ ಕಾರಕಗಳನ್ನು ನಾಶಪಡಿಸುತ್ತವೆ.

ಮಾಡಹಾಗಲದಲ್ಲಿನ ವಿಟಮಿನ್ ’ಸಿ’ ದೇಹವನ್ನು ಸೋಂಕುಗಳಿಂದ ಕಾಪಾಡುತ್ತದೆ.ಇದರಲ್ಲಿ ಫ್ಲವನಾಯಿಡ್ಸ್ ಸಮೃದ್ಧಿಯಾಗಿ ಲಭಿಸುತ್ತವೆ. ಇವು ಆಂಟಿ ಏಜಿಂಗ್ ಆಗಿ ಕೆಲಸ ಮಾಡುತ್ತವೆ. ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತವೆ. ಇದರಲ್ಲಿ ಲಭಿಸುವ ವಿಟಮಿನ್ ’ಎ’ ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸುತ್ತದೆ.

ಮೂತ್ರಪಿಂಡ ಸಮಸ್ಯೆಯಿಂದ ಬಳಲುವವರು ಈ ತರಕಾರಿಗೆ ಎಷ್ಟು ಪ್ರಾಮುಖ್ಯತೆ ಕೊಟ್ಟರೆ ಅಷ್ಟು ಒಳ್ಳೆಯದು. ಜೀರ್ಣವ್ಯವಸ್ಥೆಯನ್ನು ಉತ್ತಮಪಡಿಸಲು ಇವು ಸಹಕಾರಿ. ಸ್ವಲ್ಪ ಕ್ಯಾಲೊರಿಗಳಿರುವ ಕಾರಣ ದಪ್ಪ ಆಗುತ್ತಾರೆಂಬ ಭಯ ಬೀಳಬೇಕಾಗಿಲ್ಲ.ಫೈಬರ್, ವಿಟಮಿನ್ ‌ಗಳು, ಆಂಟಿ ಆಕ್ಸಿಡೆಂಟ್‌ಗಳು ಅಧಿಕವಾಗಿ ಲಭಿಸುತ್ತವೆ.

Comments are closed.