ರಾಷ್ಟ್ರೀಯ

ಕೋವಿಡ್-19 ಡ್ಯೂಟಿ ಮುಗಿಸಿ 20 ದಿನಗಳ ನಂತರ ಮನೆಗೆ ವಾಪಸ್ಸಾದ ವೈದ್ಯೆಗೆ ಅಭೂತಪೂರ್ವ ಸ್ವಾಗತ; ಈ ಬಗ್ಗೆ ಮೋದಿ ಹೇಳಿದ್ದೇನು…?

Pinterest LinkedIn Tumblr

ನವದೆಹಲಿ: ಕೋವಿಡ್-19 ಡ್ಯೂಟಿ ಮುಗಿಸಿ 20 ದಿನಗಳ ನಂತರ ಮನೆಗೆ ವಾಪಸ್ಸಾದ ವೈದ್ಯೆಗೆ ಕುಟುಂಬಸ್ಥರು ಹಾಗೂ ನೆರೆಹೊರೆಯವರಿಂದ ಅಭೂತಪೂರ್ವ ಸ್ವಾಗತ ನೀಡಲಾಗಿದೆ. ಮನಕಲುಕುವ ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Moments like this fill the heart with happiness.

This is the spirit of India.

We will courageously fight COVID-19.

We will remain eternally proud of those working on the frontline. https://t.co/5amb5nkikS

— Narendra Modi (@narendramodi) April 30, 2020
ಕೋವಿಡ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯೆ 20 ದಿನಗಳ ಕಾಲ ಕೆಲಸ ಮಾಡಿ ಮನೆಗೆ ವಾಪಾಸ್ಸಾದ ಬಳಿಕ ಆಕೆಯ ಕುಟುಂಬಸ್ಥರು ಮತ್ತು ನೆರೆಹೊರೆಯವರು ಸ್ವಾಗತಿಸಿರುವ ವಿಡಿಯೋವನ್ನು ಚಂಡೀಗಢ ಬಿಜೆಪಿ ಕಾರ್ಯದರ್ಶಿ ದೀಪಕ್ ಮಲ್ಹೋತ್ರಾ ಟ್ವೀಟ್ ಮಾಡಿದ್ದರು.

ಆ ವಿಡಿಯೋವನ್ನು ಶೇರ್ ಮಾಡಿರುವ ಮೋದಿ, ಇದು ಭಾರತದ ಸ್ಪೂರ್ತಿ, ಕೋವಿಡ್-19 ವಿರುದ್ಧ ಧೈರ್ಯದಿಂದ ಹೋರಾಡುತ್ತೇವೆ. ಈ ನಿಟ್ಟಿನಲ್ಲಿ ಮಂಚೂಣಿಯಲ್ಲಿ ಕೆಲಸ ಮಾಡುವವರ ಬಗ್ಗೆ ನಾವು ಯಾವಾಗಲೂ ಹೆಮ್ಮೆ ಪಡುತ್ತೇವೆ ಎಂದು ಮೋದಿ ಬರೆದುಕೊಂಡಿದ್ದಾರೆ.

Comments are closed.