ಆರೋಗ್ಯ

Big Breaking: ತ್ರಾಸಿಯಲ್ಲ….ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್, ಹಲವರು ಕ್ವಾರೆಂಟೈನ್‌ಗೆ

Pinterest LinkedIn Tumblr

ಉಡುಪಿ/ಕುಂದಾಪುರ: ಮುಂಬಯಿನಿಂದ ಖರ್ಜೂರ ಸಾಗಾಟದ ವಾಹನದಲ್ಲಿ ಬಂದಿದ್ದ ಮಂಡ್ಯ ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್ ಬಂಕ್‌ವೊಂದರಲ್ಲಿ ಸ್ನಾನ ಮಾಡಿದ್ದು ಮಾತ್ರವಲ್ಲದೇ ಹಲವು ಗಂಟೆಗಳ ಕಾಲ ಪೆಟ್ರೋಲ್ ಪಂಪ್ ಆವರಣದಲ್ಲಿ ತಂಗಿದ್ದು ಆರೋಗ್ಯ ಇಲಾಖೆ ಮತ್ತು ಪೊಲೀಸರ ಪರಿಶೀಲನೆ ವೇಳೆ ದೃಢವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೆಕ್ಕಟ್ಟೆ ಪೆಟ್ರೋಲ್ ಪಂಪ್ ಮಾಲಿಕ ಸಹಿತ ಸದ್ಯ 7 ಮಂದಿಯನ್ನು ಮತ್ತು ಲಾರಿ ಸಾಗಾಟದ ವೇಳೆ ತಪಾಸಣೆ ಮತ್ತು ಅವರ ಜೊತೆಗಿದ್ದ ಸಾಸ್ತಾನ ಟೋಲ್ ಸಂಬಂದಪಟ್ತ ಆರು ಮಂದಿಯನ್ನು ಕ್ವಾರೆಂಟೈನ್‌ಗೆ ಕಳಿಸಲಾಗಿದೆ.

(ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸಿಸಿ ಟಿವಿ ಫೂಟೇಜ್)

ಮುಂಬೈನಿಂದ ಲಾರಿಯೊಂದರಲ್ಲಿ ಕದ್ದು ಮಂಡ್ಯಕ್ಕೆ ತಲುಪಿದ ವ್ಯಕ್ತಿಗೆ ಕೊರೋನಾ ಸೋಂಕು ವಕ್ಕರಿಸಿತ್ತು. ಆತನನ್ನು ಚಿಕಿತ್ಸೆಗೆ ಒಳಪಡಿಸಿ ಆತನ ಟ್ರಾವೆಲ್ ಹಿಸ್ಟರಿ ಪಡೆದಾಗ ತಾನು ಮುಂಬೈನಿಂದ ಲಾರಿಯಲ್ಲಿ ಆಗಮಿಸಿದ್ದು ಶಿರೂರು ಚೆಕ್ ಪೋಸ್ಟ್‌ನಿಂದ ಸಾಸ್ತಾನ ಚೆಕ್ ಪೋಸ್ಟ್ ಮಧ್ಯದಲ್ಲಿ ಬರುವ ಪೆಟ್ರೋಲ್ ಬಂಕ್ ವೊಂದರಲ್ಲಿ ಪೆಟ್ರೋಲ್ ಹಾಕಿ, ಅಲ್ಲಿಯೇ ಸ್ನಾನ ಮಾಡಿದ್ದಲ್ಲದೇ ರಾತ್ರಿ ತಂಗಿ ಮುಂಜಾನೆ ಅದೇ ಲಾರಿಯಲ್ಲಿ ಸಾಗಿರುವುದಾಗಿ ಆತ ಹೇಳಿಕೊಂಡಿದ್ದ. ಇದರಿಂದ ಈ ಪ್ರದೇಶಗಳಲ್ಲಿ ಬರುವ ಬಹುತೇಕ ಪೆಟ್ರೋಲ್ ಬಂಕ್‌ಗಳನ್ನು ತಪಾಸಣೆ ನಡೆಸಲಾಗಿತ್ತು. ಮೊದಲಿಗೆ ವ್ಯಕ್ತಿ ಹೇಳಿದಂತೆ ತ್ರಾಸಿ ಪೆಟ್ರೋಲ್ ಪಂಪ್‌ನಲ್ಲಿ ಸಿಸಿ ಕ್ಯಾಮೆರಾ ತಪಾಸಣೆ ಮಾಡಿದಾಗ ಅಲ್ಲಿ ಯಾವುದೇ ಕುರುಹು ಸಿಕ್ಕಿರಲಿಲ್ಲ. ಬಳಿಕ ಒಂದೆರಡು ಕಡೆ ತಪಾಸಣೆ ನಡೆಸಿದ್ದು ಈ ವೇಳೆ ತೆಕ್ಕಟ್ಟೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಲಾರಿ ಬಂದಿರುವುದು ಮತ್ತು ಅಲಿಯೇ ತಂಗಿರುವುದು, ಲಾರಿಯಲ್ಲಿ ಬಂದವರು ಸ್ನಾನ ಮಾಡಿರುವುದು ಅಲ್ಲಿನ ಸಿಸಿಟಿವಿ ಮೂಲಕ ದೃಢಪಟ್ಟಿದೆ. ಮೊದಲಿಗೆ ತ್ರಾಸಿ ಪೆಟ್ರೋಲ್ ಪಂಪ್ ಸೀಲ್ ಡೌನ್ ಎಂಬ ಮಾತುಗಳು ಆ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದ್ದು ಕೆಲ ಕಾಲ ಗೊಂದಲ ಉಂಟಾಗಿತ್ತು.

ತೆಕ್ಕಟ್ಟೆ ಪೆಟ್ರೋಲ್ ಬಂಕ್ ಬಂಕ್ಸೀಲ್ ಡೌನ್..
ತೆಕ್ಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಸೋಂಕಿತ ವ್ಯಕ್ತಿ ಆತ ಸ್ನಾನ ಮಾಡಿರುವುದು ಖಚಿತವಾಗುತ್ತಿದ್ದಂತೆ, ಪೆಟ್ರೋಲ್ ಪಂಚ್ ಸೀಲ್ ಡೌನ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಪೆಟ್ರೋಲ್ ಬಂಕ್ ನ ಮಾಲಿಕ ಸೇರಿದಂತೆ ಒಟ್ಟು 7 ಮಂದಿ ಸಿಬಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು ಉಳಿದ ನಾಲ್ವರನ್ನು ನಾಳೆ ಉಡುಪಿಯ ಐಸೋಲೇಶನ್ ವಾರ್ಡಿಗೆ ಕಳುಹಿಸಲಾಗುತ್ತದೆ. ಆರೋಗ್ಯ ಇಲಾಖೆಯ ತೀವ್ರವಾದ ಕಣ್ಗಾವಲು ತೆಕ್ಕಟ್ಟೆ ಪ್ರದೇಶಕ್ಕೆ ಇಡಲಾಗಿದೆ. ಕಂಟೋನ್ಮೆಂಟ್ ಝೋನ್, ಬಪ್ಪರ್ ಝೋನ್ ಸೇರಿದಂತೆ ಮುಂದಿನ ಎಲ್ಲಾ ನಿರ್ಧಾಗರಳನ್ನು ಜಿಲ್ಲಾಡಳಿತ ತೀರ್ಮಾನಿಸಲಿದೆ.

ಆರು ಮಂದಿ ಟೋಲ್ ಸಿಬ್ಬಂದಿಗೆ ಕ್ವಾರೆಂಟೈನ್…
ತೆಕ್ಕಟ್ಟೆಯಿಂದ ಮುಂಜಾನೆ ಹೊರಟ ಲಾರಿಯು ಎ.22 ಬೆಳಿಗ್ಗೆ 3.38 ರ ಸುಮಾರಿಗೆ ಸಾಸ್ತಾನ ಟೋಲ್ ಫ್ಲಾಜಾ ದಾಟಿತ್ತು. ಈ ವೇಳೆ ಪಾಸ್ಟ್ ಟ್ಯಾಗ್ ಸರಿಪಡಿಸಿ ಟೋಲ್ ಪಡೆಯಲು ಅಂದು ಕರ್ತವ್ಯದಲ್ಲಿದ್ದ ಟೋಲ್ ಸಿಬ್ಬಂದಿಗಳು ಮತ್ತು ಅವರ ಸಹವರ್ತಿಗಳಾದ ಆರು ಮಂದಿಯನ್ನು ಕೂಡ ಕ್ವಾರೆಂಟೈನ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ತಡರಾತ್ರಿಯವರೆಗೂ ಇಲಾಖೆ ಕೆಲಸ…
ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಬೈಂದೂರು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ ಹಾಗೂ ಕೋಟ ಪಿ‌ಎಸ್‌ಐ ನಿತ್ಯಾನಂದ ಗೌಡ ಹಾಗೂ ಸಿಬ್ಬಂದಿಗಳು ತಡರಾತ್ರಿಯವರೆಗೂ ತೆಕ್ಕಟ್ಟೆಯಲ್ಲಿದ್ದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ರಾತ್ರಿಯೇ ಹಲವರನ್ನು ಕ್ವಾರೆಂಟೈನ್ ಮಾಡಲು ಕಳುಹಿಸಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.