ಅಂತರಾಷ್ಟ್ರೀಯ

ಮೈಕೈ ನೋವು, ರುಚಿ, ವಾಸನೆ ಹತ್ತದಿರುವುದು, ನಡುಕ, ತಲೆನೋವು, ಗಂಟಲು ನೋವು ಇವೂ ಕೂಡ ಕೊರೋನಾ ಲಕ್ಷಣ: ಅಮೆರಿಕದ CDC ಪಟ್ಟಿ

Pinterest LinkedIn Tumblr


ನ್ಯೂಯಾರ್ಕ್(ಏ. 27): ಕೊರೋನಾ ವೈರಸ್ ಮನುಷ್ಯನ ಅರಿವಿಗೆ ಬಂದು ನಾಲ್ಕೈದು ತಿಂಗಳಾಗಿರಬಹುದು. ಅದರ ಬಗ್ಗೆ ಹೆಚ್ಚು ಗೊತ್ತಾಗುವ ಮುಂಚೆಯೇ ಸಾಕಷ್ಟು ಅನಾಹುತಗಳಾಗುತ್ತಿವೆ. ಜ್ವರ, ನೆಗಡಿ, ಕೆಮ್ಮು ಇದ್ದರೆ ಕೋವಿಡ್-19 ರೋಗ ಇರಬಹುದು ಎಂದು ಹೇಳಲಾಗುತ್ತಿತ್ತು. ಅದರ ಪ್ರಕಾರವಾಗಿಯೇ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗ ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಂಸ್ಥೆಯು ಕೊರೋನಾ ರೋಗದ ಇನ್ನಷ್ಟು ಲಕ್ಷಣಗಳನ್ನ ಪತ್ತೆ ಹಚ್ಚಿದೆ.

ಮೈಕೈ ನೋವು ಸೇರಿದಂತೆ ಒಟ್ಟು ಆರು ಹೊಸ ಲಕ್ಷಣಗಳನ್ನು ಗುರುತಿಸಲಾಗಿದೆ. ಮೈಕೈ ನೋವು, ರುಚಿ, ವಾಸನೆ ಹತ್ತದಿರುವುದು, ನಡುಕ, ತಲೆನೋವು, ಗಂಟಲು ನೋವು ಇವೂ ಕೂಡ ಕೊರೋನಾ ಲಕ್ಷಣಗಳೆನ್ನಲಾಗಿದೆ.

ಇಷ್ಟು ದಿನ ಜ್ವರ, ಕೆಮ್ಮು, ಉಸಿರಾಟ ತೊಂದರೆಯು ರೋಗ ಲಕ್ಷಣಗಳ ಪಟ್ಟಿಯಲ್ಲಿದ್ದವು.

ಪರಿಣಿತರ ಪ್ರಕಾರ, ಕೋವಿಡ್ ರೋಗದ ಸೋಂಕು ತಗುಲಿದ 2-14 ದಿನಗಳಲ್ಲಿ ರೋಗ ಲಕ್ಷಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಕೆಲವೊಮ್ಮೆ ರೋಗ ಲಕ್ಷಣಗಳು ಬೆಳಕಿಗೆ ಬರುವುದು ಇನ್ನೂ ತಡವಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಅತ್ಯಗತ್ಯ ಎನ್ನಲಾಗುತ್ತಿದೆ.

Comments are closed.