ಆರೋಗ್ಯ

ನಮ್ಮಲ್ಲಿ ವಿಟಮಿನ್ ಡಿ ಕಡಿಮೆಯಾಗಿದೆ ಎಂದು ಗೋತ್ತಾಗುವುದು ಹೇಗೆ….ತಿಳಿಯಿರಿ.

Pinterest LinkedIn Tumblr

ವಿಟಮಿನ್ ಡಿ ದೇಹದಲ್ಲಿನ ಕೊಬ್ಬು ಕರಗಿಸುತ್ತೆ. ಅಷ್ಟೇ ಅಲ್ಲ ದೇಹದ ಕಾರ್ಯಗಳಲ್ಲೂ ಮುಖ್ಯ ಪಾತ್ರ ವಹಿಸುತ್ತದೆ. ಮೂಳೆಗಳನ್ನು ಗಟ್ಟಿಗೊಳಿಸಲು ಮತ್ತು ಮೂಳೆಗಳಲ್ಲಿನ ಬಲವನ್ನು ಕಾಪಾಡಲು ವಿಟಮಿನ್ ಡಿ ಬಹುಮುಖ್ಯ. ಇನ್ನು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಮತ್ತು ಸೆಲ್ಸ್​ಗಳನ್ನು ನಿಯಂತ್ರಿಸಲು ಅಲ್ಲದೇ ಕ್ಯಾನ್ಸರ್ ರೋಗ ತಡೆಗಟ್ಟಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಉತ್ಪಾದನೆಯಾಗುವ ಪ್ರಮುಖ ಅಂಗ ನಮ್ಮ ದೇಹದ ಚರ್ಮ. ಸೂರ್ಯನ ಕಿರಣ ಚರ್ಮದ ಮೇಲೆ ಬಿದ್ದಾಗ ವಿಟಮಿನ್ ಡಿ ಉತ್ಪತ್ತಿಯಾಗುತ್ತೆ. ವಿಟಮಿನ್ ಡಿ ಕೊರತೆಯಿಂದ ಮೂಳೆಯ ಶಕ್ತಿ ಕುಂದುತ್ತೆ. ಮೂಳೆ ಮೆತ್ತಗಾಗುತ್ತೆ. ಮಕ್ಕಳಲ್ಲಿ ರಿಕೆಟ್ಸ್ ಹಾಗೂ ದೊಡ್ಡವರಲ್ಲಿ ಆಸ್ಟಿಯೋಮಲೇಸಿಯಾ ತೊಂದ್ರೆ ಜೊತೆಗೆ ಶ್ವಾಸಕೋಶದ, ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್ ಇನ್ನೂ ಅನೇಕ ನರರೋಗಗಳು ಕಂಡು ಬರುತ್ತೆ.

ಹಾಗಾದರೆ ನಮ್ಮ ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾದರೆ ಹೇಗೆ​ ಗೊತ್ತಾಗುತ್ತೆ..?

1. ನೋವು ಮತ್ತು ಮೂಳೆ ದುರ್ಬಲತೆ:
ಮೂಳೆ, ಎಲುಬು, ಮಾಂಸಖಂಡಗಳಲ್ಲಿ ನೋವು ಶುರುವಾಗುತ್ತೆ. ಮೂಳೆ ಮೆತ್ತಗಾಗುತ್ತೆ. ಮೊದಮೊದಲು ತೊಂದ್ರೆ ಗೊತ್ತಾಗಲ್ಲ. ಆದ್ರೆ ಹೋಗ್ತಾ ಹೋಗ್ತಾ ನೋವು ಜಾಸ್ತಿಯಾಗುತ್ತೆ.

2. ರೋಗ ನಿರೋಧಕ ಶಕ್ತಿ ಕುಂದುತ್ತೆ:
ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾದ್ರೆ, ಯಾವಾಗ್ಲೂ ಖಾಯಿಲೆ ಬೀಳ್ತಿರ್ತೀವಿ. ನಮ್​ ದೇಹದಲ್ಲಿ ನಿಶ್ಯಕ್ತಿ ಕಾಣಿಸಿಕೊಳ್ಳುತ್ತೆ.. ಆಗಾಗ ಸುಸ್ತಾಗುತ್ತೆ. ಹೀಗೆಲ್ಲಾ ಆಗ್ಬಾರ್ದು ಅಂದ್ರೆ ವಿಟಮಿನ್ ಡಿ ಆಹಾರ ಸೇವಿಸ್ಬೇಕು.

3. ಅಧಿಕ ರಕ್ತದೊತ್ತಡ:
ಸಾಮಾನ್ಯವಾಗಿ ದೇಹದ ವಿಟಮಿನ್ ಡಿ ಮಟ್ಟಗಳು ಕಡಿಮೆಯಾದಾಗ ರಕ್ತದೊತ್ತಡ ಜಾಸ್ತಿಯಾಗುತ್ತೆ. ತಲೆಸುತ್ತು ಬರುತ್ತೆ.

4. ಬೇಸರ, ಖಿನ್ನತೆ:
ನಮಗೆ ದುಃಖ, ಬೇಸರ ಕಾಡೋಕೆ ಶುರುವಾಗುತ್ತೆ. ನಮಗೇ ಗೊತ್ತಿಲ್ಲದೇ ನಾವು ಖಿನ್ನತೆಗೆ ಒಳಗಾಗ್ತೀವಿ. ಈ ಜೀವನಾನೇ ಬೇಡ.. ಇದೂ ಒಂದು ಬದುಕಾ ಅಂತ ಅನ್ಸೋಕೆ ಶುರುವಾಗುತ್ತೆ.. ಯಾವುದ್ರ ಮೇಲೂ ಆಸಕ್ತೀನೇ ಇರಲ್ಲ. ಆದ್ರೆ ವಿಟಮಿನ್ ಡಿ ದೇಹದಲ್ಲಿ ಜಾಸ್ತಿ ಇದ್ರೆ, ಯಾವಾಗ್ಲೂ ಲವಲವಿಕೆಯಿಂದ ಇರ್ತೀವಿ. ಊಟ ಝಾಸ್ತಿ ಮಾಡ್ತೀವಿ. ಕೆಲಸ ಎಷ್ಟು ಮಾಡಿದ್ರೂ ಸುಸ್ತಾಗಲ್ಲ.

5. ಕರುಳಿನಲ್ಲಿ ತೊಂದರೆ:
ಕೆಲವು ಜಠರದ ಕರುಳಿನ ಪರಿಸ್ಥಿತಿಗಳು ವಿಟಮಿನ್ ಡಿ ಹೀರಿಕೊಳ್ಳುವಿಕೆಯನ್ನು ಪರಿಣಾಮ ಬೀರುತ್ತವೆ. ಅದೇ ವಿಟಮಿನ್ ಕಡಿಯಾದಾಗ ಕ್ರೋನ್​ ಅನ್ನೋ ಖಾಯಿಲೆಗೆ ತುತ್ತಾಗ್ತೀವಿ. ಅದೇ ವಿಟಮಿನ್ ಡಿ ಪ್ರಮಾಣ ಜಾಸ್ತಿ ಇದ್ರೆ, ದೇಹದಲ್ಲಿರೋ ಕೊಬ್ಬನ್ನ ಕರಗಿಸುತ್ತೆ.

6. ಬೆವರುವಿಕೆ:
ನೀವೇನಾದ್ರು ತುಂಬಾ ಬೆವರುತ್ತೀರಾ..? ಹಾಗಾದ್ರೆ ನಿಮ್ಮಲ್ಲಿ ವಿಟಮಿನ್ ಡಿ ಕಡಿಮೆಯಾಗಿರಬೇಕು. ಯಾಕಂದ್ರೆ ದೇಹದಲ್ಲಿ ವಿಟಮಿನ್ ಡಿ ಮಟ್ಟ ಕಡಿಮೆಯಾದ್ರೆ ತುಂಬಾ ಬೆವರುತ್ತೀವಿ. ಅದ್ರಲ್ಲೂ ಹಣೆ ಮೇಲೆ ಹೆಚ್ಚು ಬೆವರುತ್ತಿದ್ರೆ ನಿಮ್ಗೆ ವಿಟಮಿನ್ ಡಿ ಕಡಿಮೆಯಾಗಿರೋದು ಗ್ಯಾರೆಂಟಿ.

7. ಹೃದಯ ತೊಂದರೆ:
ವಿಟಮಿನ್ ಡಿಗೂ ಹೃದಯಕ್ಕೂ ಅವಿನಾಭಾವ ಸಂಬಂಧವಿದೆ. ನಿಮ್ಮಲ್ಲಿ ವಿಟಮಿನ್ ಡಿ ಕಡಿಯಾದಾಗ ಟೈಪ್ 2 ಮಧುಮೇಹ, ಹೃದಯ ಸಂಬಂಧಿ ಖಾಯಿಲೆಗಳು, ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತೆ.. ಸೋ.. ಎಚ್ಚರವಾಗಿರಿ.. ಇಂಥವರಿಗೆ ಹಾರ್ಟ್​ ಅಟ್ಯಾಕ್​ ಆಗೋ ಚ್ಯಾನ್ಸಸ್​ ಜಾಸ್ತಿ ಇರುತ್ತೆ.

ಸಮೃದ್ಧ ಆಹಾರ ಸೇವಿಸುವುದರಿಂದ ಮತ್ತು ಸೂರ್ಯನ ಬೆಳಕಿಗೆ ನಿಮ್ಮನ್ನು ನೀವು ಸಾಕಷ್ಟು ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಕೊರತೆಯಾಗುವುದನ್ನು ತಡೆಯಬಹುದು.

Comments are closed.