ಆರೋಗ್ಯ

ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಕಾಡುವ ಎದೆಯುರಿ ಸಮಸ್ಯೆ ನಿವಾರಣೆಗೆ ಸುಲಭ ಪರಿಹಾರ

Pinterest LinkedIn Tumblr

ಗರ್ಭಿಣಿ ಹೆಂಗಸರಲ್ಲಿ ಎದೆಯುರಿತವು ಅತ್ಯಂತ ಸಾಮಾನ್ಯವಾದ ತೊಂದರೆ ಆಗಿದ್ದು, ಇದರಿಂದ ಹಲವಾರು ರೀತಿಯಲ್ಲಿ ಗರ್ಭಿಣಿ ಹೆಂಗಸರು ಕಷ್ಟ ಅನುಭವಿಸಬೇಕಾಗುತ್ತದೆ. ಈ ಎದೆಯುರಿತದ ಅನುಭವ ನಿಮಗೆ ಗಂಟಲು ಮತ್ತು ಎದೆಯಲ್ಲಿ ಉಂಟಾಗುತ್ತದೆ. ಇದು ನಿಮಗೆ ಪ್ರೆಗ್ನನ್ಸಿಯ ಕೊನೆಯ ಮೂರು ತಿಂಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು. ಈ ಲೇಖನದಲ್ಲಿ ನಿಮಗೆ ಎದೆಯುರಿಗೆ ಪರಿಣಾಮಕಾರಿ ಮನೆಮದ್ದುಗಳನ್ನ ತಿಳಿಸುತ್ತೇವೆ. ಓದಿ :

೧. ಅನಾನಸ್
ಕೆಲವೊಮ್ಮೆ ಸಿಟ್ರಸ್ ಹಣ್ಣುಗಳು ಎದೆಯುರಿ ಉಂಟು ಮಾಡಬಹುದು. ಆದರೆ ಅನಾನಸ್ ಹಣ್ಣಿನಲ್ಲಿ ಇರುವ ಬ್ರೊಮೆಲೈನ್ ಮತ್ತು ಇತರೆ ರಾಸಾಯನಿಕ ಪದಾರ್ಥಗಳು ಉರಿತವನ್ನ ಕಡಿಮೆ ಮಾಡುತ್ತದೆ. ನೀವು ಸ್ವಲ್ಪ ಅನಾನಸ್ ಹಣ್ಣನ್ನು ತಿನ್ನಬಹುದು, ಆದರೆ ಅದನ್ನೇ ಅತಿಯಾಗಿ ಸೇವಿಸಬೇಡಿ.

೨. ಸೋಂಪು ಕಾಳು
ಎದೆಯುರಿಗೆ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದು ಸೋಂಪು ಕಾಳು. ಸೋಂಪು ಕಾಳು ಎದೆಯುರಿ ಮತ್ತು ಅಜೀರ್ಣ ಸಮಸ್ಯೆಯನ್ನು ದೂರವಿಡುತ್ತದೆ. ನೀವು ಒಂದು ಲೋಟದಷ್ಟು ನೀರಿಗೆ, 3 ಚಮಚದಷ್ಟು ಸೋಂಪು ಕಾಳು ಬೆರೆಸಿ, 10 ನಿಮಿಷಗಳ ಕಾಲದವರೆಗೆ ಕುದಿಸಿ, ಬಿಸಿಯಾಗಿದ್ದಾಗಲೇ ಸೇವಿಸಿ. ಆದರೆ, ಇದನ್ನು ಕೂಡ ನೀವು ಅತಿಯಾಗಿ ಸೇವಿಸಬಾರದು.

೩. ಜೇನುತುಪ್ಪ
ಜೇನುತುಪ್ಪವನ್ನು ನೀವು ನಂಬಿಕೊಳ್ಳಬಹುದು. ಏಕೆಂದರೆ, ಇದು ನಿಮ್ಮ ಹೊಟ್ಟೆಯನ್ನು ಆರಾಮಾಗಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಪ್ರೋತ್ಸಾಹಿಸುತ್ತದೆ. ಇನ್ನೊಂದು ವಿಧಾನ ಎಂದರೆ, ಕೆನೆ ತೆಗೆದ ಹಾಲಿನೊಂದಿಗೆ ಬೆರೆಸಿ, ಕಲಿಸಿ, ಕುಡಿಯುವುದು.

೪. ಸೇಬು ಹಣ್ಣು
ಗರ್ಭಿಣಿ ಆಗಿದ್ದಾಗ ಆಪಲ್ ಹಣ್ಣು ಮತ್ತಷ್ಟು ಉಪಕಾರಿಯಾಗುತ್ತದೆ. ನೀವು ಪ್ರತಿದಿನ ಸೇಬು ಹಣ್ಣು ಸೇವಿಸುವುದರ ಮೂಲಕ ನೀವು ಎದೆಯುರಿ ತಡೆಯಬಹುದು, ಹೊಟ್ಟೆಗೆ ಆರಾಮ ನೀಡಬಹುದು ಮತ್ತು ನಿಮ್ಮ ಮಗುವಿನ ಬೆಳವಣಿಗೆಗೆ ಬೇಕಿರುವ ಪೋಷಕಾಂಶಗಳನ್ನ ಕೂಡ ಲಭಿಸಿಕೊಳ್ಳಬಹುದು.

೫. ಶುಂಠಿ
ಶುಂಠಿಯು ವಾಕರಿಕೆ, ವಾಂತಿ ಉಂಟಾಗುವ ಅನುಭವದ ವಿರುದ್ಧ ಹೋರಾಡುತ್ತದೆ ಮತ್ತು ಎದೆಯುರಿಯನ್ನು ಕೂಡ ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ನೀವು ಇದನ್ನು ನಿಮ್ಮ ಅಡುಗೆಯಲ್ಲಿ ಹೆಚ್ಚಾಗಿ ಬಳಸಿ ಸೇವಿಸಬಹುದು ಅಥವಾ ಜಿಂಜರ್ ಟೀ ಮಾಡಿಕೊಂಡು ಸೇವಿಸಬಹುದು.

Comments are closed.