ಗಲ್ಫ್

ಒಮಾನಿನ ರಾಜಕುಮಾರಿ ಹೆಸರಿನಲ್ಲಿ ಭಾರತೀಯರ ವಿರುದ್ಧ ಸುಳ್ಳು ಸುದ್ದಿ ಹರಡಿದ ಪಾಕ್ ! ಈ ಬಗ್ಗೆ ರಾಜಕುಮಾರಿ ಹೇಳಿದ್ದೇನು…?

Pinterest LinkedIn Tumblr

ದುಬೈ: ಪಾಕಿಸ್ತಾನವು ಒಮಾನಿನ ರಾಜಕುಮಾರಿಯ ಹೆಸರಿನಲ್ಲಿ ನಕಲಿ ಟ್ವೀಟ್‌ ಖಾತೆ ತೆರೆದು ಭಾರತೀಯರ ವಿರುದ್ಧ ಹಗೆತನವನ್ನು ಮುಂದುವರೆಸಿದ್ದು, ಈ ನಕಲಿ ಟ್ವೀಟ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಒಮಾನಿನ ರಾಜಕುಮಾರಿ ಸ್ಪಷ್ಟನೆ ನೀಡಿದ್ದಾರೆ.

‘ಭಾರತದಲ್ಲಿ ಮುಸ್ಲಿಮರ ಕಿರುಕುಳ ನಿಲ್ಲದಿದ್ದರೆ, ಇಲ್ಲಿ ಕೆಲಸ ಮಾಡುವ ಹತ್ತು ಲಕ್ಷ ಹಿಂದೂಗಳನ್ನು ವಾಪಸ್ ಭಾರತಕ್ಕೆ ಕಳುಹಿಸಲಾಗುವುದು’ ಎಂದು ಒಮಾನಿನ ರಾಜಕುಮಾರಿಯ ಹೆಸರಿನಲ್ಲಿ ತೆರೆಯಲಾದ ನಕಲಿ ಟ್ವೀಟ್‌’ನಲ್ಲಿ ಬೆದರಿಕೆ ಹಾಕಲಾಗಿದೆ. ಇದರ ಹಿಂದೆ ಭಾರತೀಯರನ್ನು ಪಾಕ್ ಗುರಿಯಾಗಿಸಿದ್ದು, ಅದು ತನ್ನ ಚಾಳಿಯನ್ನು ಮುಂದುವರಿಸಿದೆ.

ನಕಲಿ ಟ್ವೀಟ್ ಖಾತೆ ಸೃಷ್ಟಿಸಿರುವುದರ ಹಿಂದೆ ಪಾಕ್ ಸೇನೆಯ ಕೈವಾಡವಿದೆ ಎನ್ನಲಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಭಾರತೀಯರನ್ನು ಕೆಣಕುವ ಉದ್ದೇಶದಿಂದಲೇ ಈ ನಕಲಿ ಖಾತೆ ತೆರೆಯಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಒಮಾನಿನ ರಾಜಕುಮಾರಿ ಮೋನಾ ಬಿಂತ್ ಫಹದ್ ಅಲ್ ಸೈದ್ ‘ತನ್ನ ಹೆಸರಿನ ಈ ನಕಲಿ ಖಾತೆಗೂ ತನಗೂ ಸಂಬಂಧ ಇಲ್ಲ. ಇದು ಕಿಡಿಗೇಡಿಗಳು ಸೃಷ್ಟಿಸಿರುವ ಸಂಚು’ ಎಂದಿದ್ದಾರೆ.

ರಾಜಕುಮಾರಿ ಹೇಳಿದ್ದೇನು…?
ಒಮಾನ್ ರಾಜಕುಮಾರಿ ಮೋನಾ ಬಿಂತ್ ಫಹದ್ ಅಲ್ ಸೈದ್ ಈ ಬಗ್ಗೆ ಹೇಳಿಕೆ ನೀಡಿದ್ದು, “ನನ್ನ ನಕಲಿ ಖಾತೆಯ ಮೂಲಕ ವಿವಾದಿತ ಪೋಸ್ಟ್ ಅನ್ನು ಪ್ರಕಟಿಸಲಾಗಿದೆ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ. ಇಂತಹ ವಿಷಯಗಳು ಒಮಾನಿ ಸಮಾಜಕ್ಕೆ ಸ್ವೀಕಾರಾರ್ಹವಲ್ಲ. ನಾನು socialhhmonaalsaid (Instagram) ಮತ್ತು @MonaFahad13 (Twitter ) ಮೂಲಕ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಅಸ್ತಿತ್ವದಲ್ಲಿದ್ದೇನೆ ಎಂದು ಖಚಿತಪಡಿಸಿದ್ದಾರೆ.

Comments are closed.