ಆರೋಗ್ಯ

ಮದ್ಯದ ಅಂಗಡಿಗಳಲ್ಲಿ ಕಳ್ಳತನ ನಡೆಯದಂತೆ ನಿಗಾ ವಹಿಸಲು ಅಬಕಾರಿ ಉಪ ಆಯುಕ್ತರ ಸೂಚನೆ

Pinterest LinkedIn Tumblr

ಉಡುಪಿ: ಕೋವಿಡ್-19 ತಡೆಗಟ್ಟಲು ಜಿಲ್ಲೆಯಾದ್ಯಂತ ಈಗಾಗಲೇ ಎಲ್ಲಾ ಮದ್ಯದಂಗಡಿಗಳನಮ್ನು ಮುಚ್ಚಲಾಗಿದ್ದು, ಏಪ್ರಿಲ್ 14 ರ ವರಗೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಜನ ಸಂಚಾರ ಇಲ್ಲವಾಗಿದ್ದು ಮದ್ಯದ ಅಂಗಡಿಗಳಲ್ಲಿ ಕಳ್ಳತನ ನಡೆಯುವ ಸಾದ್ಯತೆಗಳಿದ್ದು, ಈಗಾಗಲೇ ಕುಂದಾಪುರ ತಾಲೂಕಿನ ಗೋಳಿಯಂಗಡಿ ಸಮೀಪದ ಕನಕ ಬಾರ್ ನಲ್ಲಿ ಕಳ್ಳತನಕ್ಕೆ ವಿಫಲ ಯತ್ನ ಮತ್ತು ಕಾಪು ತಾಲೂಕಿನ ಶಕ್ತಿ ಬಾರ್ ನಲ್ಲಿ ಕಳ್ಳತನ ನಡೆದಿದೆ.

(ಸಾಂದರ್ಭಿಕ ಚಿತ್ರ)

ಆದ್ದರಿಂದ ಜಿಲ್ಲೆಯಲ್ಲಿ ಮದ್ಯದಂಗಡಿಗಳ ಕಳ್ಳತನ ತಡೆಯಲು , ಅಬಕಾರಿ ಇಲಾಖೆಯಿಂದ ಮದ್ಯದಂಗಡಿಗಳ ಮೇಲೆ ಗಸ್ತು ಸಮಯದಲ್ಲಿ ಸೂಕ್ತ ನಿಗಾವಹಿಸಲಾಗುತ್ತಿದ್ದು, ಮದ್ಯದ ಸನ್ನದುದಾರರು ಸಹ ತಮ್ಮ ಸನ್ನದಿನ ಬಗ್ಗೆ ನಿಗಾವಹಿಸಿ ಯಾವುದೇ ಅಕ್ರಮ ಹಾಗೂ ಕಳ್ಳತನ ನಡೆಯದಂತೆ ನೋಡಿಕೊಳ್ಳಲು ಸಂಪೂರ್ಣ ಜವಾಬ್ದಾರರಾಗಿದ್ದು, ಈ ಬಗ್ಗೆ ಜಾಗೃತರಾಗಿರಲು ಹಾಗೂ ಸದರಿ ಮದ್ಯದ ಸನ್ನದಿಗೆ ಭದ್ರತೆ ಒದಗಿಸುವ ದೃಷ್ಠಿಯಿಂದ ಭದ್ರತಾ ಸಿಬ್ಬಂದಿಗಳನ್ನು ನೇಮಿಸುವ ಸಲುವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ , ಎಲ್ಲಾ ಸನ್ನದುದಾರರಿಗೆ , ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

Comments are closed.