ರಾಷ್ಟ್ರೀಯ

ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗೆ ಯಾವ ಯಾವ ಔಷಧಿಗಳನ್ನು ಬಳಸಲಾಗುತ್ತಿದೆ ಗೊತ್ತೇ?

Pinterest LinkedIn Tumblr


ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗೆ ಯಾವ ಔಷಧಿಯನ್ನು ಬಳಸಲಾಗುತ್ತಿದೆ ನಿಮಗೆ ತಿಳಿದಿದೆಯೇ?

Hydroxychloroquine!!
ಈ ಔಷಧಿಯ ಹೆಸರನ್ನು ನೀವು ಇತ್ತೀಚಿಗೆ ವೃತ್ತಪತ್ರಿಕೆಗಳಲ್ಲಿ ದಿನನಿತ್ಯ ಓದುತ್ತಿರಬಹುದು. ಆದರೆ, ಕೇವಲ ಇದೊಂದೇ ಔಷಧಿಯನ್ನು ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿಲ್ಲ. ಈ ಔಷಧಿಯನ್ನು ಆಟೋಇಮ್ಯೂನ್ ಡಿಸ್ ಆರ್ಡರ್ ಅಂದರೆ ರುಮೆಟಾಯಿಡ್ ಅರ್ಥರೈಟಿಸ್ ಹಾಗೂ ಲೂಪಸ್ ನ ಚಿಕಿತ್ಸೆಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.

ಎರಡನೇ ಔಷಧಿಯ ಹೆಸರು ಕ್ಲೋರೋಕ್ವಿನ್!!!… ಈ ಔಷಧಿಯನ್ನು ಮೇಲೆರಿಯಾ ಕಾಯಿಲೆಯ ಚಿಕಿತ್ಸೆಗಾಗಿ ಬಳಸಲಾಗುತ್ತದೆ.

ಹಾಗಾದರೆ ಬನ್ನಿ ಅಮೇರಿಕಾ ಹಾಗೂ ಬ್ರೆಜಿಲ್ ಗಳಂತಹ ದೇಶಗಳು ಈ ಔಷಧಿಗಾಗಿ ಭಾರತದ ಮೇಲೆ ಏಕೆ ಅವಲಂಭಿಸಿದೆ ಎಂಬುದನ್ನು ತಿಳಿಯೋಣ.

ಮಲೇರಿಯಾ ಕಾಯಿಲೆ ಭಾರತದಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತದೆ. ಯುರೋಪ್ ದೇಶಗಳಾಗಲಿ ಅಥವಾ ಅಮೇರಿಕಾ, ಅಲ್ಲಿ ಮಲೇರಿಯಾ ಗಂಭೀರ ಸಮಸ್ಯೆ ಅಲ್ಲ. ಹೀಗಾಗಿ ಅಲ್ಲಿ ಈ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುವುದಿಲ್ಲ ಹಾಗೂ ಈ ಔಷಧಿಗಳಿಗೆ ಅಲ್ಲ ಸಾಮಾನ್ಯವಾಗಿ ಬೇಡಿಕೆ ಕಡಿಮೆ.

ಆದರೆ, ಇದೀಗ ಕೊರೊನಾ ವೈರಸ್ ರೋಗಿಗಳು ಈ ಔಷಧಿಯಿಂದ ಗುನವಾಗುತ್ತಿದ್ದಾರೆ. ಹೀಗಾಗಿ ಈ ಎರಡೂ ಔಷಧಿಗಳಿಗೆ ಭಾರಿ ಬೇಡಿಕೆ ನಿರ್ಮಾಣವಾಗಿದೆ. ಭಾರತದಲ್ಲಿ ಈ ಔಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ ಸ್ಟಾಕ್ ಮಾಡಲಾಗುತ್ತದೆ. ಇದೇ ಕಾರಣದಿಂದ ಅಮೇರಿಕಾ, ಬ್ರೆಜಿಲ್ ಸೇರಿದಂತೆ ವಿಶ್ವದ ದೊಡ್ಡ ದೊಡ್ಡ ದೇಶಗಳು ಈ ಔಷಧಿಗಾಗಿ ಭಾರತದತ್ತ ಮುಖಮಾಡಿವೆ.

ಈ ಔಷಧಿಯ ಸ್ಟಾಕ್ ಎಷ್ಟಿದೆ
ಭಾರತದಲ್ಲಿ ಸಾಮಾನ್ಯವಾಗಿ ಈ ಔಷಧಿಗಳ ಸರಾಸರಿ ಬೇಡಿಕೆ ಎರಡೂವರೆ ಕೋಟಿಯಷ್ಟು ಇದೆ. ಇದಕ್ಕಾಗಿ ಭಾರತಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಗಳಲ್ಲಿ ಶೇ.70ರಷ್ಟು ಅಂದರೆ ಸುಮಾರು 40 ಮೆಟ್ರಿಕ್ ಟನ್ ಚೀನಾದಿಂದ ಬರುತ್ತದೆ. ಇದರಿಂದ ಭಾರತದಲ್ಲಿ ಸುಮಾರು 20 ಕೋಟಿಯಷ್ಟು ಔಷಧಿಗಳನ್ನು ಉತ್ಪಾದಿಸುತ್ತದೆ. ಸದ್ಯ ಭಾರತದ ಬಳಿ ಕಚ್ಚಾ ಸಾಮಗ್ರಿ ಹಾಗೂ ಔಷಧಿಗಳ ಸ್ಟಾಕ್ 5 ರಿಂದ 6 ತಿಂಗಳಿಗೆ ಸಾಕಾಗುವಷ್ಟು ಇದೆ.

ಚೀನಾ ಇದುವರೆಗೂ ಕೂಡ ಕಚ್ಚಾ ಸಾಮಗ್ರಿಗಳನ್ನು ಹಾಗೂ ಅವಶ್ಯಕ ಕೆಮಿಕಲ್ ಗಳನ್ನು ರಫ್ತು ಮಾಡುತ್ತಲೇ ಇದೆ. ಇದರ ಅರ್ಥ ಭಾರತ ಇದುವರೆಗೂ ಕೂಡ ಈ ಔಷಧಿಯನ್ನು ರಫ್ತು ಮಾಡುವ ಸ್ಥಿತಿಯಲ್ಲಿಯೇ ಇದೆ.

ಈ ಔಷಧಿ prophylaxis ರೀತಿ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದಲೂ ಕೂಡ ಈ ಔಷಧಿ ಭಾರಿ ಮಹತ್ವ ಪಡೆದುಕೊಂಡಿದೆ. ಇದರರ್ಥ ಕೊರೊನಾ ವೈರಸ್ ನ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಟೆಸ್ಟ್ ನಡೆಸುವ ಸಿಬ್ಬಂದಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಈ ಔಷಧಿಯನ್ನು ನೀಡಲಾಗುತ್ತದೆ ಮತ್ತು ಅವರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ತಗ್ಗುತ್ತದೆ.

ಈ ಎರಡೂ ಔಷಧಿಗಳನ್ನು ಹೊರತುಪಡಿಸಿ ಈ ವೈರಸ್ ಸೋಂಕಿಗೆ ಬಳಕೆಯಾಗುತ್ತಿರುವ ಮೂರನೇ ಔಷಧಿ ಎಂದರೆ ಅದು ಒಸೆಲ್ಟಿಮೀರ್. ಮಾರುಕಟ್ಟೆಯಲ್ಲಿ ಇದನ್ನು ಟ್ಯಾಮಿ ಫ್ಲೂ ಹೆಸರಿನಡಿ ಮಾರಾಟವಾಗುತ್ತದೆ. ಭಾರತದಲ್ಲಿ ಈ ಮೊದಲೂ ಕೂಡ ಸ್ವೈನ್ ಫ್ಲೂ ಚಿಕಿತ್ಸೆಗಾಗಿ ಈ ಔಷಧಿಯನ್ನು ಬಳಸಲಾಗಿದೆ. ಆದರೆ, ಇದುವರೆಗೆ ಕೊರೊನಾ ವೈರಸ್ ಗೆ ಯಾವುದೇ ಔಷಧಿ ಇಲ್ಲವಾದ್ದರಿಂದ, ಈ ಎಲ್ಲ ಆಂಟಿ-ವೈರಲ್ ಔಷಧಿಗಳನ್ನು ಬಳಕೆ ಮಾಡಲಾಗುತ್ತಿದೆ.

Comments are closed.