ಆರೋಗ್ಯ

ಪ್ರಾಮಾಣಿಕತೆಗೆ, ಪ್ರೀತಿಗೆ ಮತ್ತು ಶಿಸ್ತಿಗೆ ಮಹತ್ವ ನೀಡಲು ಈ ಪ್ರಾಣಿಯಿಂದ ಮಾತ್ರ ಸಾಧ್ಯ

Pinterest LinkedIn Tumblr

ಪ್ರಾಮಾಣಿಕತೆಗೆ, ಪ್ರೀತಿಗೆ ಮತ್ತು ಶಿಸ್ತಿಗೆ ಮನುಷ್ಯನಿಗಿಂತ ಹೆಸರಾದ ಪ್ರಾಣಿ ಎಂದರೆ ನಾಯಿ. ಹಲವು ವಿಜ್ಞಾನಿಗಳು ನಾಯಿಗಳ ಮೇಲೆ ಹಲವಾರು ಅಧ್ಯಯನಗಳನ್ನು ನಡೆಸಿದ್ದಾರೆ. ಅವರ ಪ್ರಕಾರ ಸಾಕು ನಾಯಿಗಳನ್ನು ಸಾಕಿದವರು ತಮ್ಮ ಸಂತೋಷ ಮತ್ತು ದುಃಖಗಳನ್ನು ಸಹ ಹಂಚಿಕೊಳ್ಳುತ್ತಾರೆ. ನಿಮ್ಮ ಬಳಿ ಒಂದು ನಾಯಿ ಇದ್ದರೆ ನೀವು ಯಾವತ್ತಿಗೂ ಒಂಟಿ ಎಂಬ ಭಾವನೆಯನ್ನು ಹೊಂದುವುದಿಲ್ಲ ಎಂದು ಎಂಬುದು ಜಗತ್ತಿಗೆ ಗೊತ್ತಿರುವ ಸತ್ಯ. ಹಾಗೂ ತಜ್ಞರ ಅಭಿಪ್ರಾಯಕೂಡ ಹೌದು.

ಈ ಶ್ವಾನಗಳು ಮನೆಯಲ್ಲಿದ್ದರೆ ಕಾವಲುಗಾರ ಬೇಕಾಗಿಲ್ಲ ವಾಸ್ತವ ಏನಂದರೆ ನಾಯಿಗಳು ಮಾನವರ ಒಳ್ಳೆಯ ಮಿತ್ರರು ಸಹ ಹೌದು. ನಾಯಿಗಳಿಗೆ ಮನುಷ್ಯರ ಭಾವನೆಗಳು ಮತ್ತು ಮೂಡ್ ಚೆನ್ನಾಗಿ ಅರ್ಥವಾಗುತ್ತವೆ. ಅವುಗಳು ನಿಮ್ಮನ್ನು ಖುಷಿಯಾಗಿ ಇರಿಸಲು ಸಾಕಷ್ಟು ಶ್ರಮಪಡುತ್ತವೆ. ಒಮ್ಮೆ ನೀವು ನಾಯಿಯ ಜೊತೆಗೆ ಪಳಗಲು ಮತ್ತು ಜೀವಿಸಲು ಆರಂಭಿಸಿದರೆ ಸಾಕು, ನೀವು ಪ್ರೀತಿಯ ಅರ್ಥಕ್ಕೆ ಹೊಸ ವ್ಯಾಖ್ಯಾನವನ್ನು ಬರೆಯಲು ಆರಂಭಿಸುತ್ತೀರಿ. ನಾಯಿಗಳು ತಮ್ಮ ಯಜಮಾನರಿಂದ ಹೆಚ್ಚಿಗೆ ಏನನ್ನು ಬಯಸುವುದಿಲ್ಲ. ಆದರು ಅವುಗಳು ಅನ್ನ ಹಾಕಿದ ತನ್ನ ಧಣಿಗೆ ಪ್ರಾಮಾಣಿಕವಾಗಿರುತ್ತದೆ. ಪ್ರಪಂಚದಲ್ಲಿ ಮನುಷ್ಯರಿಗೆ ಅತಿ ಹೆಚ್ಚು ಬೆಲೆ ನೀಡುವ ಪ್ರಾಣಿ ಎಂದರೆ ಅದು ನಾಯಿ ಮಾತ್ರ.

ನಾಯಿಗಳಲ್ಲಿರುವ ಕುತೂಹಲಕಾರಿ ಸಂಗತಿ:
1 ನಾಯಿಯ ಮೂಗು ನಿಮಗಿಂತ 10,000 ಪಟ್ಟು ಶಕ್ತಿಶಾಲಿ. ಆದ್ದರಿಂದಲೇ ನಾಯಿಗಳು ವಾಸನೆಯಿಂದಲೇ ಏನನ್ನು ಬೇಕಾದರು ಕಂಡು ಹಿಡಿಯುತ್ತವೆ.
2 ನಾಯಿಯ ಡಿಎನ್‌ಎ ಮತ್ತು ಬೂದು ತೋಳದ ಡಿಎನ್‌ಎ ಎರಡೂ ಒಂದೇ ರೀತಿ ಇರುತ್ತದೆಯಂತೆ. ಆದ್ದರಿಂದಲೇ ಕೆಲವೊಂದು ನಾಯಿಯ ತಳಿಗಳು ತೋಳಗಳಂತೆ ಇರುತ್ತವೆ.
3 ನಾಯಿಯು ಸಹ ಮನುಷ್ಯರಂತೆ ಬೆವರುತ್ತದೆ. ಆದರೆ ನಾಯಿಯು ಕೇವಲ ಮೂಗು ಮತ್ತು ಪಾದಗಳಲ್ಲಿ ಮಾತ್ರ ಬೆವರುತ್ತದೆ.
4 ಒಮ್ಮೊಮ್ಮೆ ನಾಯಿಗಳು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತವೆ
5 ಕೆಲವೊಂದು ಅಧ್ಯಯನಗಳ ಪ್ರಕಾರ ನಾಯಿಯು ಸುಮಾರು 30,000 ವರ್ಷಗಳ ಹಿಂದೆಯೇ ಮಾನವರ ಉತ್ತಮ ಮಿತ್ರನಾಗಿ ಗುರುತಿಸಿಕೊಂಡಿತು ಎಂದು ತಿಳಿದುಬಂದಿದೆ.
6 ಡೇಟಿಂಗ್ ಸಮೀಕ್ಷೆಯ ಪ್ರಕಾರ ಯಾವ ಗಂಡಸು ನಾಯಿಯನ್ನು ಮುದ್ದಾಗಿ ಸಾಕಿರುತ್ತಾನೆಯೋ, ಆತನನ್ನು ಹೆಂಗಸರು ಇಷ್ಟಪಡುತ್ತಾರಂತೆ
7 ಒಂದು ವೇಳೆ ನಾಯಿಗೆ ಚಾಕೊಲೇಟ್ ಅನ್ನು ನೀಡಿದರೆ, ನಾಯಿಯ ಆರೋಗ್ಯ ಹಾಳಾಗುತ್ತದೆ. ಅಪರೂಪದ ಸಂದರ್ಭಗಳಲ್ಲಿ ನಾಯಿ ಇದರಿಂದ ಮರಣವನ್ನು ಸಹ ಹೊಂದಬಹುದು
8 ನಾಯಿಗಳು ಸಹ ಬುದ್ಧಿವಂತ ಪ್ರಾಣಿಗಳು ಎಂಬುದರಲ್ಲಿ ಸಂಶಯವಿದೆಯೇ? ಅವುಗಳು ನಿಮ್ಮ ಎರಡು ವರ್ಷದ ಮಗುವಿನಂತೆ, ಸುಮಾರು ನೂರು ಪದಗಳನ್ನು ಅರ್ಥ ಮಾಡಿಕೊಳ್ಳಬಲ್ಲವು.

Comments are closed.